ಒಬಾಮ ಕಾರಿನಲ್ಲಿ ಒಂದು ಬ್ಯೂಟಿಫುಲ್ ರೈಡ್

By Super

ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಪುನರಾಯ್ಕೆಯಾಗಿದ್ದಾರೆ. ಇದರಂತೆ ಅಮೆರಿಕ ಅಧ್ಯಕ್ಷರು ಸಂಚರಿಸುವ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡ ಕಾರಿನ ಬಗ್ಗೆ ಮಾಹಿತಿ ನೀಡುವ ಪ್ರಯತ್ನವನ್ನು ಡ್ರೈವ್‌ಸ್ಪಾರ್ಕ್ ಮಾಡಿದೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪ್ರಯಾಣಿಸುವ ಕಾರಿನ ಹೆಸರು ಲಿಮೊಸಿನ್. ಇದು ಬುಲೆಟ್ ಫ್ರೂಫ್ ಸೇರಿದಂತೆ ಹತ್ತು ಹಲವು ರಕ್ಷಣಾತ್ಮಕ ಫೀಚರುಗಳನ್ನು ಹೊಂದಿದೆ. ಬನ್ನಿ ಬರಾಕ್ ಒಬಾಮಾ ಕಾರಿನ ವಿಶೇಷತೆಗಳ ಮೇಲೊಂದು ಸವಾರಿ ಮಾಡೋಣ.

ನಿಮಗೆ ಗೊತ್ತೆ? ಒಬಾಮಾ ಪ್ರಯಾಣಿಸುವ ಲಿಮೊಸಿನೆ ಕಾರಿನಂತಹ ಅಡ್ವಾನ್ಸಡ್ ತಂತ್ರಜ್ಞಾನದ ಕಾರು ಜಗತ್ತಿನಲ್ಲಿ ಬೇರೆ ಎಲ್ಲೂ ಇಲ್ಲ. ಇದು ಕಸ್ಟಮೈಸ್ಡ್ ಕಾರು. ರಾಕೇಟ್ ಗ್ರೇನೆಡ್ ದಾಳಿಯಿಂದಲೂ ಪಾರಾಗುವ ಶಕ್ತಿ ಇದಕ್ಕಿದೆ.

ಲಿಮೊ ಕಾರಿಗೆ ಶಾರ್ಟ್ ಮತ್ತು ಸ್ವೀಟಾಗಿ "ದಿ ಬೀಸ್ಟ್" ಎಂದು ಹೆಸರಿಡಲಾಗಿದೆ. ಷೆವರ್ಲೆ ಕಂಪನಿಯು ಈ ಕಾರನ್ನು ಉತ್ಪಾದಿಸಿದೆ. ಇದು ಯಾವುದೋ ಒಂದು ಮಾಡೆಲ್ ಕಾರಲ್ಲ. ಎಲ್ಲಾ ವಾಹನಗಳ ಪ್ರಮುಖ ಭಾಗಗಳನ್ನು ಬಳಸಿ ಮಾಡಿರುವ ಕಸ್ಟಮೈಸ್ಡ್ ಕಾರು. ಇದರಲ್ಲಿ ಟ್ರಕ್, ಲಾರಿಯ ಬಿಡಿಭಾಗಗಳೂ ಇರಬಹುದು.

ಗನ್, ಗ್ರೇನೆಡ್, ಬಾಂಬ್ ದಾಳಿಗಳಿಂದ ಪಾರಾಗುವಂತಹ ಬುಲೆಟ್ ಪ್ರೂಫ್ ಕಿಟಕಿಗಳನ್ನು ಇದು ಹೊಂದಿದೆ. ಇದರ ಬಾಡಿ ಎಂಟು ಇಂಚು ದಪ್ಪದ ರಕ್ಷಣಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಕಾರಿನ ಟೈರ್ ಬ್ಲಾಸ್ಟ್ ಆದರೂ ವೀಲುಗಳ ಮೂಲಕವೇ ಸಾಗಬಹುದು.

ಲಿಮೊ ಕಾರಿನ ತೂಕ ಮೂರು ಟನ್. ಇದರ ಡೋರಿನ ತೂಕವೇ ಬೋಯಿಂಗ್ 757 ವಿಮಾನದ ಕ್ಯಾಬಿನ್ ಡೋರಿನ ತೂಕದಷ್ಟಿದೆಯಂತೆ. ಗಂಟೆಗೆ ಇದು ಗರಿಷ್ಠ 60 ಮೈಲು ವೇಗದಲ್ಲಿ ಸಾಗುತ್ತದೆ. ಪರಿಣಿತ ಸಿಐಎ ಏಜೆಂಟ್ ಈ ಕಾರಿಗೆ ಚಾಲಕ.

ತುರ್ತು ಅಗತ್ಯಕ್ಕೆ ಕಾರಿನೊಳಗೆ ಬರಾಕ್ ಒಬಾಮಾರ ಬ್ಲಡ್ ಗ್ರೂಪಿನ ರಕ್ತ ಸಂಗ್ರಹವಿದೆ. ಒಂದು ಬಟನ್ ಕ್ಲಿಕ್ ಮಾಡಿದರೆ ಡೋರ್ ಸೈಡಿನಿಂದ ಲ್ಯಾಪ್ ಟಾಪ್ ಹೊರಬರುತ್ತದೆ. ಕಾರಿನೊಳಗೆ ಸ್ಯಾಟಲೈಟ್ ಫೋನಿದೆ. ವೇಟ್ ಹೌಸಿಗೆ ನೇರ ಸಂಪರ್ಕವಿರುವ ಮತ್ತೊಂದು ಫೋನ್ ಕಾರಿನೊಳಗೆ ಇದೆ.

ಕಾರಿನೊಳಗೆ ಬೋರಾಗದೆ ಇರುವಂತೆ ಐಪ್ಯಾಡ್ ಸೇರಿದಂತೆ ಎಂಟರ್ ಟೇನ್ ಮೆಂಟ್ ಸಿಸ್ಟಮ್ ಇದೆ. ಯಾವುದೇ ಸಮಯದಲ್ಲೂ ಪಾರಾಗುವಂತೆ ಈ ಕಾರು 180 ಡಿಗ್ರಿಯಲ್ಲಿ ಟರ್ನ್ ಆಗುವ ಸಾಮರ್ಥ್ಯ ಹೊಂದಿದೆ.

ಇದು ಷೆವರ್ಲೆ ಕಂಪನಿಯ ಕ್ಯಾಡಿಲಾಕ್ ಕಾರಿನ ಮೋಡಿಪೈಡ್ ಕಾರು. ಷೆವರ್ಲೆ ಕೊಡೆಯೆಕ್ ಕಮರ್ಷಿಯಲ್ ಟ್ರಕ್ ನ ಚಾಸೀಸ್ ಮತ್ತು ಡ್ರೈವ್ ಲೈನನ್ನು ಈ ಕಾರಿಗೆ ಬಳಸಲಾಗಿದೆ.

ಷೆವರ್ಲೆ ಕಂಪನಿಯ ಎಲ್ಲಾ ವಾಹನಗಳ ಬಿಡಿಭಾಗಗಳು ಈ ಕಾರಿನಲ್ಲಿ ಇರುವಂತಿದೆ. ಉದಾಹರಣೆಗೆ ಕ್ಯಾಡಿಲಾಕ್ ಎಸ್ಕಲೆಡ್ ಕಾರಿನ ಹೆಡ್ ಲೈಟ್ಸ್, ಸೈಡ್ ಮಿರರ್ ಮತ್ತು ಡೋರ್ ಹ್ಯಾಂಡಲ್ ಇದರಲ್ಲಿದೆ. ಮಿಣುಕು ದೀಪುಗಳನ್ನು ಕ್ಯಾಡಲಿಕ್ ಎಸ್ ಟಿಎಸ್ ಸೆಡಾನ್ ಕಾರಿನಿಂದ ಪಡೆಯಲಾಗಿದೆ.

ಭದ್ರತೆಯ ಕಾರಣದಿಂದ ಬರಾಕ್ ಒಬಾಮಾ ಬಳಸುವ ಲಿಮೊ ಕಾರಿನ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಕಾರಲ್ಲಿ ವಿಶೇಷ ನೈಟ್ ವಿಷನ್ ಸಿಸ್ಟಮ್ ಇದೆ. ಜೈವಿಕ ರಾಸಾಯನಿಕ ದಾಳಿಯಿಂದಲೂ ಪಾರಾಗುವ ಫೀಚರುಗಳನ್ನು ಲಿಮೊ ಹೊಂದಿದೆ.

ಈ ಕಾರಲ್ಲಿ ಒಟ್ಟು ಏಳು ಜನರು ಕುಳಿತುಕೊಳ್ಳಬಹುದಾಗಿದೆ. ಮುಂಭಾಗದಲ್ಲಿ ಎರಡು ಸೀಟಿದೆ. ಮುಂಭಾಗ ಮತ್ತು ಹಿಂಭಾಗದ ಸೀಟಿನ ನಡುವೆ ಗಾಜಿನ ಗೋಡೆಯಿದೆ. ಹಿಂಭಾಗದ ಎರಡು ಸೀಟುಗಳು ಅಮೆರಿಕದ ಅಧ್ಯಕ್ಷರಿಗೆ ಮತ್ತು ಸಹ ಪ್ರಯಾಣಿಕರಿಗೆ ಮೀಸಲು.

ಕಸ್ಟಮೈಸ್ಡ್ ಕಾರಾಗಿರುವುದರಿಂದ ಲಿಮೊ ಕಾರಿನ ದರದ ಕುರಿತು ಇದಮಿತ್ಥಂ ಹೇಳುವುದು ಕಷ್ಟ.

ಬಾಂಬ್ ದಾಳಿಗೂ ಭಯಪಡೋದಿಲ್ಲ

ಬಾಂಬ್ ದಾಳಿಗೂ ಭಯಪಡೋದಿಲ್ಲ

ಗನ್, ಗ್ರೇನೆಡ್, ಬಾಂಬ್ ದಾಳಿಗಳಿಂದ ಪಾರಾಗುವಂತಹ ಬುಲೆಟ್ ಪ್ರೂಫ್ ಕಿಟಕಿಗಳನ್ನು ಇದು ಹೊಂದಿದೆ. ಇದರ ಬಾಡಿ ಎಂಟು ಇಂಚು ದಪ್ಪದ ರಕ್ಷಣಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಕಾರಿನ ಟೈರ್ ಬ್ಲಾಸ್ಟ್ ಆದರೂ ವೀಲುಗಳ ಮೂಲಕವೇ ಸಾಗಬಹುದು.

ಒಬಾಮಾಗೆ ಹಿಂದಿನ ಸೀಟು

ಒಬಾಮಾಗೆ ಹಿಂದಿನ ಸೀಟು

ಈ ಕಾರಲ್ಲಿ ಒಟ್ಟು ಏಳು ಜನರು ಕುಳಿತುಕೊಳ್ಳಬಹುದಾಗಿದೆ. ಮುಂಭಾಗದಲ್ಲಿ ಎರಡು ಸೀಟಿದೆ. ಮುಂಭಾಗ ಮತ್ತು ಹಿಂಭಾಗದ ಸೀಟಿನ ನಡುವೆ ಗಾಜಿನ ಗೋಡೆಯಿದೆ. ಹಿಂಭಾಗದ ಎರಡು ಸೀಟುಗಳು ಅಮೆರಿಕದ ಅಧ್ಯಕ್ಷರಿಗೆ ಮತ್ತು ಸಹ ಪ್ರಯಾಣಿಕರಿಗೆ ಮೀಸಲು.

ಮೂರು ಟನ್ ತೂಕ

ಮೂರು ಟನ್ ತೂಕ

ಲಿಮೊ ಕಾರಿನ ತೂಕ ಮೂರು ಟನ್. ಇದರ ಡೋರಿನ ತೂಕವೇ ಬೋಯಿಂಗ್ 757 ವಿಮಾನದ ಕ್ಯಾಬಿನ್ ಡೋರಿನ ತೂಕದಷ್ಟಿದೆಯಂತೆ. ಗಂಟೆಗೆ ಇದು ಗರಿಷ್ಠ 60 ಮೈಲು ವೇಗದಲ್ಲಿ ಸಾಗುತ್ತದೆ. ಪರಿಣಿತ ಸಿಐಎ ಏಜೆಂಟ್ ಈ ಕಾರಿಗೆ ಚಾಲಕ.

ಕಾರಲ್ಲಿ ಟ್ರಕ್ ಬಿಡಿಭಾಗ

ಕಾರಲ್ಲಿ ಟ್ರಕ್ ಬಿಡಿಭಾಗ

ಇದು ಷೆವರ್ಲೆ ಕಂಪನಿಯ ಕ್ಯಾಡಿಲಾಕ್ ಕಾರಿನ ಮೋಡಿಪೈಡ್ ಕಾರು. ಷೆವರ್ಲೆ ಕೊಡೆಯೆಕ್ ಕಮರ್ಷಿಯಲ್ ಟ್ರಕ್ ನ ಚಾಸೀಸ್ ಮತ್ತು ಡ್ರೈವ್ ಲೈನನ್ನು ಈ ಕಾರಿಗೆ ಬಳಸಲಾಗಿದೆ. ಷೆವರ್ಲೆ ಕಂಪನಿಯ ಎಲ್ಲಾ ವಾಹನಗಳ ಬಿಡಿಭಾಗಗಳು ಈ ಕಾರಿನಲ್ಲಿ ಇರುವಂತಿದೆ.

ಅತ್ಯಾಧುನಿಕ ಫೀಚರುಗಳು

ಅತ್ಯಾಧುನಿಕ ಫೀಚರುಗಳು

ಈ ಕಾರಲ್ಲಿ ವಿಶೇಷ ನೈಟ್ ವಿಷನ್ ಸಿಸ್ಟಮ್ ಇದೆ. ಜೈವಿಕ ರಾಸಾಯನಿಕ ದಾಳಿಯಿಂದಲೂ ಪಾರಾಗುವ ಫೀಚರುಗಳನ್ನು ಲಿಮೊ ಹೊಂದಿದೆ. ಕಾರಿನ ದರ ಮಾಹಿತಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗೆ ಈ ಚಿತ್ರವನ್ನು ಡೌನ್ ಲೋಡ್ ಮಾಡಿಕೊಂಡು ಝೂಮ್ ಮಾಡಿ ನೋಡಬಹುದು.

ಓದಿ: ಒಬಾಮ ಸವಾರಿಗೆ 5 ಕೋಟಿ ರು.ನ ಸೂಪರ್ ಬಸ್

ಇದನ್ನೂ ಓದಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಅಂಬಾಸಡರ್ ಕಾರೇ ಗತಿ!

Most Read Articles

Kannada
English summary
U.S. President Barack Obama has a Cadillac limousine car, the world's most secure car will not be an exaggeration if asked. The U.S. Secret staff called this car "The Beast". Here we are giving full detail about Barack Obama's Cadillac Limousine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X