ಇನ್ನು ನಗರದಲ್ಲಿ ಆಟೋ ಪಯಣ ದುಬಾರಿ

Written By:

ಇನ್ನು ನಗರಗಳಲ್ಲಿನ ಆಟೋ ಪಯಣ ಇತ್ತಷ್ಟು ದುಬಾರಿಯೆನಿಸಲಿದೆ. ಹೌದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (ಆರ್‌ಟಿಎ) ಮೊದಲ 1.9 ಕೀ.ಮೀ.ಗಳ ವರೆಗಿನ ಕನಿಷ್ಠ ದರವನ್ನು 20ರಿಂದ 25 ರು.ಗಳಿಗೆ ಏರಿಕೆಗೊಳಿಸಿದೆ.

ಆಟೋ ರಿಕ್ಷಾ ಚಾಲಕರು ನಿಂದಿಸಿದರೆ ಎಸ್ಎಂಎಸ್ ಮಾಡಿ

ಈ ಮೂಲಕ ಕನಿಷ್ಠ ದರದಲ್ಲಿ ಐದು ರು.ಗಳಷ್ಟು ಹೆಚ್ಚಳವುಂಟಾಗಿದೆ. ಅದೇ ರೀತಿ ನಂತರದ ಪ್ರತಿ ಕಿಲೋಮೀಟರ್‌ಗಿದ್ದ 11 ರು.ಗಳನ್ನು 13ಕ್ಕೆ ಏರಿಕೆಗೊಳಿಸಲಾಗಿದೆ.

Autorickshaw fare hikes

ಆಟೋ ರಿಕ್ಷಾಗಳ ನೂತನ ದರ ಏರಿಕೆ ನೀತಿಯು ಡಿಸೆಂಬರ್ 20ರಿಂದ ಜಾರಿಗೆ ಬರಲಿದ. ಸಾರಿಗೆ ಪೊಲೀಸ್, ಅಧಿಕಾರಿಗಳು ಹಾಗೂ ಆಟೋ ಚಾಲಕರ ಒಕ್ಕೂಟದ ಜತೆ ನಡೆಸಿದ ಮಾತುಕತೆಯ ಬಳಿಕ ಬೆಲೆ ಏರಿಕೆಯನ್ನು ಪ್ರಕಟಿಸಲಾಗಿದೆ.

ಇನ್ನು ಮೊದಲ ಐದು ನಿಮಿಷದ ವರೆಗೆ ಕಾಯುವ ಸಮಯಕ್ಕೆ ಹೆಚ್ಚುವರಿ ಹೊರೆಯಿರುವುದಿಲ್ಲ. ಹಾಗಿದ್ದರೂ 15 ನಿಮಿಷಗಳ ವೇಟಿಂಗ್ ಟೈಮ್‌ಗೆ ಪ್ರಯಾಣಿಕರು ರು.5ರಷ್ಟು ಪಾವತಿಸಬೇಕಾಗಿದೆ. ಪ್ರಸ್ತುತ ಒಂದು ಗಂಟೆಯ ಕಾಯುವಿಕೆ ಅವಧಿಗೆ ರು. 20ರಷ್ಟು ಪಾವತಿಸಬೇಕಾಗಿತ್ತು.

ನಿಮ್ಮ ಮಾಹಿತಿಗಾಗಿ, 18 ತಿಂಗಳುಗಳ ಹಿಂದೆ ಕೊನೆಯ ಬಾರಿ ಆಟೋ ದರಗಳಲ್ಲಿ ಏರಿಕೆಯುಂಟಾಗಿತ್ತು. ಇದೀಗ ಮತ್ತೆ ಬೆಲೆಯೇರಿಕೆಗಾಗಿ ಆಟೋ ಚಾಲಕರ ಒಕ್ಕೂಟದಿಂದ ನಿರಂತರವಾದ ಒತ್ತಡ ಹೇರಲಾಗಿತ್ತು. ಎಲ್‌ಪಿಜಿ ಹಾಗೂ ಇತರ ಬೆಲೆಯೇರಿಕೆಯಿಂದಾಗಿ ಆಟೋ ಚಾಲಕರಿಗೆ ಕಂಟಕ ಸೃಷ್ಟಿಯಾಗಿತ್ತು.

English summary
The Regional Transport Authority (RTA) on Tuesday increased the minimum autorickshaw fare to Rs 25 from Rs 20 for the first 1.9 km.
Story first published: Wednesday, December 18, 2013, 12:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark