ಬಿಡದಿ ಘಟಕದ ಮೇಲೆ 1400 ಕೋಟಿ ಹೂಡಿಕೆ: ಟೊಯೊಟಾ

Toyota Camry Assemble Bidari
ಬೆಂಗಳೂರು, ಏ.5: ಬಿಡದಿ ಘಟಕದ ಮೇಲೆ ಮತ್ತೆ 1400 ಕೋಟಿ ರುಪಾಯಿ ಹೂಡಿಕೆ ಮಾಡಲು ಜಪಾನಿನ ಟೊಯೊಟಾ ಮೋಟರ್ ಕಾರ್ಪೊರೇಷನ್(ಟಿಎಂಸಿ)ನ ಭಾರತದ ಅಂಗಸಂಸ್ಥೆ ಟೊಯೊಟಾ ಕಿರ್ಲೊಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್ ಯೋಜಿಸಿದೆ.

ಮಧ್ಯಮ ಶ್ರೇಣಿಯ ಐಷಾರಾಮಿ ಸೆಡಾನ್ ಮಾದರಿ ಕ್ಯಾಮ್ರಿ ಜೋಡಣೆ ಘಟಕವನ್ನು ಬಿಡದಲ್ಲೇ ಸ್ಥಾಪಿಸಲು ಟೊಯೊಟಾ ನಿರ್ಧರಿಸಿದೆ.

ಈ ಬಗ್ಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶ(ಮಾರ್ಕೆಟಿಂಗ್) ಸಂದೀಪ್ ಸಿಂಗ್, ಈ ವರೆಗೂ ಕ್ಯಾಮ್ರಿ ರಫ್ತು ಜೋರಾಗಿತ್ತು. ದಕ್ಷಿಣ ಆಫ್ರಿಕಾಗೆ ಇಟಿಯೋಸ್ ಕೂಡಾ ರಫ್ತು ಆಗುತ್ತಿದ್ದು, ಬೇಡಿಕೆ ಹೆಚ್ಚುತ್ತಿದೆ ಎಂದಿದ್ದಾರೆ.

ಜುಲೈ ತಿಂಗಳೊಳಗೆ ಕ್ಯಾಮ್ರಿ ಜೋಡಣೆ ಘಟಕ ಕಾರ್ಯಾರಂಭ ಮಾಡಲಿದೆ. ಈವರೆಗೂ ಸುಮಾರು 300 ವಾಹನಗಳನ್ನು ರಫ್ತು ಮಾಡಲಾಗಿದೆ. ಪ್ರಸಕ್ತ ವರ್ಷದ ಕೊನೆಗೆ ಡೀಲರ್ ಗಳ ಸಂಖ್ಯೆಯನ್ನು 173 ರಿಂದ 225ಕ್ಕೆ ಏರಿಕೆ ಮಾಡಲಾಗುವುದು.

ಟೊಯಾಟಾ ವಿಸ್ತರಣಾ ಯೋಜನೆಯ ಅಂಗವಾಗಿ 2013ರೊಳಗೆ ಸುಮಾರು 100,000 ವಾಹನ ಉತ್ಪಾದನಾ ಗುರಿ ಹೊಂದಲಾಗಿದೆ. ಮೊದಲ ಹಂತವಾಗಿ ಸುಮಾರು 898 ಕೋಟಿ ರು ಹೂಡಲಾಗುತ್ತದೆ. 310,000 ವಾಹನಗಳನ್ನು ಹೆಚ್ಚುವರಿಯಾಗಿ ಉತ್ಪಾದಿಸುವ ಗುರಿ ಹೊಂದಲಾಗಿದೆ.

ಇಂಜಿನ್ ಹಾಗೂ ಟ್ರಾನ್ಮಿಷನ್ ಘಟಕದ ಮೇಲೆ 500 ಕೋಟಿ ರು ಹೂಡಲಾಗುತ್ತದೆ. 2013ರ ಜನವರಿಯೊಳಗೆ ಎಲ್ಲಾ ಘಟಕಗಳು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ ಎಂದಿದ್ದಾರೆ.

ಟೊಯೊಟಾದ ಹೆಮ್ಮೆಯ ಇಟಿಯೋಸ್ ಕಾರು, ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನೆಯಾಗುತ್ತಿದ್ದು, ದಕ್ಷಿಣ ಆಫ್ರಿಕಾ ದೇಶದಲ್ಲಿ ಭಾರಿ ಬೇಡಿಕೆ ಹುಟ್ಟಿಸಿದೆ.

Most Read Articles

Kannada
English summary
Toyota Kirloskar Motor Pvt Ltd is planning to assemble mid-class luxury sedan Camry at Bidadi, Bangalore Unit. Sandeep Singh, deputy managing director (marketing) said an investment of around Rs 898 crore and investing around Rs 500 crore in engine and transmission facility will be made.
Story first published: Thursday, April 5, 2012, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X