ಕಾರು ಸಾಲಕ್ಕೆ ಬೆಂಗ್ಳೂರಲ್ಲಿ ಟೊಯೊಟಾ ಬ್ಯಾಂಕ್

ದೇಶದಲ್ಲಿ ಸ್ವಂತ ಹಣಕಾಸು ವಿಭಾಗ ಸ್ಥಾಪಿಸುವ ಮೂಲಕ ದೇಶದಲ್ಲಿ ಹೊಸ ಮೈಲುಗಲ್ಲು ಸಾಧಿಸಲು ಟೊಯೊಟಾ ಇಂಡಿಯಾ ನಿರ್ಧರಿಸಿದೆ. ಟೊಯೊಟಾ ಫಿನಾನ್ಶಿಯಲ್ ಸರ್ವಿಸಸ್(ಟಿಎಫ್ಎಸ್) ಇಂಡಿಯಾ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಜೂನ್ ಐದರಿಂದ ಕಾರ್ಯಾರಂಭ ಮಾಡಲಿದೆ.

ಬ್ಯಾಂಕೇತರ ಹಣಕಾಸು ಸೇವೆ ವಿಭಾಗದಲ್ಲಿ ಕಂಪನಿಯು ಈ ಹಣಕಾಸು ಕಂಪನಿಗೆ ಅನುಮತಿ ಪಡೆದಿದೆ. ಇದು ಇದೇ ತಿಂಗಳ ಜೂನ್ ಐದರಿಂದ ಬೆಂಗಳೂರು ಮತ್ತು ದೆಹಲಿಯಲ್ಲಿ ವ್ಯವಹಾರ ಆರಂಭಿಸಲಿದೆ. ಟಿಎಫ್ಎಸ್ ಮುಖ್ಯ ಕಚೇರಿ ಬೆಂಗಳೂರಿನಲ್ಲಿರಲಿದ್ದು, ಕ್ರೆಡಿಟ್ ವ್ಯವಹಾರ ವಿಭಾಗವು ದೆಹಲಿಯಲ್ಲಿರಲಿದೆ.

ದೇಶದಲ್ಲಿ ಟೊಯೊಟಾ ಕಾರು ಖರೀದಿದಾರರಿಗೆ ಟಿಎಫ್ಎಸ್ ವಿಶೇಷ ಹಣಕಾಸು ಸಾಲ ಒದಗಿಸಲಿದೆ. ಇದಕ್ಕಾಗಿ ಟೊಯೊಟಾ ಹಣಕಾಸು ಸೇವೆ ವಿಭಾಗವು ಸುಮಾರು 260 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಮುಂದಿನ ವರ್ಷ ಈ ಸೇವೆಯೂ ಉಳಿದ ನಗರಗಳಿಗೂ ವಿಸ್ತರಿಸುವ ನಿರೀಕ್ಷೆಯಿದೆ.

ಟೊಯೊಟಾ ಹಣಕಾಸು ಸಂಸ್ಥೆಯ ವಿಶೇಷತೆ

* ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಟೊಯೊಟಾ ಗ್ರಾಹಕರು ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದು.

* ಕ್ವಿಕ್ ಅಪ್ರೂವಲ್: ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ನಂತರ 8 ಗಂಟೆಗಳಲ್ಲಿ ಸಾಲಕ್ಕೆ ಸಮ್ಮತಿ ದೊರಕುತ್ತದೆ.

* ಸರಳ ದಾಖಲೆಗಳು: ಅಂದರೆ ಪುಟಗಟ್ಟಲೆ ದಾಖಲೆ ಪತ್ರಗಳನ್ನು ಪಡೆಯುವ ಬದಲಾಗಿ ಸಾಲದ ಅಗ್ರಿಮೆಂಟ್, ಸಾಲದ ಪತ್ರಗಳನ್ನು ಸರಳಗೊಳಿಸಲಾಗಿದೆ.

* ಕಾರಿನ ಆನ್ ರೋಡ್ ದರದ ಶೇಕಡ 100ರಷ್ಟು ಸಾಲ ನೀಡಲಾಗುತ್ತದೆ.

ಇಷ್ಟು ಮಾತ್ರವಲ್ಲದೇ ಇನ್ನೂ ಹತ್ತು ಹಲವು ವಿಶೇಷತೆಗಳು ಈ ಸಾಲದಲ್ಲಿವೆ. ಸಾಲ ಪಡೆಯಲು ಇಚ್ಚಿಸುವರು ಜೂನ್ 5ರ ನಂತರ ಕಂಪನಿಯನ್ನು ಸಂಪರ್ಕಿಸಬಹುದು.

Most Read Articles

Kannada
English summary
Toyota India Launches Financial Services Bangalore and Delhi. Toyota Financial Services operations in India starting From 5th June 2012. Bangalore Headquarters for Financial Services.
Story first published: Friday, June 1, 2012, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X