ಇದೀಗ ಅಧಿಕೃತ: ಫೋರ್ಡ್ ಇಕೊಸ್ಪೋರ್ಟ್ ಬುಕ್ಕಿಂಗ್ ಆರಂಭ
ಪೋರ್ಡ್ ಡೀಲರ್‌ಗಳ ಬಳಿ ಬುಕ್ಕಿಂಗ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜೂನ್ ಅಂತ್ಯದ ಅಥವಾ ಜುಲೈ ಆರಂಭದಲ್ಲಿ ಡೆಲಿವರಿ ಆರಂಭವಾಗಲಿದೆ. ಬುಕ್ಕಿಂಗ್‌ಗಾಗಿ 50,000 ರು. ಪಾವತಿಸಬೇಕಾಗಿದೆ.
ಹಾಗಿದ್ದರೂ ಇಕೊಸ್ಪೋರ್ಟ್ ಲಾಂಚ್ ಬಗ್ಗೆ ಯಾವುದೇ ಅಧಿಕೃತ ದಿನಾಂಕವನ್ನು ಫೋರ್ಡ್ ಇದುವರೆಗೆ ಘೋಷಿಸಿಲ್ಲ. ಹಾಗಿದ್ದರೂ ನಿಕಟ ಮೂಲಗಳ ಪ್ರಕಾರ ಜೂನ್ 11ರ ವೇಳೆಗೆ ಮಾರುಕಟ್ಟೆಗೆ ಅಪ್ಪಳಿಸಲಿದೆ.
ದೇಶದ ಎಂಟು ಪ್ರಮುಖ ನಗರ ಸೇರಿದಂತೆ ಎಲ್ಲ ತಾಂತ್ರಿಕ ಮಾಹಿತಿಗಳನ್ನು ಕಂಪನಿ ಈಗಾಗಲೇ ಹೊರಗೆಡವಿದೆ. ಇದು ಗ್ರಾಹಕರಿಗೆ ಫೋರ್ಡ್ ಇಕೊಸ್ಪೋರ್ಟ್ ಕಾರನ್ನು ನಿಕಟವಾಗಿ ಅರಿತುಕೊಳ್ಳಲು ನೆರವಾಗಲಿದೆ.
ಇದರ ಇಕೊಬೂಸ್ಟ್ ಎಂಜಿನ್ ಹಾಗೂ ಎಮರ್ಜನ್ಸಿ ಅಸಿಸ್ಟಂಟ್ ಸಿಸ್ಟಂ ಗ್ರಾಹಕರಲ್ಲಿ ಹೆಚ್ಚು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ (1.5 ಲೀಟರ್ TDCI ಟರ್ಬೊ ಯುನಿಟ್, 1.5 ಲೀಟರ್ Ti-VCT ಪೆಟ್ರೋಲ್ ಯುನಿಟ್ ಹಾಗೂ 1.0 ಲೀಟರ್ ಇಕೊಬೂಸ್ಟ್) ಫೋರ್ಡ್ ಇಕೊಸ್ಪೋರ್ಟ್ ಆಗಮನವಾಗುತ್ತಿದೆ. ಹಾಗೆಯೇ Ambiente, Trend, Titanium and Titanium Optional ವೆರಿಯಂಟ್‌ಗಳಲ್ಲಿ ಲಭ್ಯವಿದೆ.


Click it and Unblock the Notifications









