ಬೆಂಗ್ಳೂರು-ಮೈಸೂರು ಹೈಟೆಕ್ ಬಸ್: ವಿಶೇಷ ವಿಮರ್ಶೆ

ಹತ್ತು ಹಲವು ಪ್ರಥಮಗಳಿಗೆ ಹೆಸರು ಗಳಿಸಿರುವ ಕೆಎಸ್‌ಆರ್‌ಟಿಸಿ ದೇಶದಲ್ಲಿಯೇ ಅತಿ ಉದ್ದದ ಬಸ್ಸಿನ ಪ್ರಾಯೋಗಿಕ ಸಂಚಾರವನ್ನು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಆರಂಭಿಸಿದೆ. ಇಂತಹ ಹೈಟೆಕ್ ಬಸ್ಸುಗಳು ಕೇವಲ ಅಂತಾರಾಜ್ಯಕ್ಕೆ ಮಾತ್ರವಲ್ಲದೇ, ರಾಜ್ಯದೊಳಗೂ ಸಂಚರಿಸುವುದು ಕನ್ನಡಿಗರಿಗೆ ಖುಷಿ ತಂದಿದೆ.

ವೊಲ್ವೊ ಉದ್ದದ ಬಸ್ಸಿನ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಈ ಬಸ್ಸಿನ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕನ್ನಡ ಡ್ರೈವ್ ಸ್ಪಾರ್ಕಿಗೆ ಓದುಗರು ಪ್ರೀತಿಯಿಂದ ಇಮೇಲ್ ಬರೆದಿದ್ದಾರೆ. ದೇಶದ ಮೊದಲ ಉದ್ದದ ಬಸ್ ಮಾಹಿತಿಗಾಗಿ ಮುಂದೆ ಓದಿ.

ಈ ಮಲ್ಟಿ ಆಕ್ಸೆಲ್ ಹೈಟೆಕ್ ಬಸ್ಸಿನ ಹೆಸರು Volvo 9400PX. ಎಲ್ಲಾ ಬಸ್ಸುಗಳು 12 ಮೀಟರ್ ಉದ್ದವಿದ್ದರೆ ಈ ಬಸ್ ಮಾತ್ರ 14.5 ಮೀಟರ್ ಉದ್ದವಿದೆ. ಇದರಲ್ಲಿ ಲಗೇಜ್ ಸ್ಥಳಾವಕಾಶ, ಹೈಟೆಕ್ ಫೀಚರುಗಳು, ಅತ್ಯಾಧುನಿಕ ಸೌಲಭ್ಯಗಳು ಇವೆ.

ಅಡುಗೆ ಮನೆ, ಪ್ರತಿ ಸೀಟಿಗೂ ಒಂದೊಂದು ಸಣ್ಣ ಟಿವಿ, ಮೊಬೈಲ್ ಚಾರ್ಜರ್ ಮತ್ತು ರಾಸಾಯನಿಕ ಶೌಚಾಲಯ ಇದರಲ್ಲಿದೆ. ವೊಲ್ವೊ 9400ಪಿಎಕ್ಸ್ ಬಸ್ಸಿನಲ್ಲಿ 41 ಸೀಟುಗಳಿವೆ. ಇದು ಇಂಧನ ದಕ್ಷತೆಯಲ್ಲೂ ಬೆಸ್ಟ್ ಎಂದು ವೊಲ್ವೊ ಹೇಳಿದೆ.

ಇದು 11 ಲೀಟರಿನ ವೊಲ್ವೊ ಡಿ11ಎ 370 ಎಂಜಿನ್ ಹೊಂದಿದೆ. 1400ರಿಂದ 1950 ಆವರ್ತನಕ್ಕೆ 370(273 ಕಿ.ವ್ಯಾಟ್) ಪವರ್ ನೀಡುತ್ತದೆ. 1 ಸಾವಿರದಿಂದ 1,300 ಆವರ್ತನಕ್ಕೆ 1,770 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಐ-ಶಿಫ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ. ಈ ಬಸ್ ದರ 1.10 ಕೋಟಿ ರುಪಾಯಿ.

