ಟೊಯೊಟಾ ಬೇಸಿಗೆ ರಜಾ ಶಿಬಿರ ಶುರು

Posted By:

ಜಪಾನಿನ ಕಾರು ಕಂಪನಿ ಟೊಯೊಟಾ ಸಮ್ಮರ್ ಹಾಲಿಡೇ ಕ್ಯಾಂಪ್ ಆರಂಭಿಸಿದೆ. ಇದು ವಿಶೇಷ ಬೇಸಿಗೆ ಶಿಬಿರವಾಗಿದ್ದು, ನಿಮ್ಮ ಟೊಯೊಟಾ ಕಾರುಗಳಿಗೆ ಹಲವು ಸೇವೆಗಳು ದೊರಕಲಿದೆ. ಇಲ್ಲಿ ಕಾರುಗಳನ್ನು ಉಚಿತವಾಗಿ ಚೆಕಪ್ ಮಾಡಿಕೊಳ್ಳಬಹುದು. ಜೊತೆಗೆ ಬಿಡಿಭಾಗ ಮತ್ತು ಆಕ್ಸೆಸರಿಗಳನ್ನು ವಿನಾಯಿತಿ ದರಕ್ಕೆ ಖರೀದಿಸಬಹುದಾಗಿದೆ.

ಟೊಯೊಟಾ ಬೇಸಿಗೆ ರಜಾ ಶಿಬಿರವು ಏಪ್ರಿಲ್ 16ರಂದು ಆರಂಭವಾಗಿತ್ತು. ಟೊಯೊಟಾ ಕಾರು ಮಾಲೀಕರು ಈ ಶಿಬಿರದಲ್ಲಿ ಭಾಗವಹಿಸಬಹುದು. ಕಾರಿನ ಸುಮಾರು 20 ಪಾಯಿಂಟುಗಳನ್ನು ಉಚಿತವಾಗಿ ಕಂಪನಿ ಪರಿಶೀಲಿಸಲಿದೆ.

To Follow DriveSpark On Facebook, Click The Like Button

"ನಾವು ಕಳೆದ ವರ್ಷ ಸಹುನಾ ಬೇಸಿಗೆ ಶಿಬಿರ ಆರಂಭಿಸಿದ್ದೇವು. ಅದಕ್ಕೆ ಗ್ರಾಹಕರು ನೀಡಿದ ಅತ್ಯುತ್ತಮ ಪ್ರೋತ್ಸಾಹ ಮತ್ತು ಯಶಸ್ವಿಯಿಂದ ಪ್ರೇರಿತರಾಗಿ ಈ ವರ್ಷವೂ ಸಮ್ಮರ್ ಹಾಲಿಡೇ ಕ್ಯಾಂಪ್ ಆರಂಭಿಸಿದ್ದೇವೆ" ಎಂದು ಟೊಯೊಟಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.

"ಪ್ರಸಕ್ತ ವರ್ಷದ ಬೇಸಿಗೆ ಶಿಬಿರಕ್ಕೆ ಹೆಚ್ಚು ಗ್ರಾಹಕರು ಆಗಮಿಸುವ ನಿರೀಕ್ಷೆಯಿದೆ. ಈ ಕ್ಯಾಂಪ್ ಗ್ರಾಹಕರ ದೂರ ಪ್ರಯಾಣಕ್ಕೆ, ಸುರಕ್ಷಿತ ಪ್ರಯಾಣಕ್ಕೆ ಮತ್ತು ಆರಾಮದಾಯಕ ಪ್ರಯಾಣಕ್ಕೆ ಸಹಕರಿಸಲಿದೆ" ಎಂದು ಅವರು ಹೇಳಿದೆ.

ನಿಮ್ಮಲ್ಲಿ ಟೊಯೊಟಾ ಕಾರಿದ್ದರೆ, ಈ ಬಿಸಿಲ ಬೇಗೆಗೆ ಅದು ಯಾವ ರೀತಿ ಡ್ರೈವಿಂಗ್‌ಗೆ ನೆರವು ನೀಡುತ್ತದೆ ಎಂಬುದನ್ನು ಪರಿಶೀಲಿಸಲು ಹತ್ತಿರದ ಟೊಯೊಟಾ ಶೋರೂಂಗೆ ಹೋಗಿ ಚೆಕಪ್ ಮಾಡಿಸಿಕೊಳ್ಳಬಹುದು. ಇಲ್ಲಿಗೆ ಆಗಮಿಸುವ ಗ್ರಾಹಕರಿಗೆ ಕಂಪನಿಯು ವಿಶೇಷ ಉಡುಗೊರೆಗಳನ್ನೂ ನೀಡಲಿದೆಯಂತೆ.

English summary

 The Toyota Summer Holiday camp has been launched by the japanese carmaker. As the name suggests, Toyota will be offering several services during this special summer event. Toyota customers can avail a comprehensive free checkup of their cars and also buy spares and accessories at discounted prices.
Story first published: Tuesday, April 24, 2012, 15:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark