ಸಹರಾಗೆ ಮುತ್ತಿಟ್ಟ ಮದ್ಯದ ದೊರೆ ವಿಜಯ್ ಮಲ್ಯ

Posted By:
ವಾಹನ ಜಗತ್ತಿನ ಜನಪ್ರಿಯ ಕ್ರೀಡೆ ಫಾರ್ಮುಲಾ ಒನ್ ಭಾರತದ ತಂಡ "ಸಹರಾ ಫೋರ್ಸ್ ಇಂಡಿಯಾ"ಕ್ಕೆ ವಿಜಯ್ ಮಲ್ಯ ಸುಮಾರು 320 ಕೋಟಿ ಡಾಲರ್ ಹೂಡಿಕೆ ಮಾಡಿದ್ದಾರೆ. ಕಿಂಗ್ ಫಿಷರ್ ನಷ್ಟದಲ್ಲಿದ್ದರೂ ವಿಜಯ್ ಮಲ್ಯ ಕಿಸೆ ಬರಿದಾಗಿಲ್ಲವೆನ್ನುವುದಕ್ಕೆ ಇದು ಸಾಕ್ಷಿ ಎಂದು ವಿಶ್ಲೇಷಕರು ಹೇಳುತ್ತಾರೆ.

ಫೋರ್ಸ್ ಇಂಡಿಯಾಕ್ಕಾಗಿ ವೈಯಕ್ತಿಕ ಹೂಡಿಕೆ ಕಂಪನಿ ವಾಟ್ಸನ್(Watson) 1 ಕೋಟಿ ಡಾಲರ್ ಸಾಲ ನೀಡಿದೆ. ಉಳಿದಂತೆ ಕಿಂಗ್ ಫಿಷರ್ ಏರ್ ಲೈನ್ಸ್ ಮತ್ತು ಮದ್ಯದ ಬ್ರಾಂಡುಗಳ ಮೂಲಕ ವಿಜಯ್ ಮಲ್ಯ ಉಳಿದ ಹೂಡಿಕೆ ಮೊತ್ತ ಸಂಗ್ರಹಿಸಿದ್ದಾರೆ.

ಕಳೆದ ವರ್ಷದ ಫಾರ್ಮುಲಾ ಒನ್ ಮ್ಯಾಚ್ ನಲ್ಲಿ ಸಹರಾ ಫೋರ್ಸ್ ಇಂಡಿಯಾ ತಂಡ ಆರನೇ ಸ್ಥಾನ ಪಡೆದಿತ್ತು. ಫೋರ್ಸ್ ಇಂಡಿಯಾ ತಂಡದ ಸಹ ಸಂಸ್ಥಾಪಕ ಸುಬ್ರತಾ ರಾಯ್ ನೇತೃತ್ವದ ಸಹರಾ ಗ್ರೂಪ್ ಕಳೆದ ವರ್ಷ ಫಾರ್ಮುಲಾ ಒನ್ ತಂಡದಿಂದ ಶೇಕಡ 42.1ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿತ್ತು. ಸುಮಾರು 100 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆಯನ್ನೂ ಸಹರಾ ಗ್ರೂಪ್ ಪ್ರಕಟಿಸಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)

English summary
Liquor baron, Vijay Mallya has pumped in USD 32 million into his Formula One team 'Sahara Force India' ahead of the season opener in Melbourne.
Story first published: Thursday, March 15, 2012, 11:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark