12 ಲಕ್ಷ ಮಹೀಂದ್ರ ಮಿನಿ ವಾಣಿಜ್ಯ ವಾಹನಗಳ ಮಾರಾಟ

Written By:

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ಸಣ್ಣ ವಾಣಿಜ್ಯ ವಾಹನಗಳ ವಿಭಾಗದಲ್ಲಿ 12 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ ಮನ್ನಣೆಗೆ ಪಾತ್ರವಾಗಿದೆ. ಸಣ್ಣ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಮಹೀಂದ್ರ 12 ಮಾಡೆಲ್‌ಗಳನ್ನು ದೇಶಕ್ಕೆ ಪರಿಚಯಿಸಿವೆ. ಇದು ದೇಶದ ಸರಕು ಸಾಗಾಟಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಟು ವೀಲರ್, ಆಟೋ ರಿಕ್ಷಾಗಳ ಹೊರತಾಗಿ ಮಹೀಂದ್ರ ಪಿಕಪ್, ಮಿನಿ ಟ್ರಕ್ ಹಾಗೂ ಮಿನಿ ವ್ಯಾನ್‌ಗಳ ಸೇವೆ ನೀಡುತ್ತಿದೆ. ಇದು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಜನತೆಯ ಬೇಡಿಕೆಗಳನ್ನು ಪೂರೈಸುವಲ್ಲಿ ಯಶಸ್ಸನ್ನು ಕಂಡಿದೆ.

ಇದೇ ಸಂದರ್ಭದಲ್ಲಿ ಎಸಿ ಜಿನಿಯೊ ಡಬಲ್ ಕ್ಯಾಬ್, ಮ್ಯಾಕ್ಸಿಮೊ ಸಿಎನ್‌ಜಿ, ಮೈಕ್ರೊ ಹೈಬ್ರಿಡ್ ಪಿಕಪ್, ಜಿಯೊ, ಮ್ಯಾಕ್ಸಿಮ್ ಮಿನಿ ವ್ಯಾನ್ ವಿಎಕ್ಸ್ ಮತ್ತು ಮ್ಯಾಕ್ಸಿಮ್ ಪ್ಲಸ್‌ಗಳಂತಹ ನೂತನ ರೇಂಜ್ ವಾಣಿಜ್ಯ ವಾಹನಗಳನ್ನು ಮಹೀಂದ್ರ ಬಿಡುಗಡೆ ಮಾಡಿವೆ. ದೇಶದಲ್ಲಿ ಒಟ್ಟು 250 ಡೀಲರ್‌ಶಿಪ್‌ಗಳನ್ನು ಹೊಂದಿರುವ ಮಹೀಂದ್ರ 1000ಕ್ಕೂ ಹೆಚ್ಚು ಸರ್ವಿಸ್ ಪಾಯಿಂಟ್‌ಗಳನ್ನು ಹೊಂದಿದೆ.

ಮಹೀಂದ್ರದಿಂದ ವಿತರಣೆಯಾಗುವ ಪ್ರಮುಖ ಸಣ್ಣ ವಾಣಿಜ್ಯ ವಾಹನಗಳು

ಬೊಲೆರೊ ಮ್ಯಾಕ್ಸಿ ಟ್ರಕ್ ಪ್ಲಸ್,

ಬುಲೆರೊ ಪಿಕಪ್,

ಬುಲೆರೊ ಕ್ಯಾಂಪರ್ ಡಬಲ್ ಕ್ಯಾಬ್ ಪಿಕಪ್,

ಜಿನಿಯೊ ಪಿಕಪ್,

ಮ್ಯಾಕ್ಸಿಮೊ ಪ್ಲಸ್ ಮಿನಿ,

ಮ್ಯಾಕ್ಸಿಮೊ ಮಿನಿ ವ್ಯಾನ್ (ಸಾಫ್ಟ್ ಟಾಪ್),

ಮ್ಯಾಕ್ಸಿಮೊ ಮಿನಿ ವ್ಯಾನ್ ವಿಎಕ್ಸ್ (ಹಾರ್ಡ್ ಟಾಪ್)

ಜಿಯೊ ಕಾಂಪಾಕ್ಟ್,

ಟ್ರಕ್,

ಜಿಯೊ ಕ್ಯಾಬ್,

ಆಲ್ಫಾ ಲೋಡ್ 3 ವೀಲರ್,

ಆಲ್ಫಾ ಪ್ಯಾಸೆಂಜರ್ 3 ವೀಲರ್ ಮತ್ತು

ಚಾಂಪಿಯನ್

English summary
Mahindra & Mahindra, leaders in production of small and medium commercial vehicles in the country have announces that their small commercial vehicle portfolio has crossed the 12 lakh mark
Story first published: Sunday, September 1, 2013, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark