ಫಿಯೆಟ್ ಕ್ರಾಸೋವರ್, ಜೀಪ್ ಆಗಮನ ಖಚಿತ

Written By:

ಭಾರತದಲ್ಲಿರುವ ಫಿಯೆಟ್ ಕಾರುಗಳ ಪಟ್ಟಿಗೆ ಇನ್ನೊಂದು ಕಾರು ಸೇರ್ಪಡೆಯಾಗಲಿದೆ. ಹೌದು, ಮುಂದಿನ ವರ್ಷ ಫಿಯೆಟ್ ಕ್ರಾಸೋವರ್ ಕಾರು ಭಾರತ ಮಾರುಕಟ್ಟೆ ಪ್ರವೇಶಿಸಲಿರುವುದು ಬಹುತೇಕ ಖಚಿತವಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದರ ಜತೆಗೆ ಎರಡು ಜೀಪ್ ಮಾದರಿಗಳು ಸಹ ದೇಶಕ್ಕೆ ಪರಿಚಯವಾಗಲಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಪುಂಟೊ ಹ್ಯಾಚ್‌ಬ್ಯಾಕ್ ಮತ್ತು ಲಿನಿಯಾ ಸೆಡಾನ್ ಕಾರುಗಳಿವೆ. ಇದೀಗ ಈ ಪಟ್ಟಿ ಇನ್ನಷ್ಟು ಬೆಳೆಯಲಿದೆ.

Jeep

ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಯೆಟ್ ಪ್ರತಿನಿಧಿ, ಮುಂದಿನ ವರ್ಷ ಜೀಪ್ ಮಾದರಿಗಳು ಲಾಂಚ್ ಆಗಲಿದ್ದು, ಈ ಪೈಕಿ ಕ್ರಾಸೋವರ್ ಆವೃತ್ತಿ ಅಚ್ಚರಿ ಎಂಟ್ರಿಯಾಗಿರಲಿದೆ ಎಂದಿದ್ದಾರೆ.

ಫಿಯೆಟ್ ನೂತನ ಕ್ರಾಸೋವರ್, ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಯನ್ನು ಅನುಸರಿಸಲಿದೆ. ಇದು ಪುಂಟೊದಲ್ಲಿರುವುದಕ್ಕೆ ಸಮಾನವಾದ 1.3 ಲೀಟರ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆ ಭಾರತಕ್ಕೆ ಎಂಟ್ರಿ ಕೊಡಲಿರುವ ಜೀಪ್ ಕೆರೊಕಿ ಮತ್ತು ಜೀಪ್ ವ್ರಾಂಗ್ಲರ್ ಆವೃತ್ತಿಗಳು ಸ್ಥಳೀಯವಾಗಿ ಜೋಡಣೆಯಾಗಲಿದೆ.

English summary
Fiat India, which presently sells only the Punto hatchback, Linea sedan and the lower end, Classic version of the sedan plans to expand its lineup next year, starting with a crossover and two Jeep models, which of course will be imported.
Story first published: Tuesday, December 3, 2013, 11:04 [IST]
Please Wait while comments are loading...

Latest Photos