ಈ ಬಸ್ಸಿನ ಕೆಲವು ವಿಶೇಷತೆಗಳನ್ನು ಈ ರೀತಿ ಪಟ್ಟಿ ಮಾಡಬಹುದು
* ಶೌಚಾಲಯ, ಅಡುಗೆಮನೆ ಇತ್ಯಾದಿ ಹೈಟೆಕ್ ಫೀಚರುಗಳು
* ಸ್ಟೀರೆಬಲ್ ಟ್ಯಾಗ್ ಆಕ್ಸೆಲ್
* ವೊಲ್ವೊ ಐ ಶಿಫ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
* ಪಿಎಕ್ಸ್ ಪ್ಲಾಟ್ ಫಾರ್ಮ್ ನಿಂದಾಗಿ ಹಗುರ ವಾಹನ
* ಪ್ರಥಮ ಬಾರಿಗೆ ಅತ್ಯಧಿಕ ಶಕ್ತಿಶಾಲಿ ಎಂಜಿನ್ ಬಳಕೆ

ಪ್ರತಿ ಸೀಟಿಗೂ ಟಿವಿ ಮತ್ತು ಮೊಬೈಲ್ ಚಾರ್ಜರ್ ಸೌಲಭ್ಯವಿದೆ. ಉಳಿದ ಬಸ್ಸುಗಳಿಗೆ ಹೋಲಿಸಿದರೆ ಇದು ಶೇಕಡ 55ರಷ್ಟು ಕಡಿಮೆ ಇಂಧನ ಬಳಕೆ ಮಾಡುತ್ತದೆ. ಪರಿಸರಕ್ಕೆ ಸೂಸುವ ಮಾಲಿನ್ಯದ ಪ್ರಮಾಣವೂ ಶೇಕಡ 30ರಷ್ಟು ಕಡಿಮೆಯಿದೆ.

ವೊಲ್ವೊ 9400ಪಿಎಕ್ಸ್ ಹೈಟೆಕ್ ಬಸ್ ಹತ್ತು ಹಲವು ಫೀಚರುಗಳನ್ನು ಹೊಂದಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ಸ್, ನೂತನ ಪಿಎಕ್ಸ್ ಸಸ್ಪೆನ್ಷನ್ ಸಿಸ್ಟಮ್ ಇತ್ಯಾದಿಗಳಿವೆ.

ಈಗ ಈ ಬಸ್ ಬೆಂಗಳೂರು- ಮೈಸೂರು ನಡುವೆ ಚಲಿಸಲಿದೆ. ಮುಂದಿನ ದಿನಗಳಲ್ಲಿ ಇದನ್ನು ಬೆಂಗಳೂರು- ಚೆನ್ನೈ, ಪುಣೆ, ಹೈದರಾಬಾದ್, ಪಣಜಿ ಮುಂತಾದ ನಗರಗಳಿಗೂ ವಿಸ್ತರಿಸುವ ಯೋಚನೆ ಕೆಎಸ್ಆರ್ಟಿಸಿಗಿದೆ.

ಈ ಹಿಂದೆ ಶೌಚಾಲಯ, ಅಡುಗೆ ಮನೆ ಇರುವ ಬಸ್ಸನ್ನು ಚೆನ್ನೈಗೆ ಪರಿಚಯಿಸಿದಾಗ ಇಂತಹ ಹೈಟೆಕ್ ಬಸ್ಸುಗಳು ಕೇವಲ ಅಂತಾರಾಜ್ಯಕ್ಕೆ ಸೀಮಿತವಾಗುವುದರ ಕುರಿತು ಕನ್ನಡ ಡ್ರೈವ್ ಸ್ಪಾರ್ಕ್ ಖೇದ ವ್ಯಕ್ತಪಡಿಸಿತ್ತು. ವೊಲ್ವೊ 9400 ಪಿಎಕ್ಸ್ ಬಸ್ ಬೆಂಗಳೂರು- ಮೈಸೂರು ನಡುವೆ ಸಂಚರಿಸುವುದು ಒಳ್ಳೆಯ ಬೆಳವಣಿಗೆ.

ಬೆಂಗಳೂರಿನಿಂದ ಮೈಸೂರಿಗೆ ಹೈಟೆಕ್ ಬಸ್ ಪ್ರಯಾಣ ದರ: 300 ರುಪಾಯಿ.

ಕೆಎಸ್ಆರ್‌ಟಿಸಿ ವೆಬ್‌ಸೈಟ್

Most Read Articles

Kannada
English summary
KSRTC using the Volvo 9400PX multi-axle bus on the Bangalore - Mysore route. Volvo 9400XL Review, Price, Features. Pantry, toilet, VOD and other facilities. Read Volvo 9400PX full review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X