ಐ10-ಐ20 ನಡುವೆ ಹೆಸರಿಸಿಕೊಳ್ಳಲಿರುವ ಹ್ಯುಂಡೈ ಸಣ್ಣ ಕಾರು

By Nagaraja

ದಕ್ಷಿಣ ಕೊರಿಯಾ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈನಿಂದ ಭಾರತದಲ್ಲಿ ಬಿಡುಗಡೆಯಾಗಲಿರುವ ನೂತನ ಸಣ್ಣ ಕಾರು ತನ್ನ ಜನಪ್ರಿಯ ಐ10 ಹಾಗೂ ಐ20 ನಡುವೆ ಹೆಸರಿಸಿಕೊಳ್ಳಲಿದೆ. ನಿಮ್ಮ ಮಾಹಿತಿಗಾಗಿ, ಹ್ಯುಂಡೈ ನೂತನ ಸಣ್ಣ ಡೀಸೆಲ್ ಹ್ಯಾಚ್‌ಬ್ಯಾಕ್ ಕಾರು ಈಗಾಗಲೇ ಪರೀಕ್ಷಾ ಘಟ್ಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಮಾರುತಿ ಬಳಿಕ ಹ್ಯುಂಡೈ ಕಾರುಗಳಿಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಹಾಗೆಯೇ ನೂತನ ಕಾರಿನ ಹೆಸರು ಏನಾಗಿರಬಹುದು ಎಂಬುದು ಎಲ್ಲರ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.

ಕಳೆದ ವಾರವಷ್ಟೇ ಹೊಸ ಸಣ್ಣ ಕಾರು ಹಾಗೂ ಕಾಂಪಾಕ್ಟ್ ಎಸ್‌ಯುವಿ ಸದ್ಯದಲ್ಲೇ ಲಾಂಚ್ ಮಾಡುವುದಾಗಿ ಹ್ಯುಂಡೈ ಇಂಡಿಯಾ ಘೋಷಿಸಿತ್ತು. ಮೂಲಗಳ ಪ್ರಕಾರ ನೂತನ ಸಣ್ಣ ಕಾರು 1.1 ಲೀಟರ್ ಎಂಜಿನ್ ಹೊಂದಿರಲಿದೆ. ಇದು ಐ10ಗಿಂತಲೂ ಹಿರಿದಾದ ಹಾಗೂ ಐ20ಗಿಂತಲೂ ಕಿರಿದಾಗಿದ ಎಂಜಿನ್ ಪಡೆಯಲಿದೆ.

ಹ್ಯುಂಡೈ ಐ15 ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿರುವ ಈ ನೂತನ ಕಾರು ಸೆಪ್ಟೆಂಬರ್‌ನಲ್ಲಿ ಸಾಗಲಿರುವ 2013 ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ. ಅಂತೆಯೇ ಭಾರತೀಯ ಮಾರುಕಟ್ಟೆಗೆ 2013 ವರ್ಷಾಂತ್ಯದಲ್ಲಿ ಅಥವಾ 2014 ವರ್ಷಾಂರಭದಲ್ಲಿ ಆಗಮಿಸುವ ಸಾಧ್ಯತೆಯಿದೆ.

Most Read Articles

Kannada
English summary
Hyundai India was once again caught testing their all new diesel hatchback for India. This new diesel Hyundai small car will be launched later this year. The car will be placed between i20 and i10.
Story first published: Thursday, April 4, 2013, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X