ನೂತನ ಅಂಬಾಸಿಡರ್ ಎನ್‌ಕೋರ್ ಬಿಎಸ್4 ಲಾಂಚ್

By Nagaraja

ದೇಶದ ಪ್ರಖ್ಯಾತ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಹಿಂದೂಸ್ತಾನ್ ಮೋಟಾರ್ಸ್, ತನ್ನ ಐಕಾನಿಕ್ ಅಂಬಾಸಿಡರ್‌ನ ಬಿಎಸ್4 ಮಾದರಿ ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಅಂಬಾಸಿಡರ್ ಸೆಡಾನ್ ಕಾರು 'ಎನ್‌ಕೋರ್' ಎಂದು ಹೆಸರಿಸಲ್ಪಡಲಿದೆ.

ಈ ಹಿಂದೆ ಬಿಎಸ್III ಎಂಜಿನ್ ಮಾನದಂಡ ಹೊಂದಿರುವ ಕಾರುಗಳನ್ನು ಕೇಂದ್ರ ಸರಕಾರ ನಿಷೇಧಕ್ಕೊಳಪಡಿಸಿತ್ತು. ಇದು ಕಾರ್ಬನ್ ಡೈ ಓಕ್ಸೈಡ್ ಹೆಚ್ಚು ಹೊರಸೂಸುವುದರಿಂದ ಮಾಲಿನ್ಯ ಜಾಸ್ತಿಯಾಗುತ್ತಿತ್ತು. ಇದೀಗ ನೂತನ ಬಿಎಸ್4 ಎಂಜಿನ್ ಆಗಮನದೊಂದಿಗೆ ದೇಶದ ಅತಿದೊಡ್ಡ ಟ್ಯಾಕ್ಸಿ ಮಾರುಕಟ್ಟೆ ಹೊಂದಿರುವ ಕೋಲ್ಕತ್ತಾದಲ್ಲಿ ಅಂಬಾಸಿಡರ್ ಮತ್ತೊಮ್ಮೆ ಸದ್ದು ಮಾಡುವ ನಿರೀಕ್ಷೆಯಿದೆ.

ದರ ಮಾಹಿತಿ: 4.97 ಲಕ್ಷ ರು. (ಎಕ್ಸ್ ಶೋ ರೂಂ ಕೋಲ್ಕತ್ತಾ)


ಕೋಲ್ಕತ್ತಾದ 'ನೊ-ರಫ್ಯೂಸಲ್' ಟ್ಯಾಕ್ಸಿ ಸೆಗ್ಮೆಂಟ್‌ನಲ್ಲಿ ಅಂಬಾಸಿಡರ್ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದು, ಮುಷ್ಕರ ಇತ್ಯಾದಿ ಅಹಿತಕರ ಘಟನೆಗಳನ್ನು ಲೆಕ್ಕಿಸದೇ ವರ್ಷದ 365 ದಿನವೂ 24x7 ಸೇವೆಯನ್ನು ಒದಗಿಸುತ್ತಿದೆ.

ನೂತನ ಅಂಬಾಸಿಡರ್‌‌ನ ಶ್ವೇತ ಬಣ್ಣದ ಮಧ್ಯದಲ್ಲಿ ನೀಲಿ ಬರೆ ಹಾದು ಹೋಗುತ್ತಿದ್ದು, ನೊ ರೆಫ್ಯೂಸಲ್ ಟ್ಯಾಕ್ಸಿ ಕೂಡಾ ಲಗತ್ತಿಸಲಾಗಿದೆ. ಅಂದ ಹಾಗೆ ನೂತನ ಎನ್‌ಕೋರ್ ಮಾಡೆಲ್ ಖರೀದಿ ವೇಳೆ ಹಳೆ ಅಂಬಾಸಿಡರ್ ಎಕ್ಸ್‌ಚೇಂಜ್ ಮಾಡಲು ಬಯಸಿದರೆ ಗ್ರಾಹಕರಿಗೆ ರಿಯಾಯಿತಿ ದರ ಕೂಡಾ ದೊರಕಲಿದೆ. ನೂತನ ಎನ್‌ಕೋರ್ 1500ಸಿಸಿ ಬಿಎಸ್‌4 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಶ್ರೇಷ್ಠ ಎಂಜಿನ್ ಸಾಮರ್ಥ್ಯ ಜತೆ ಗರಿಷ್ಠ ಇಂಧನ ಕ್ಷಮತೆಯನ್ನು ಹೊಂದಿರಲಿದೆ.

Most Read Articles

Kannada
English summary
Hindustan Motors today launched the all new Ambassador with the BS4 compliant engine. HM's calling it the Encore. With its upgraded engine HM can start selling its sedan once again in cities where sale of BSIII model was banned.
Story first published: Monday, September 2, 2013, 12:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X