ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಆಗಮನಕ್ಕೆ ರೆಡಿ

Written By:

ಇತ್ತೀಚೆಗಳಷ್ಟೇ ಜಗತ್ತಿನ ಮೂರು ಪ್ರಮುಖ ದೇಶಗಳಲ್ಲಿ (ಚೀನಾ,ಬ್ರಿಟನ್, ಅಮೆರಿಕ) ಐ3 ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದ್ದ ಜರ್ಮನಿಯ ಪ್ರೀಮಿಯಂ ವಾಹನ ತಯಾರಕ ಕಂಪನಿಯಾಗಿರುವ ಬಿಎಂಡಬ್ಲ್ಯು, ಸದ್ಯದಲ್ಲೇ ಐ8 (i8) ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ಅನಾವರಣಗೊಳಿಸಲಿದೆ.

ಜಗತ್ತಿನ ಸಂಚಾರ ವಾಹನಕ್ಕೆ ಉತ್ತೇಜನ ತುಂಬುವಲ್ಲಿ ಕಾರ್ಯ ಮಗ್ನವಾಗಿರುವ ಬಿಎಂಡಬ್ಲ್ಯು, ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರಿನ ಮೊದಲ ಉತ್ಪಾದಕಾ ವರ್ಷನ್ ಪರಿಚಯಿಸಲಿದೆ. ಈ ಮೂಲಕ ಜಾಗತಿಕವಾಗಿ ಎಂಟ್ರಿ ನೀಡಲಿದೆ. ಜರ್ಮನಿಯಲ್ಲೇ ಸಾಗಲಿರುವ ಫ್ರಾಂಕ್‌ಫರ್ಟ್ ಮೋಟಾರ್ ಶೋ ಮುಂದಿನ ತಿಂಗಳಲ್ಲಿ ಜರಗಲಿದೆ. ಈ ಬಹುನಿರೀಕ್ಷಿತ ಹೈಬ್ರಿಡ್ ಕಾರಿನ ದರ ಎರಡು ಕೋಟಿ ಅಸುಪಾಸಿನಲ್ಲಿರಲಿದೆ.

To Follow DriveSpark On Facebook, Click The Like Button

ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರು ಮುಂದಿನ ವರ್ಷ ಆಸ್ಟ್ರೇಲಿಯಾಕ್ಕೆ ಲಗ್ಗೆಯಿಡುವ ನಿರೀಕ್ಷೆಯಿದೆ. ಇದರಲ್ಲಿ ಫ್ರಂಟ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಜತೆಗೆ 1.5 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೂಡಾ ಹೊಂದಿರಲಿದೆ. ಇವೆಡರ ಸಂಯೋಜನೆಯಿಂದಾಗಿ ಗಂಟೆಗೆ ಕೇವಲ 4.7 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಪಡೆಯಲಿದೆ.

ಎರಡು ಸೀಟಿನ ಈ ಕೂಪೆ ಕಾರನ್ನು ಕಾರ್ಬನ್ ಫೈಬರ್‌ನಿಂದ ನಿರ್ಮಿಸುತ್ತಿರುವುದು ಭಾರ ಕಡಿಮೆ ಮಾಡಲು ನೆರವಾಗಲಿದೆ. ಹೆಚ್ಚಿನ ಮಾಹಿತಿಗಳು ಫ್ರಾಂಕ್‌ಫರ್ಟ್ ಮೋಟಾರ್ ಶೋ ಮುಂಚಿತವಾಗಿ ಲಭಿಸಲಿದೆ. ಫ್ರಾಂಕ್‌ಫರ್ಟ್ ಮೋಟಾರ್ ಶೋ ಸೆಪ್ಟೆಂಬರ್ 10ರಂದು ಆರಂಭವಾಗಲಿದ್ದು, ಇದೇ ಸಂದರ್ಭದಲ್ಲಿ ಎಕ್ಸ್5 ಹಾಗೂ ಆಕ್ಟಿವ್ ಟೂರ್ ಔಟ್‌ಡೋರ್ ಕಾನ್ಸೆಪ್ಟ್ ಕಾರು ಸಹ ಪ್ರದರ್ಶನ ಕಾಣಲಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

ಸದ್ಯದಲ್ಲೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರು ಭಾರತ ಎಂಟ್ರಿ

English summary
The production version of the BMW i8 will make its international debut at next month’s Frankfurt motor show in Germany.
Story first published: Monday, August 5, 2013, 12:36 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark