ವರ್ಷದ ಅಂತರಾಷ್ಟ್ರೀಯ ಎಂಜಿನ್ 'ಫೋರ್ಡ್ ಇಕೊಬೂಸ್ಟ್'

Written By:

ವರ್ಷದ ಅಂತರಾಷ್ಟ್ರೀಯ ಎಂಜಿನ್ ಪ್ರಶಸ್ತಿಗೆ ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್‌ನ 1.0 ಲೀಟರ್ 'ಇಕೊ ಬೂಸ್ಟ್' ಎಂಜಿನ್ ಪಾತ್ರವಾಗಿದೆ.

ಎಂಜಿನ್ ತಂತ್ರಜ್ಞಾನ ಅಂತರಾಷ್ಟ್ರೀಯ ಮ್ಯಾಗಜಿನ್ (Engine Technology International magazine) ಬಿಡುಗಡೆ ಮಾಡಿರುವ 2012 ಸಾಲಿನ ವರ್ಷದ ಅಂತರಾಷ್ಟ್ರೀಯ ಎಂಜಿನ್ ಜತೆಗೆ ಫೋರ್ಡ್‌ನ 1.0 ಲೀಟರ್ ಇಕೊಬೂಸ್ಟ್ ಎಂಜಿನ್ 'ಅತ್ಯುತ್ತಮ ಹೊಸ ಎಂಜಿನ್' ಹಾಗೂ '1.0 ಅಡಿಯಲ್ಲಿ ಅತ್ಯುತ್ತಮ ಎಂಜಿನ್' ಪ್ರಶಸ್ತಿಗಳಿಗೂ ಪಾತ್ರವಾಗಿದೆ.

ಭಾರತಕ್ಕೂ ಇಕೊಸ್ಪೋರ್ಟ್ ರಂಗಪ್ರವೇಶ...

ಇಲ್ಲಿ ಇನ್ನು ವಿಶೇಷವಾದ ಸಂಗತಿಯೆಂದರೆ ಬಹುನಿರೀಕ್ಷಿತ ಇಕೊಸ್ಪೋರ್ಟ್ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಕಾರು ಖರೀದಿಗಾರರಲ್ಲಿ ಕೂತೂಹಲ ಇನ್ನಷ್ಟು ಹೆಚ್ಚಿಸಿದೆ.

ಭಾರತಕ್ಕೆ ಪ್ರವೇಶ ಪಡೆಯಲಿರುವ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರಿನಲ್ಲಿ ಒಟ್ಟು ಮೂರು ಎಂಜಿನ್ ಆಯ್ಕೆಗಳಿರಲಿದೆ. ಅವುಗಳೆಂದರೆ,

1 ಲೀಟರ್ ಪೆಟ್ರೋಲ್ ಇಕೊಬೂಸ್ಟ್,

1.5 ಲೀಟರ್ ಪೆಟ್ರೋಲ್ ಹಾಗೂ

1.5 ಲೀಟರ್ ಡೀಸೆಲ್ ಎಂಜಿನ್

ಈ ಪೈಕಿ ಟಾಪ್ ವೆರಿಯಂಟ್‌ನಲ್ಲಿ 1 ಲೀಟರ್ ಪೆಟ್ರೋಲ್ ಇಕೊಬೂಸ್ಟ್ ಎಂಜಿನ್ ಆಳವಡಿಕೆಯಾಗಲಿದೆ. ಇದು ಗರಿಷ್ಠ ನಿರ್ವಹಣೆ ಹಾಗೂ ಇಂಧನ ಕ್ಷಮತೆ ನೀಡಲು ಸಾಧ್ಯವಾಗಲಿದೆ. ವರದಿಗಳ ಪ್ರಕಾರ ಇದು ಪ್ರತಿ ಲೀಟರ್‌ಗೆ 18.7 ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇದೇ ಕಾರಣಕ್ಕಾಗಿ ಫೋರ್ಡ್ ಇಕೊಸ್ಪೋರ್ಟ್ ದೇಶದಲ್ಲಿ ಭಾರಿ ಕ್ರೇಜ್ ಸೃಷ್ಟಿ ಮಾಡಲು ಕಾರಣವಾಗಿದೆ. ಒಟ್ಟಿನಲ್ಲಿ ಅಂತರಾಷ್ಟ್ರೀಯ ಎಂಜಿನ್ ಆಫ್ ದಿ ಇಯರ್ ಪ್ರಶಸ್ತಿ ಕೂಡಾ ಫೋರ್ಡ್ ಇಕೊಬೂಸ್ಟ್ ಎಂಜಿನ್ ಹರಸಿಕೊಂಡು ಬಂದಿರುವುದು ಇನ್ನಷ್ಟು ಪ್ರಚಾರ ಲಭಿಸಲು ಕಾರಣವಾಗಿದೆ.

English summary
Ford’s new 1.0-litre EcoBoost engine – which was launched to widespread acclaim this year in the Ford Focus, in Europe – is named 2012 “International Engine of the Year”.
Story first published: Monday, May 27, 2013, 12:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark