ಮತ ಎಣಿಕೆ; ಸುಗಮ ಸಂಚಾರ, ವಾಹನ ನಿಲುಗಡೆಗೆ ಸಹಕರಿಸಿ!

Written By:
ಪತ್ರಿಕಾ ಪ್ರಕಟಣೆ:

ದಿನಾಂಕ 05/05/2013ರಂದು ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಮೌಂಟ್ ಕಾರ್ಮೆಲ್ ಕಾಲೇಜ್, ಆರ್. ಸಿ ಕಾಲೇಜ್, ಗೃಹ ವಿಜ್ಞಾನ ಕಾಲೇಜ್ ಮತ್ತು ಮಹಾರಾಣಿ ಕಾಲೆಜ್‌ಗಳಲ್ಲಿ ದಿನಾಂಕ 08/05/2013ರಂದು ಬೆಳಗ್ಗೆ 8.00 ಗಂಟೆಗೆ ನಡೆಯಲಿರುವುದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರು ಬೆಂಬಲಿಗರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿರುವುದರಿಂದ ಮತ ಎಣಿಕೆ ಕೇಂದ್ರ ಮತ್ತು ಸುತ್ತು ಮುತ್ತಲ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಮತ್ತು ವಾಹನಗಳ ನಿಲುಗಡೆಗೆ ಯಾವುದೇ ರೀತಿಯಲ್ಲಿ ಅಡಚಣೆಯಾಗದಂತೆ ಸೂಕ್ತ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ.

ವಾಹನ ನಿಲುಗಡೆ ನಿಷೇಧ ರಸ್ತೆಗಳು:

1. ಪ್ಯಾಲೇಸ್ ರಸ್ತೆ- ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ರೈಲ್ವೇ ಕೆಳ ಸೇತುವೆ ವರೆಗೆ.

2. ಉದಯಾ ಟಿ.ವಿ ಜಂಕ್ಷನ್‌ನಿಂದ-ವಸಂತ ನಗರ ರೈಲ್ವೇ ಕೆಳ ಸೇತುವೆ ವರೆಗೆ.

3. ರೇಸ್ ಕೋರ್ಸ್ ರಸ್ತೆ - ಬಸವೇಶ್ವರ ವೃತ್ತದಿಂದ - ಖನಿಜ ಭವನದ ವರೆಯ ರಸ್ತೆಯ ಎರಡೂ ಬದಿಯಲ್ಲಿ

4. ಟಿ. ಚೌಡಯ್ಯ ರಸ್ತೆ - ಹಳೆ ಹೈಗ್ರೌಂಡ್ಸ್ ಪಿ. ಎಸ್ ಜಂಕ್ಷನ್‌ನಿಂದ - ವಿಂಡ್ಸರ್ ಮೇನರ್ ವರೆಗೆ ರಸ್ತೆಯ ಎರಡೂ ಬದಿ.

5. ಶೇಷಾಧ್ರಿ ರಸ್ತೆ - ಆನಂದ ರಾವ್ ವೃತ್ತದಿಂದ - ಕೆ.ಆರ್. ವೃತ್ತದ ವರೆಗೆ ರಸ್ತೆಯ ಎರಡೂ ಬದಿ

6. ಕೆ.ಜಿ. ರಸ್ತೆ

7. ಕಾಳಿದಾಸ ರಸ್ತೆ (ಸುಬ್ಬಣ್ಣ ಸರ್ಕಲ್‌ನಿಂದ ಪ್ಯಾಲೇಸ್ ಕ್ರಾಸ್)

8. ಎಸ್‌.ಎಸ್.ಎಂ.ಆರ್.ವಿ ಕಾಲೇಜಿನ ಸುತ್ತುಮುತ್ತಲ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

ವಾಹನ ನಿಲುಗಡೆ ರಸ್ತೆಗಳು:

1. ಚುನಾವಣಾ ಮತ ಎನಿಕೆ ಕಾರ್ಯಕ್ಕೆ ದ್ವಿಚಕ್ರ ವಾಹನದಲ್ಲಿ ಬರುವಂತಹ ಅಧಿಕಾರಿ/ಸಿಬ್ಬಂದಿಯವರುಗಳಿಗೆ ಫ್ರೀಡಂ ಪಾರ್ಕ್ ಮುಂಭಾಗದ ವಾಹನ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

2. ಚುನಾವಣಾ ಬಂದೋಬಸ್ತ್ ಕರ್ತವ್ಯದಲ್ಲಿ ಭಾಗವಹಿಸುವ ಎಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರ ವಾಹನ ನಿಲುಗಡೆಗೆ ಫ್ರೀಡಂ ಪಾರ್ಕ್ ಮುಂಭಾಗದ ವಾಹನ ನಿಲ್ದಾಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

3. ಕಾರು ಮತ್ತು ಬಸ್ಸುಗಳಲ್ಲಿ ಬರುವಂತಹ ಸಾರ್ವಜನಿಕರು ತಮ್ಮ ವಾಹನಗಳನ್ನು ಫ್ರೀಡಂ ಪಾರ್ಕ್ ಮೈದಾನದಲ್ಲಿ ನಿಲುಗಡೆ ಮಾದಲು ವ್ಯವಸ್ಥೆ ಕಲ್ಪಿಸಲಾಗಿದೆ.

4. ದ್ವಿಚಕ್ರ ವಾಹನಗಳಲ್ಲಿ ಬರುವಂತಹ ಸಾರ್ವಜನಿಕರು ತಮ್ಮ ವಾಹನಗಳನ್ನು ಸೆಂಟ್ರಲ್ ಕಾಲೇಜು ಹಳೇ ಕ್ರಿಕೆಟ್ ಮೈದಾನದ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

5. ರೇಸ್ ಕೋರ್ಸ್ ರಸ್ತೆ - ಖನಿಜ ಭವನದಿಂದ ಮೌರ್ಯ ಹೋಟೆಲ್ ವರೆಗೆ ರಸ್ತೆಯ ಒಂದು ಬದಿಯಲ್ಲಿ.

6. ಟಿ. ಚೌಡಯ್ಯ ರಸ್ತೆ - ಎಲ್. ಆರ್.ಡಿ.ಇ ಯಿಂದ - ರಾಜಭವನದ ವರೆಗೆ ರಸ್ತೆಯ ಒಂದು ಬದಿ (ಪೌಂಟೆನ್ ಕಡೆ)

7. ಮಿಲ್ಲರ್ ರಸ್ತೆ-ಚಂದ್ರಿಕಾ ಜಂಕ್ಷನ್‌ನಿಂದ-ಎಲ್.ಆರ್.ಡಿ.ಇ ವರೆಗೆ.

8. 8ನೇ ಮೈನ್ ವಸಂತನಗರ - ರಸ್ತೆಯ ಒಂದು ಬದಿ

9. ಫ್ರೀಡಂ ಪಾರ್ಕ್ ಆವರಣ

10. ಸೆಂಟ್ರಲ್ ಕಾಲೇಜ್ ಆವರಣ

11. ಮೌಂಟ್ ಕಾರ್ಮೆಲ್ ಕಾಲೇಜ್‌ನಲ್ಲಿ ನಡೆಯುವ ಮತ ಎನಿಕೆ ವೇಳೆ ಹಾಜರಾಗುವ ಕಾರ್ಯಕರ್ತರುಗಳ ವಾಹನಗಳು ಮುಖ್ಯ ಆರಮನೆ ಮೈದಾನದ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.

12. ವಿಕಾಸ ಸೌಧದ ವಾಹನ ನಿಲುಗಡೆ ಸ್ಥಳದ ಮುಂಭಾಗ

13. ಪೊಲೀಸ್ ವಾಹನಗಳ ನಿಲುಗಡೆ ರೇಸ್ ಕೋರ್ಸ್ ಪಾರ್ಕಿಂಗ್ ಸ್ಥಳ (ಹೈಗ್ರಾಂಡ್ಸ್ ಸಂಚಾರ ಪಿ.ಎಸ್ ಆವರಣ)

ಮೇಲ್ಕಂಡ ರಸ್ತೆಗಳಲ್ಲಿ ದಿನಾಂಕ 08/05/2013 ರಂದು ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಬದಲಿ ಮಾರ್ಗಗಳನ್ನು ಬಳಸಲು ಕೋರಲಾಗಿದೆ.

English summary
The counting of recently concluded assembly election being done at Mount Carmel, College, R.C. College, Home Science College and Maharani College on 08/05/2013 at 8 am in the morning, due to which different Political Parties Nominated Candidates and their supporters, workers will be arriving through vehicles in large numbers , because of this to have smooth flow of traffic movement and to avoid any inconvenience for Vehicular Parking necessary traffic arrangements are made.
Story first published: Tuesday, May 7, 2013, 15:21 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark