ಸತತ 6ನೇ ತಿಂಗಳಲ್ಲೂ ಧರೆಗುರುಳಿದ ಕಾರು ಮಾರಾಟ

Written By:
To Follow DriveSpark On Facebook, Click The Like Button
ಇದೇ ಮೊದಲ ಬಾರಿಗೆ ಸತತ ಆರನೇ ತಿಂಗಳಲ್ಲೂ ದೇಶದ ಕಾರು ಮಾರಾಟ ಹಿನ್ನಡೆ ಅನುಭವಿಸಿದೆ. 1997/98ರ ಬಳಿಕ ದೇಶದ ಆಟೋ ಇತಿಹಾಸದಲ್ಲೇ ಇಷ್ಟು ಸುದೀರ್ಘ ಅವಧಿಯ ಕುಸಿತ ಇದೇ ಮೊದಲ ಬಾರಿಗೆ ಕಾಣುತ್ತಿದೆ.

2013 ಎಪ್ರಿಲ್ ಅವಧಿಯಲ್ಲಿ ಶೇಕಡಾ 10.43ರಷ್ಟು ಕುಸಿತ ಅನುಭವಿಸಿದೆ. ಈ ಅವಧಿಯಲ್ಲಿ 150,789 ಯುನಿಟ್ ಮಾತ್ರ ಸೇಲ್ ಆಗಿವೆ. ವಿಶ್ಲೇಷಕರ ಪ್ರಕಾರ ಮುಂದಿನ ತಿಂಗಳಲ್ಲೂ ಇದೇ ಪರಿಸ್ಥಿತಿ ಮುಂದವರಿಯಲಿದೆ.

2012 ದೀಪಾವಳಿ ಸೀಸನ್ ಬಳಿಕ ಭಾರತೀಯ ಮಾರುಕಟ್ಟೆ ಹಿನ್ನಡೆ ಅನುಭವಿಸಿತ್ತು. ಕಾರು ಉತ್ಪಾದಕಾ ಸಂಸ್ಥೆಗಳು ಆಕರ್ಷಕ ದರ, ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಹಾಗೂ ಹಲವು ಸ್ಕೀಮ್ ಪ್ರಸ್ತುತಪಡಿಸಿದ್ದರೂ ಗ್ರಾಹಕರನ್ನು ಶೋ ರೂಂನತ್ತ ಆಕರ್ಷಿಸುವಲ್ಲಿ ವಿಫಲವಾಗಿದ್ದರು.

2013 ಎಪ್ರಿಲ್ ತಿಂಗಳಲ್ಲಿ 9 ಕಾರು ತಯಾರಕ ಕಂಪನಿಗಳು ಕುಸಿತ ಅನುಭವಿಸಿದ್ದು, ಕೇವಲ 6 ಕಂಪನಿಗಳು ಮಾತ್ರ ಧನಾತ್ಮಕ ಮಾರಾಟ ಸಾಧಿಸಿದೆ. ಮಾರುತಿ ಸುಜುಕಿ, ರೆನೊ ಇಂಡಿಯಾ ಹಾಗೂ ಮಹೀಂದ್ರ ಆಂಡ್ ಮಹೀಂದ್ರ ಮಂದಹಾಸ ಬೀರಿದ್ದರೆ ಫೋರ್ಡ್ ಇಂಡಿಯಾ, ಹ್ಯುಂಡೈ, ಟಾಟಾ ಮೋಟಾರ್ಸ್ ಹಾಗೂ ಟೊಯೊಟಾ ಕಿರ್ಲೊಸ್ಕರ್ ನಿರಾಸೆ ಅನುಭವಿಸಿತ್ತು.

English summary
April 2013 marked the sixth consecutive month of declining auto sales in India. This is the longest stretch of decline in the history of Indian auto industry, whose sales records are maintained by SIAM- Society of Indian Automobile Manufacturers, since 1997/98.
Story first published: Monday, May 13, 2013, 12:55 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark