ಹ್ಯುಂಡೈ ದರ ಏರಿಕೆ ಸದ್ಯಕ್ಕಿಲ್ಲ

Written By:

ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಸದ್ಯಕ್ಕೆ ತನ್ನೆಲ್ಲ ಮಾಡೆಲ್‌ಗಳಿಗ ದರ ಹೆಚ್ಚಳಗೊಳಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಈ ಬಗ್ಗೆ 'ಗ್ರಾಂಡ್ ಐ10' ಲಾಂಚ್ ವೇಳೆ ಪ್ರತಿಕ್ರಿಯಿಸಿದ್ದ ಪ್ರಧಾನ ವ್ಯವಸ್ಥಾಪಕ ನಲಿನ್ ಕಪೂರ್, ರೂಪಾಯಿ ಅಪಮೌಲ್ಯದ ಹೊರತಾಗಿಯೂ ಸದ್ಯಕ್ಕೆ ದರ ಹೆಚ್ಚಳಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದಿದ್ದಾರೆ.

ರಫ್ತು ಏರಿಕೆ..,

ಈ ನಡುವೆ ಗರಿಷ್ಠ ಪ್ರಮಾಣದಲ್ಲಿ ಕಾರುಗಳನ್ನು ರಫ್ತು ಮಾಡಲು ಯಶಸ್ವಿಯಾಗಿರುವುದು ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗಿದೆ ಎಂದು ಕಂಪನಿ ತಿಳಿಸಿದೆ. ದೇಶದಲ್ಲಿ ಉತ್ಪಾದನೆಯಾದ ಕಾರುಗಳ ಪೈಕಿ ಶೇಕಡಾ 40ರಷ್ಟು ರಫ್ತು ಮಾಡುವಲ್ಲಿ ಹ್ಯುಂಡೈ ಯಶಸ್ವಿಯಾಗಿದೆ. ಕಳೆದ ವರ್ಷ ಈ ಸಂಖ್ಯೆ 2.5 ಲಕ್ಷ ಯುನಿಟ್‌ಗಳಿಷ್ಟಿತ್ತು.

ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಆಗಮನವಾಗುವ ಸಾಂಟಾ ಫೆ ಹೊರತುಪಡಿಸಿ ಇತರೆಲ್ಲ ಹ್ಯುಂಡೈ ಮಾಡೆಲ್‌ಗಳನ್ನು ದೇಶದಲ್ಲಿ ಸ್ಥಳೀಯವಾಗಿ ಉತ್ಪಾದಿಸಲಾಗುತ್ತಿದೆ.

ಕಂಪನಿಯು ಇತ್ತೀಚೆಗಷ್ಟೇ ನೂತನ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡಿದ್ದವು. ಐ10 ಹಾಗೂ ಐ20 ನಡುವೆ ಕಾಣಿಸಿಕೊಂಡಿರುವ ಗ್ರಾಂಡ್ ಐ10 ಪ್ರಮುಖವಾಗಿಯೂ ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿಯೆನಿಸಿದೆ. ಪ್ರಸ್ತುತ ಹ್ಯುಂಡೈ ದೇಶದ ಒಟ್ಟು ಕಾರು ಮಾರುಕಟ್ಟೆಯ ಶೇಕಡಾ 20.4ರಷ್ಟು ಶೇರನ್ನು ಹೊಂದಿದೆ. ಈ ಮೂಲಕ ಅಗ್ರಸ್ಥಾನಿ ಮಾರುತಿ (ಶೇ. 43) ನಂತರದ ಸ್ಥಾನವನ್ನು ಆಲಂಕರಿಸಿದೆ.

English summary
Asked if the Hyundai India was planning to raise the prices, senior GM and group head (marketing) Nalin Kapoor said, "There is no plans to hike the product prices at the moment," he told reporters.
Story first published: Tuesday, September 10, 2013, 12:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark