ಮಹಿಳೆಯರ ಅಚ್ಚುಮೆಚ್ಚಿನ ಪುಟ್ಟಕಾರು ಯಾವುದು?

ಮಹಿಳೆಯರ ಆಯ್ಕೆ ಯಾವತ್ತೂ ಒಂದಿಷ್ಟು ಸ್ಪೆಷಲ್ ಅಥವಾ ಡಿಫರೆಂಟ್ ಆಗಿರುತ್ತದೆ. ಅವರ ಅಭಿರುಚಿ, ಆಸಕ್ತಿಯೂ ವಿಶೇಷವಾಗಿರುತ್ತದೆ. ದಿನನಿತ್ಯದ ಪ್ರಯಾಣಕ್ಕೆ ಸೂಕ್ತವಾದ ಕಾರೊಂದನ್ನು ಖರೀದಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ಹೆಚ್ಚಾಗಿ ಆಯ್ಕೆ ಮಾಡುವ ಕಾರು ಯಾವುದು ಎಂಬ ಕುತೂಹಲ ಎಲ್ಲರಿಗೂ ಇರುವುದು ಸಾಮಾನ್ಯ.

ಮಹಿಳೆಯರ ಅಚ್ಚುಮೆಚ್ಚಿನ ಕಾರನ್ನು ತಿಳಿಯಲು ನಮ್ಮ ತಾಣದಲ್ಲಿ ಒಂದು ಮತಗಟ್ಟೆ ಅಥವಾ ಪೊಲ್ ಇಟ್ಟಿದ್ದೇವು. ಅದರಲ್ಲಿ ಮಹಿಳೆಯರು ಹೆಚ್ಚಾಗಿ ಆಯ್ಕೆ ಮಾಡುವ ಕಾರುಗಳ ಪಟ್ಟಿಯಿತ್ತು. ಮಹಿಳೆಯರ ಅಚ್ಚುಮೆಚ್ಚಿನ ಪುಟ್ಟ ಕಾರು ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಈ ಮತಗಟ್ಟೆಯಲ್ಲಿ ನಮಗೆ ದೊರಕಿದೆ. ಇಲ್ಲಿದೆ ಫಲಿತಾಂಶ.

ಮಹಿಳೆಯರ ಅಚ್ಚುಮೆಚ್ಚಿನ ಕಾರಾಗಿ ಹೆಚ್ಚು ಜನರು ಮತಚಲಾಯಿಸಿರುವುದು ಹ್ಯುಂಡೈ ಐ10 ಕಾರಿಗೆ. ಶೇಕಡ 41ರಷ್ಟು ಜನರು ಐ10 ಆಯ್ಕೆ ಮಾಡಿದ್ದರು. ಎರಡನೇ ಸ್ಥಾನ ಪಡೆದಿರುವುದು ಷೆವರ್ಲೆ ಬೀಟ್. ಐ10 ಹೆಚ್ಚು ಅಂಕ ಪಡೆದಿರುವುದರಲ್ಲಿ ಅಚ್ಚರಿಯೇನಿಲ್ಲ.

ಕೈಗೆಟುಕುವ ದರದ ಜೊತೆಜೊತೆಗೆ ಸ್ಟೈಲ್ ಮತ್ತು ಕಂಫರ್ಟ್ ವಿಷ್ಯದಲ್ಲಿ ಐ10 ಸಣ್ಣಕಾರು ಗಮನಸೆಳೆಯುತ್ತದೆ. ಮಹಿಳೆಯರಿಗೆ ಸುಲಭವಾಗಿ ಚಾಲನೆ ಮಾಡಲು ಅನುಕೂಲವಾಗುವಂತೆ ಇದು ಆಟೋಮ್ಯಾಟಿಕ್ ಆಯ್ಕೆಯಲ್ಲೂ ದೊರಕುವುದು ಇದರ ಇನ್ನೊಂದು ಪ್ಲಸ್ ಪಾಯಿಂಟ್.

ಮಹಿಳೆಯರ ಅಚ್ಚುಮೆಚ್ಚಿನ ಕಾರಾಗಿ ಎರಡನೇ ಸ್ಥಾನವನ್ನು ಜನರಲ್ ಮೋಟರ್ಸ್ ಕಂಪನಿಯ ಷೆವರ್ಲೆ ಬೀಟ್ ಪಡೆದಿದೆ. ಸಣ್ಣದಾದ ಮತ್ತು ಮುದ್ದಾದ ಷೆವರ್ಲೆ ಬೀಟಿಗೆ ಶೇಕಡ 21ರಷ್ಟು ಮತಗಳು ಬಿದ್ದಿವೆ. ಈ ಪುಟ್ಟ ಕಾರಿನ ವಿನ್ಯಾಸ ಆಕರ್ಷಕ. ನಗರದಲ್ಲಿ ಚಾಲನೆ ಮಾಡುವುದು ಕೂಡ ಸುಲಭ. ಈ ಕಾರನ್ನು ಪಾರ್ಕಿಂಗ್ ಮಾಡುವುದು ಕೂಡ ಸುಲಭವಾಗಿರುವುದು ಈ ಕಾರನ್ನು ಹೆಚ್ಚು ಮಹಿಳೆಯರು ಆಯ್ಕೆ ಮಾಡಲು ಪ್ರಮುಖ ಕಾರಣವಾಗಿರಬಹುದು.

ಡ್ರೈವ್‌ಸ್ಪಾರ್ಕ್ ಮತಗಟ್ಟೆಯಲ್ಲಿ ಮೂರನೇ ಸ್ಥಾನ ಪಡೆದಿರುವುದು ಹೋಂಡಾ ಬ್ರಿಯೊ. ಹೋಂಡಾ ಕಂಪನಿಯ ಎಂಟ್ರಿ ಲೆವೆಲ್ ಸಣ್ಣಕಾರು ಬ್ರಿಯೊ ತನ್ನ ಕ್ಯೂಟ್ ಲುಕ್ಸ್ ಮೂಲಕ ಹೆಚ್ಚು ಮಹಿಳೆಯರ ಗಮನಸೆಳೆದಿದೆ. ಅಂದಹಾಗೆ ಇದಕ್ಕೆ ನಮ್ಮ ಮತಗಟ್ಟೆಯಲ್ಲಿ ಶೇಕಡ 20ರಷ್ಟು ಅಂಕ ಬಿದ್ದಿದ್ದೆ.

ನಾಲ್ಕನೇ ಸ್ಥಾನ ಪಡೆದಿರುವುದು ಮಾರುತಿ ಸುಜುಕಿ ಎ-ಸ್ಟಾರ್. ಇದು ಮಾರುತಿಯ ಅಗ್ಗದ ಕಾರು. ಇದು ಆಟೋಮ್ಯಾಟಿಕ್ ಆವೃತ್ತಿಯಲ್ಲೂ ದೊರಕುತ್ತದೆ. ಕಂಪನಿಯ ಉಳಿದ ಕಾರುಗಳಿಗೆ ಹೋಲಿಸಿದರೆ ಎ-ಸ್ಟಾರ್ ಮಾರಾಟ ಕೂಡ ಗಮನಾರ್ಹ ಪ್ರಗತಿ ಕಂಡಿಲ್ಲ. ಹೀಗಾಗಿ ನಮ್ಮ ಮತಗಟ್ಟೆಯಲ್ಲೂ ಇದಕ್ಕೆ ಹೆಚ್ಚಿನ ಮತಗಳು ಬಿದ್ದಿಲ್ಲ. ಶೇಕಡ 19ರಷ್ಟು ಜನರು ಮಾರುತಿ ಸುಜುಕಿ ಎ-ಸ್ಟಾರ್ ಮಹಿಳೆಯರ ಅಚ್ಚುಮೆಚ್ಚಿನ ಕಾರಾಗಿ ಮತಚಲಾಯಿಸಿದ್ದಾರೆ.

ಈ ಮತಗಟ್ಟೆಯಲ್ಲಿ ಬಹುಮತಪಡೆದ ಹ್ಯುಂಡೈ ಐ10 ಕಾರು ಶೇಕಡ 41ರಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಉಳಿದ ಮೂರು ಕಾರುಗಳು ಕೇವಲ ಶೇಕಡ 1ರಷ್ಟು ಅಂತರದಲ್ಲಿ ಉಳಿದ ಸ್ಥಾನಗಳನ್ನು ಹಂಚಿಕೊಂಡಿವೆ. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
Drivespark Poll: Which Is The Best Lady's Car? The Hyundai i10 has emerged as a clear winner with 41% of the vote and is followed by the Chevrolet Beat. The third place in Drivespark's poll for the best lady's car goes to the Honda Brio.
Story first published: Monday, April 9, 2012, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X