ಕ್ವಾಡ್ರಾಸೈಕಲ್ ಕರಡು ಅಧಿಸೂಚನೆ ಹೊರಡಿಸಿದ ಸರಕಾರ

Written By:

ನಾಲ್ಕು ಚಕ್ರಗಳ ನೂತನ ಕ್ವಾಡ್ರಾಸೈಕಲ್ ಕನಸು ಸದ್ಯದಲ್ಲೇ ನನಸಾಗಲಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರವು ಕರಡು ಅಧಿಸೂಚನೆ ಹೊರಡಿಸಿದೆ.

ಕ್ವಾಡ್ರಾಸೈಕಲ್ ನಿಯಾಮಾಳಿಗಳು ಸೇರ್ಪಡೆಯಾಗುತ್ತಿರುವಂತೆಯೇ ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ (ಸಿಎಂವಿಆರ್) ಬದಲಾವಣೆ ಕಂಡುಬರಲಿದೆ. ಪ್ರಸ್ತುತ ಕರಡು ಅಧಿಸೂಚನೆ 30 ದಿನಗಳ ವರೆಗೆ ಚಾಲ್ತಿಯಲ್ಲಿರಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಕಾಯ್ದೆಯಲ್ಲಿ ತಿದ್ದುಪಡಿಸಿ ಬಯಸಿ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ.

ಹೊಸ ನಿಯಮದಂತೆ ನಾಲ್ಕು ಚಕ್ರದ ಈ ವಿಭಾಗದ ವಾಹನಗಳನ್ನು ಟ್ಯಾಕ್ಸಿ ಅಥವಾ ಸರಕು ಸಾಗಣೆ ವಾಹನವಾಗಿ ಬಳಕೆ ಮಾಡಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ಪ್ರಯಾಣಕ್ಕೆ ಬಳಸುವಾಗಿಲ್ಲ. ಹಾಗೆಯೇ ಇದರ ಭಾರ 450 ಕೆ.ಜಿ. ಹಾಗೂ 550 ಕೆ.ಜಿ ನಡುವೆ ಇರಬೇಕು. ಪ್ರಯಾಣಿಕ ವಾಹನವಾಗಿ ಇದು 3+1 ಸೀಟು ವ್ಯವಸ್ಥೆ ಹೂಂದಿರಬೇಕು.

ಅಂದ ಹಾಗೆ ಕ್ವಾಡ್ರಾಸೈಕಲ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಬಜಾಜ್ ಆರ್‌ಇ60 ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶ ಪಡೆಯುವ ಸಾಧ್ಯತೆಗಳಿವೆ. ಇದು ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.

English summary
Quadricycles in India are closer to reality as the Government has issued a draft notification, listing rules and regulations that will ultimately make permanent changes to Central Motor Vehicles Rules (CMVR) to accommodate the new breed of four wheelers.
Story first published: Sunday, September 15, 2013, 9:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark