ಟಾಟಾ ಸಫಾರಿ ಸ್ಟ್ರೋಮ್ ಬುಕ್ಕಿಂಗ್ ಆರಂಭ

Posted By:

ಟಾಟಾ ಮೋಟರ್ಸ್ ಕಂಪನಿಯು ಪ್ರೀಮಿಯಂ ಎಸ್‌ಯುವಿ ಸಫಾರಿ ಸ್ಟ್ರೋಮ್ ಬುಕ್ಕಿಂಗ್ ಆರಂಭಿಸಿದೆ. ಕಂಪನಿಯ ಎಲ್ಲಾ ಶೋರೂಂಗಳಲ್ಲಿಯೂ ಬುಕ್ಕಿಂಗ್ ಸೌಲಭ್ಯ ಲಭ್ಯವಿರಲಿದೆ. ಕಂಪನಿಯು ಸಫಾರಿ ಸ್ಟ್ರೋಮ್ ಎಸ್ ಯುವಿಯನ್ನು ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ದೇಶದಲ್ಲಿ ಈಗ ಎಸ್‌ಯುವಿ ಭರಾಟೆ ಜೋರಾಗಿರುವುದರಿಂದ ಕಂಪನಿಯು ನೂತನ ಸಫಾರಿ ಸ್ಟ್ರೋಮ್ ಬುಕ್ಕಿಂಗ್ ಆರಂಭೀಸಿದೆ. ನೂತನ ಸಫಾರಿ ಸ್ಟ್ರೋಮಿಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟಾಟಾ ಸಫಾರಿ ವಾಹನವನ್ನು ಇಷ್ಟಪಡುವರು ಬೃಹತ್ ಸಂಖ್ಯೆಯಲ್ಲಿದ್ದಾರೆ.

To Follow DriveSpark On Facebook, Click The Like Button

ಸದ್ಯ ರಸ್ತೆಯಲ್ಲಿರುವ ಟಾಟಾ ಸಫಾರಿಯ ಪರಿಷ್ಕೃತ ಆವೃತ್ತಿಯಾಗಿದೆ. ಹೊಸ ಸಫಾರಿ ಸ್ಟ್ರೋಮ್, ಹಳೆಯ ಸಫಾರಿಗಿಂತ ಸಾಕಷ್ಟು ಆಕರ್ಷಕವಾಗಿದೆ. ಮಹೀಂದ್ರ ಎಕ್ಸ್ ಯುವಿ ಜೊತೆ ಇದು ನೇರ ಪೈಪೋಟಿ ನಡೆಸಲಿದೆ.

ಸಫಾರಿ ಸ್ಟ್ರೋಮ್ 2.2 ಲೀಟರಿನ ಡಿಕೊರ್ ಎಂಜಿನ್ ಹೊಂದಿರಲಿದೆ. ಇದು 140 ಹಾರ್ಸ್ ಪವರ್ ಮತ್ತು 320ಎನ್ಎಂ ಟಾರ್ಕ್ ಪವರ್ ನೀಡಲಿದೆ. ಇದು ಜಿ76 ಮಾರ್ಕ್ 2 ಹೆಸರಿನ ನೂತನ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಸಫಾರಿ ಸ್ಟ್ರೋಮ್ ದರ 6-9 ಲಕ್ಷ ರು. ಆಸುಪಾಸಿನಲ್ಲಿರಲಿರುವ ನಿರೀಕ್ಷೆಯಿದೆ

English summary
Tata Motors has opened bookings for its Safari Storme premium SUV across its showrooms in India. The new Safari Storme's price is expected to be slightly higher than the current model at between Rs.6 lakhs to Rs.9 lakhs.
Story first published: Tuesday, September 25, 2012, 9:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark