ಮುಂದಿನ ವರ್ಷ ಡೀಸೆಲ್ ಕಾರಿನೊಂದಿಗೆ ಮಿಟ್ಸುಬಿಸಿ ರಿ ಎಂಟ್ರಿ

Written By:

ಭಾರತ ಕಾರು ಮಾರುಕಟ್ಟೆಯ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಸ್ಥಾನ ಗಟ್ಟಿ ಮಾಡುವುದು ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ಮಿಟ್ಸುಬಿಸಿ ಗುರಿಯಾಗಿದೆ.

ಈ ಹಿಂದೆ ಮಾರಾಟ ಸಂಖ್ಯೆಯಲ್ಲಿ ತೀರಾ ಹಿನ್ನಡೆ ಅನುಭವಿಸಿದ್ದ ಸಿಡಿಯಾ ಸ್ಪೋರ್ಟ್ಸ್ ಹಾಗೂ ಇವೊ ಎಕ್ಸ್ ಸೆಡಾನ್ ಕಾರುಗಳನ್ನು ಹಿಂಪಡೆಯಲು ಮಿಟ್ಸುಬಿಸಿ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಮಿಟ್ಸುಬಿಸಿ ಔಟ್ಲೆಂಡರ್ ಪೆಟ್ರೋಲ್ ಕಾರನ್ನು ಸಹ ವಾಪಾಸ್ ಪಡೆದುಕೊಂಡಿತ್ತು. ಆದರೆ ಇದರಿಂದ ಎದೆಗುಂದದ ಕಂಪನಿಯು ನೂತನ ಡೀಸೆಲ್ ವರ್ಷನ್ ಪರಿಚಯಿಸುವ ಯೋಜನೆ ಹೊಂದಿದೆ. ಇದು ಯುಟಿಲಿಟಿ ವೆಹಿಕಲ್ ಸಗ್ಮೆಂಟ್‌ನಲ್ಲಿ ಗುರುತಿಸಿಕೊಳ್ಳಲಿದೆ.

To Follow DriveSpark On Facebook, Click The Like Button

ಮಿಟ್ಸುಬಿಸಿ ಔಟ್ಲೆಂಡರ್ ಡೀಸೆಲ್ ಕಾರು ಭಾರತದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಕಳೆದ ವರ್ಷ ಜಾಗತಿಕವಾಗಿ ಬಿಡುಗಡೆಯಾಗಿದ್ದ ಮಿಟ್ಸುಬಿಸಿ ಔಟ್ಲೆಂಡರ್ ಥರ್ಡ್ ಜನರೇಷನ್ ಡೀಸೆಲ್ ಕಾರು 2014ರಲ್ಲಿ ಭಾರತವನ್ನು ಪ್ರವೇಶಿಸಲಿದೆ. ಇದರಲ್ಲಿ ಪ್ರೀಮಿಯಂ ಇಂಟಿರಿಯರ್ ಸೇರಿದಂತೆ ಅನೇಕ ಆಧುನಿಕ ಫೀಚರ್‌ಗಳನ್ನು ಆಳವಡಿಸಲಾಗಿದೆ.

2014 ಮಿಟ್ಸುಬಿಸಿ ಡೀಸೆಲ್ ಮಾದರಿಯಲ್ಲಿ 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಿದ್ದು, 147 ಅಶ್ವಶಕ್ತಿ (380 ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

English summary
Earlier this year, Mitsubishi made it clear that it only wanted to do business in India as a premium SUV brand.Now learned that the Outlander will make a comeback in 2014, albeit with a diesel engine.
Story first published: Saturday, August 17, 2013, 10:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark