ತಿಂಗಳಿಗೊಮ್ಮೆ 'ಸೈಕಲ್ ದಿನಾಚರಣೆ'; ಇದು ಮೋದಿ ಮಂತ್ರ

Written By:

ವರ್ಧಿಸುತ್ತಿರುವ ಇಂಧನ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಚೇರಿ ಕಲಾಪಗಳಿಗೆ ತೆರಳುವವರು ತಿಂಗಳಿಗೊಮ್ಮೆಯಾದರೂ 'ಸೈಕಲ್ ದಿನಾಚರಣೆ' ಹಮ್ಮಿಕೊಳ್ಳಬೇಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.

ಇಂದಿನ ದಿನಗಳಲ್ಲಿ ಕಾರುಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಇಂಧನ ಬಳಕೆಯು ವಿಪರೀತವಾಗಿದೆ. ಈ ಎಲ್ಲ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ಹತೋಟಿಗೆ ತರುವ ನಿಟ್ಟಿನಲ್ಲಿ ಸೈಕಲ್ ಡೇ ಆಚರಿಸಲು ಮೋದಿ ವಿನಂತಿ ಮಾಡಿದ್ದಾರೆ.

ನಗರಾಭಿವೃದ್ಧಿ ವಿಚಾರ ಸಂಕಿರಣವೊಂದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಇಂದೊಂದು ಹೊಸ ಕಲ್ಪನೆಯಲ್ಲ. ಡೆನ್ಮಾಕ್‌ಗಳಂತಹ ರಾಷ್ಟ್ರಗಳಲ್ಲಿ ತೆರಿಗೆ ವಿನಾಯಿತಿ ನೀಡುವ ಮೂಲಕ ಸಾರ್ವಜನಿಕರು ಸೈಕಲ್ ಬಳಕೆ ಮಾಡುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಈ ನಿಟ್ಟಿನಲ್ಲಿ ಸೈಕಲ್‌ಗಳ ಬಳಕೆ ಹಾಗೂ ಸುರಕ್ಷತೆಗಾಗಿ ಸರಿಯಾದ ರೀತಿಯಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿಯಾಗಬೇಕಾದ ಅಗತ್ಯವಿದೆ ಎಂದು ಮೋದಿ ತಿಳಿಸಿದ್ದಾರೆ.

ತನ್ನ ಬಳಕೆಯ ಬಹುತೇಕ ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಭಾರತದಲ್ಲಿ ಜಾಗತಿಕ ಮಟ್ಟದಲ್ಲಿನ ಬೆಲೆ ಏರುಪೇರಿನ ಪರಿಸ್ಥಿತಿ ನೇರ ಹೊಡೆತ ನೀಡುತ್ತಿದ್ದು, ವಾರ್ಷಿಕವಾಗಿ 90,000 ಕೋಟಿ ರು.ಗಳಷ್ಟು ವೆಚ್ಚ ತಗಲುತ್ತಿದೆ.

ಹಾಗೆಯೇ ಜಾಗತಿಕವಾಗಿ ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಹುಣ್ಣಿಮೆ ದಿನಗಳಲ್ಲಿ ನಗರ ಬೀದಿ ಲೈಟ್‌ಗಳನ್ನು ಆಫ್ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

English summary
At least one day a month can be a 'cycle day' says Gujarat's Chief Minister Narendra Modi.
Story first published: Friday, October 18, 2013, 9:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark