ಟಾಟಾದಿಂದ ಮಾರುತಿ ಎರ್ಟಿಗಾ ಎದುರಾಳಿ ಕಾರು

ಮಾರುತಿ ಸುಜುಕಿ ಪಾಲಿಗೆ ಎರ್ಟಿಗಾ ಗೇಮ್ ಚೇಂಜರ್. ಕಂಪನಿಯ ಸಣ್ಣಕಾರುಗಳಿಗೆ ಬೇಡಿಕೆ ಇಳಿಮುಖವಾದ ಸಂದರ್ಭದಲ್ಲಿ ಎರ್ಟಿಗಾ ಆಗಮಿಸಿತ್ತು. ಎರ್ಟಿಗಾ ಕಾರಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ.

ಇದೀಗ ಎರ್ಟಿಗಾ ಎಂಪಿವಿ, ಇತರ ಕಾರು ಕಂಪನಿಗಳಗೆ ಪ್ರೇರಣೆ ನೀಡುತ್ತಿರುವಂತಿದೆ. ಎರ್ಟಿಗಾಕ್ಕೆ ಪೈಪೋಟಿ ನೀಡುವಂತಹ ಕಾರುಗಳನ್ನು ಪರಿಚಯಿಸಲು ಕಂಪನಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ.

ಡ್ರೈವ್ ಸ್ಪಾರ್ಕ್ ಮೂಲಗಳು ನೀಡಿದ ಮಾಹಿತಿ ಪ್ರಕಾರ ಟಾಟಾ ಮೋಟರ್ಸ್ ಕೂಡ ಎರ್ಟಿಗಾ ಪ್ರತಿಸ್ಪರ್ಧಿ ಕಾರು ನೀಡುವ ಕುರಿತು ಆಲೋಚಿಸುತ್ತಿದೆಯಂತೆ. ಕಂಪನಿಯು ಎರ್ಟಿಗಾ ಕಾರನ್ನು ಟೆಸ್ಟ್ ಮಾಡಿ ನೋಡುತ್ತಿದೆ ಎಂದು ಮೂಲಗಳು ಹೇಳಿವೆ.

ಕಾರು ಕಂಪನಿಗಳು ಪ್ರತಿಸ್ಪರ್ಧಿ ಕಂಪನಿಯ ಕಾರು ಖರೀದಿಸಿ ಅದನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಟೆಸ್ಟ್ ಮಾಡಿ ನೋಡುತ್ತವೆ. ಟಾಟಾ ಮೋಟರ್ಸ್ ಕೂಡ ಇದೇ ರೀತಿ ಎರ್ಟಿಗಾ ಕಾರನ್ನು ಟೆಸ್ಟ್ ಮಾಡುತ್ತಿದೆ. ಈಗಾಗಲೇ ಟಾಟಾ ಮೋಟರ್ಸ್ ಕಂಪನಿಯು ಮಾರುತಿ ಡಿಜೈರನ್ನು ಟೆಸ್ಟ್ ಮಾಡಿರುವುದರಿಂದ ಇದನ್ನು ಅಲ್ಲಗೆಳೆಯುವಂತಿಲ್ಲ.

ಸ್ವಿಫ್ಟ್ ಫ್ಲಾಟ್ ಫಾರ್ಮಿನಲ್ಲಿ ಬಂದ ಎರ್ಟಿಗಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಎರ್ಟಿಗಾ ವಿಮರ್ಶೆ ಓದಿರಿ.

Most Read Articles

Kannada
English summary
Maruti Suzuki Ertiga is influencing other car makers too. Reports say Tata Motors is conducting extensive testing of the Ertiga in its research facility. Is this in preparation of development of its own Ertiga rival?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X