ತ್ವರೆ ಮಾಡಿ; ಕಾರು ಸಾಲ ಇನ್ನಷ್ಟು ಅಗ್ಗ?

Posted By:
ಕಾರು ಪ್ರಿಯರಿಗೆ ಮತ್ತಷ್ಟು ಸಂತೋಷ ಸುದ್ದಿ ಬಂದಿದ್ದು, ಕಾರು ಸಾಲ ಇನ್ನಷ್ಟು ಅಗ್ಗವಾಗುವ ಸೂಚನೆ ಲಭಿಸಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಬ್ಯಾಂಕ್‌ಗಳು ಕಾರು ಸಾಲದ ಮೇಲಿನ ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (ಬಿಪಿಎಸ್) ಕಡಿತಗೊಳಿಸುವ ಸಾಧ್ಯತೆಯಿದೆ.

ದೀಪಾವಳಿ ಹಬ್ಬದ ಆವೃತ್ತಿ ಬಳಿಕ ಕಾರು ಮಾರುಕಟ್ಟೆ ಭಾರಿ ಕುಸಿತದತ್ತ ಮುಖ ಮಾಡಿದೆ. ಪ್ರಸ್ತುತ ಬೇಡಿಕೆ ಕುಸಿದಿರುವುದರಿಂದ ಬ್ಯಾಂಕುಗಳು ಬಡ್ಡಿ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತ ಮಾಡುವ ಚಿಂತನೆಯಲ್ಲಿದೆ.

ಹಳೆ ಹಾಗೂ ಹೊಸ ಪ್ರಯಾಣಿಕ ಕಾರುಗಳಿಗೆ ಸಾಲ ನೀಡುತ್ತಿರುವ ಕೊಟಕ್ ಮಹೀಂದ್ರ ಬ್ಯಾಂಕ್‌ನ ಕೊಟಕ್ ಮಹೀಂದ್ರ ಪ್ರೈಮ್ ಈಗಾಗಲೇ ಬಡ್ಡಿದರವನ್ನು ಕಡಿತಗೊಳಿಸಿದೆ.

2012ರ ಡಿಸೆಂಬರ್ ತಿಂಗಳಲ್ಲಿ ಪ್ರಯಾಣಿಕ ಕಾರು ಮಾರಾಟವು ಶೇಕಡಾ 12.5ರಷ್ಟು ಕುಸಿತ ಕಂಡಿತ್ತು. ಇದು 2012ರ ಆಗಸ್ಟ್‌ (18.56%) ಬಳಿಕ ಅನುಭವಿಸಿದ ಅತ್ಯಂತ ಅಧಿಕ ಕುಸಿತವಾಗಿದೆ ಎಂದು ಸಿಯಾಮ್ (SIAM) ವರದಿಯು ತಿಳಿಸಿದೆ.

ಇನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಹೋಲಿಸಿದಾಗ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಅತಿ ಹೆಚ್ಚು ಯಶಸ್ಸನ್ನು ದಾಖಲಿಸಿತ್ತು. ಇದು ಮಾರುಕಟ್ಟೆಯಲ್ಲಿ ಕಾರುಗಳಿಗೆ ಅತಿ ಅಗ್ಗದ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದೆ.

English summary
Car loans are expected to get cheaper. Bankers expect these rates to dip by at least 25 basis points (bps). “The car industry has seen a slowdown post Diwali. With the slowing demand for cars, we do see a dip in the interest rates by at least 25 basis points,” said Vyomesh Kapasi, CEO, Kotak Mahindra Prime.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark