ಹ್ಯುಂಡೈ ಐ10 ಡೀಸೆಲ್ ಕಾರು ಸದ್ಯಕ್ಕಿಲ್ಲ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಲಾಂಚ್ ಮಾಡಿತ್ತು. ಇದರಲ್ಲಿ ಹೊಸತಾದ 1.1 ಲೀಟರ್ 3 ಸಿಲಿಂಡರ್ ಯು2 ಸಿಆರ್‌ಡಿಐ ಟರ್ಬೊ ಡೀಸೆಲ್ ಎಂಜಿನ್ ಪರಿಚಯಿಸಲಾಗಿತ್ತು.

ಇದು ಹ್ಯುಂಡೈ‌ನಿಂದ ಆಗಮನವಾಗಿರುವ ಅತಿ ಚಿಕ್ಕ ಡೀಸೆಲ್ ಎಂಜಿನ್ ಆಗಿದೆ. ಪ್ರಸ್ತುತ ಡೀಸೆಲ್ ಎಂಜಿನ್ ಹ್ಯುಂಡೈ ಐ10ನಲ್ಲೂ ಆಳವಡಿಸಲಾಗುವುದು ಎಂಬುದನ್ನು ನಿರೀಕ್ಷಿಸಲಾಗಿತ್ತು.


ಆದರೆ ನಿರಾಸೆಯೆಂಬಂತೆ ಹ್ಯುಂಡೈ ಐ10 ಡೀಸೆಲ್ ಎಂಜಿನ್ ಮಾನದಂಡಗಳಲ್ಲಿ ಆಗಮನವಾಗಲ್ಲ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದ್ದು, ಕಂಪನಿಯಲ್ಲಿ ಇಂತಹ ಯಾವುದೇ ಪ್ರಸ್ತಾಪವಿಲ್ಲ ಎಂಬುದನ್ನು ತಿಳಿಸಿದೆ.

ದೇಶದ ಡೀಸೆಲ್ ಇಂಧನ ದರಗಳಲ್ಲಿ ಅನಿಶ್ಚಿತತೆ ಮುಂದುವರಿದಿರುವುದು ಹ್ಯುಂಡೈ ನಿರ್ಧಾರದ ಹಿಂದಿರುವ ಪ್ರಮುಖ ಕಾರಣವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಡೀಸೆಲ್ ಇಂಧನ ದರ ಗಣನೀಯವಾಗಿ ವರ್ಧಿಸಿದೆ. ಹಾಗೆಯೇ ಡೀಸೆಲ್ ಎಂಜಿನ್ ಕಾರುಗಳು ನಿರ್ವಹಣಾ ವೆಚ್ಚ ಕೂಡಾ ಅಧಿಕವಾಗಿದೆ ಎಂದು ಹ್ಯುಂಡೈ ತಿಳಿಸಿದೆ.

ನಿಮ್ಮ ಮಾಹಿತಿಗಾಗಿ ಹ್ಯುಂಡೈ ಐ10 ದೇಶದಲ್ಲಿ 1.2 ಲೀಟರ್ ಮತ್ತು 1.1 ಲೀಟರ್ ಪೆಟ್ರೋಲ್ ಹಾಗೂ ಎಲ್‌ಪಿಜಿ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

Most Read Articles

Kannada
English summary
"There are no plans to share the 1.1 litre diesel engine with the i10", BS quotes Nalin Kapoor, senior general manager and group head marketing, Hyundai motor India as saying.
Story first published: Saturday, September 7, 2013, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X