ಎಟಿಯೋಸ್, ಲಿವಾ: ಪೆಟ್ರೋಲ್ ಕಾರು ಮಾತ್ರ ರಫ್ತು

Posted By:
Toyota To Export Petrol Etios And Liva Only
ದೇಶದ ರಸ್ತೆಗೆ ಎಟಿಯೋಸ್ ಸೆಡಾನ್ ಮತ್ತು ಎಟಿಯೋಸ್ ಲಿವಾ ಕಾರುಗಳನ್ನು ಪರಿಚಯಿಸಿ ಹಲವು ಸಮಯ ಕಳೆದಿದೆ. ಈ ಎರಡೂ ಕಾರುಗಳಿಗೂ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಂಪನಿಯು ಡೀಸೆಲ್ ಆವೃತ್ತಿ ಪರಿಚಯಿಸಿದ ನಂತರ ಇವೆರಡು ಕಾರುಗಳು ನಿಜವಾದ ಯಶಸ್ಸು ಆರಂಭವಾಯಿತು ಎನ್ನಬಹುದು.

ಇದೀಗ ಜಪಾನಿನ ಕಂಪನಿಯು ಇವೆರಡು ಕಾರುಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಲು ಯೋಜಿಸಿದೆ. ಇದರಲ್ಲಿ ಏನಿದೆ ವಿಶೇಷ ಎಂದು ಕೇಳಬಹುದು. ಅಸಲಿಗೆ ಇವೆರಡು ಕಾರುಗಳನ್ನು ಭಾರತದ ರಸ್ತೆಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೂ ಜಾಗತಿಕ ಮಾರುಕಟ್ಟೆಯಿಂದಲೂ ಮೆಚ್ಚುಗೆ ಪಡೆಯಲು ಇವು ಯಶಸ್ವಿಯಾಗಿವೆ.

ಮತ್ತೊಂದು ವರದಿಯ ಪ್ರಕಾರ ಟೊಯೊಟಾ ಕಂಪನಿಯು ರಫ್ತು ವಹಿವಾಟಿಗಾಗಿ ಎಂಟ್ರಿ ಲೆವೆಲ್ ಕಾರುಗಳನ್ನು ಉತ್ಪಾದಿಸುತ್ತದಂತೆ. ಈ ಕಾರಿನ ವಿನ್ಯಾಸ ಮತ್ತು ಫೀಚರುಗಳು ಭಾರತದಲ್ಲಿರುವ ಎಟಿಯೋಸ್ ಮತ್ತು ಲಿವಾದಂತೆ ಇರಲಿದೆ. ಆದರೆ ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ, ಅಲ್ಲಿನ ರಸ್ತೆಗೆ ಅನುಗುಣವಾಗಿ ಸಣ್ಣಪುಟ್ಟ ಬದಲಾವಣೆಗಳನ್ನು ಕಂಪನಿ ಮಾಡುತ್ತಿದೆಯಂತೆ.

ಆದರೆ ರಫ್ತು ವ್ಯವಹಾರ ಏನಿದ್ದರೂ ಪೆಟ್ರೋಲ್ ಕಾರುಗಳಿಗಂತೆ. ಭಾರತದಲ್ಲಿ ಎಟಿಯೋಸ್ ಮತ್ತು ಎಟಿಯೋಸ್ ಲಿವಾ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಇಲ್ಲಿ ಪೆಟ್ರೋಲ್ ಆವೃತ್ತಿಗಳ ಮಾರಾಟ ನಿಧಾನವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ಕಂಪನಿಯು ಪೆಟ್ರೋಲ್ ಕಾರುಗಳನ್ನು ರಫ್ತು ಮಾಡಲಿದೆ.

ಟೊಯೊಟಾ ಕಂಪನಿಯು ಆರಂಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಈ ಕಾರುಗಳನ್ನು ರಫ್ತು ಮಾಡಲು ಯೋಜಿಸಿದೆ. ಆದರೆ ಡೀಸೆಲ್ ಆವೃತ್ತಿಗಳನ್ನು ರಫ್ತು ಮಾಡುವ ಯಾವುದೇ ಯೋಜನೆ ಕಂಪನಿಗಿಲ್ಲವಂತೆ. ನಮ್ಮ ದೇಶದಲ್ಲಿ ಪೆಟ್ರೋಲ್ ದುಬಾರಿಯಾಗಿರುವಷ್ಟು ಜಾಗತಿಕ ಮಾರುಕಟ್ಟೆಯಲ್ಲಿ ಆಗದಿರುವುದು ಕೂಡ ಇದಕ್ಕೆ ಕಾರಣವಾಗಿದ್ದೀತು. (ಕನ್ನಡ ಡ್ರೈವ್‌ಸ್ಪಾರ್ಕ್)

English summary
Toyota has been planning to export Petrol Etios And Liva to other international markets. These two entry level cars are manufactured only in India as they were developed exclusively for the Indian car market.
Story first published: Tuesday, April 3, 2012, 10:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark