ನಮ್ಮೂರಲ್ಲಿ ಟಾಟಾ ಮಾಂಝಾ ಕ್ಲಬ್ ಕ್ಲಾಸ್ ಸೆಡಾನ್ ಲಾಂಚ್

Posted By:

ಬೆಂಗಳೂರು: ಕರ್ನಾಟಕದ ಕಾರು ಗ್ರಾಹಕರಿಗೆ ಟಾಟಾ ಮೋಟಾರ್ಸ್ ಮತ್ತೊಂದು ಸಿಹಿ ಸುದ್ದಿ ಬಿತ್ತರಿಸಿದ್ದು, ಮಾಂಝಾ ಕ್ಲಬ್ ಕ್ಲಾಸ್ ಸೆಡಾನ್ ಕಾರನ್ನು ರಾಜ್ಯದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಈ ಸ್ಪೆಷಲ್ ಆವೃತ್ತಿಯು 90 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ಹಾಗೂ ಸಫೈರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಕಂಪನಿ ಪ್ರಾದೇಶಿಕ ವ್ಯವಸ್ಥಾಪಕ (ದಕ್ಷಿಣ) ಪ್ರಶಾಂತ್ ಸಿಬಲ್ ಈ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 21.02 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಹಾಗೆಯೇ ಸಫೈರ್ ಪೆಟ್ರೋಲ್ ಎಂಜಿನ್ ಲೀಟರ್‌ಗೆ 13.7 ಕಿಲೋ ಮೀಟರ್ ಇಂಧನ ಕ್ಷಮತೆ ನೀಡಲಿದೆ.

To Follow DriveSpark On Facebook, Click The Like Button
ದರ ಮಾಹಿತಿ:
  • ಸಫೈರ್ ಪೆಟ್ರೋಲ್ ಎಂಜಿನ್ ದರ: 5.69 ಲಕ್ಷ ರು.
  • ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ ದರ: 6.48 ಲಕ್ಷ ರು.

(ಎಕ್ಸ್ ಶೋರೂಂ ಬೆಂಗಳೂರು)

ವಾರಂಟಿ: ಇದರ ಜತೆ 75 ಸಾವಿರ ಕಿಲೋ ಮೀಟರ್ ಹಾಗೂ ಎರಡು ವರ್ಷಗಳ ವಾರಂಟಿಯು ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಕಾರಿಗೆ ಲಭಿಸಲಿದೆ.

ಮಾಂಝಾ ಕ್ಲಬ್ ಕ್ಲಾಸ್ ಅಡಿಷನ್ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಕಿಕ್ಕಿಸಿ...

English summary
Tata Motors today announced the launch of its new car, Manza, a club class sedan in Karnataka. 
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark