ನಂ.1 ಮಾರುತಿ ಹಿಮ್ಮೆಟ್ಟಿಸಲಿದೆಯೇ ಹ್ಯುಂಡೈ?

By Nagaraja

ದೇಶದ ಅತಿ ದೊಡ್ಡ ಕಾರು ಸಂಸ್ಥೆ ಎನಿಸಿಕೊಂಡಿರುವ ಮಾರುತಿ ಸುಜುಕಿ ಓವರ್‌ಟೇಕ್ ಮಾಡಿ ದೇಶದ ನಂ.1 ಕಾರು ಸಂಸ್ಥೆ ಎನಿಸಿಕೊಳ್ಳುವ ಮಹತ್ತರ ಯೋಜನೆಯನ್ನು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಹೊಂದಿದೆ.

ಹಲವು ನೂತನ ಕಾರುಗಳನ್ನು ಲಾಂಚ್ ಮಾಡುವ ಮುಖಾಂತರ ದಶಕದ ಅಂತ್ಯದ ವೇಳೆ ನಂ.1 ಸ್ಥಾನ ವಶಪಡಿಸಿಕೊಳ್ಳುವುದು ಕಂಪನಿಯ ಇರಾದೆಯಾಗಿದೆ. ನಂಬರ್ ಸಂಖ್ಯೆಯಲ್ಲಿ ಹ್ಯುಂಡೈಗೆ ಈ ಸ್ಥಾನ ಪ್ರಾಪ್ತಿಯಾಗುವುದು ಕಷ್ಟವೆನಿಸುತ್ತಿದೆ. ಹಾಗಿದ್ದರೂ ಜನರ ನೆಚ್ಚಿನ ಕಾರು ಎನಿಸಿಕೊಳ್ಳುವುದು ಕಂಪನಿ ಗುರಿಯಾಗಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಮುಖ್ಯಸ್ಥರು ತಿಳಿಸಿದ್ದಾರೆ.

Hyundai i10 grand

ಜಗತ್ತಿನ ಐದನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಎನಿಸಿಕೊಂಡಿರುವ ಹ್ಯುಂಡೈ ಮುಂದಿನ 18 ತಿಂಗಳೊಳಗೆ ಮೂರು ನೂತನ ಮಾಡೆಲ್‌ಗಳನ್ನು ದೇಶಕ್ಕೆ ಪರಿಚಯಿಸಲಿದೆ. ಇದರಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ಗ್ರಾಂಡ್ ಐ10 ಪ್ರಮುಖವೆನಿಸಿದೆ. 1.1 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಗ್ರಾಂಡ್ ಐ10, ಮಾರುತಿಯ ಸ್ವಿಫ್ಟ್ ಪ್ರತಿಸ್ಪರ್ಧಿಯೆನಿಸಲಿದೆ.

ಅದೇ ರೀತಿ ಇಯಾನ್ 1 ಲೀಟರ್ ಕಾರು ಆಲ್ಟೊ ಕೆ10 ಆೃವೃತ್ತಿಯನ್ನು ಹಿಮ್ಮೆಟ್ಟಿಸುವ ನಿರೀಕ್ಷೆಯಲ್ಲಿದೆ. ಹಾಗೆಯೇ ಮುಂದಿನ ವರ್ಷ ಮುಂದಿನ ಜನಾಂಗದ ಐ20 ಕಾರನ್ನು ಬಿಡುಗಡೆ ಮಾಡಲಿದೆ. ದೇಶದ ಕಾರು ಮಾರುಕಟ್ಟೆಯನ್ನು ಪರಿಗಣಿಸಿದಾಗ ಅರ್ಧದಷ್ಟು ಅಂದರೆ ಶೇಕಡಾ 48ರಷ್ಟು ಮಾರುತಿ ಸುಜುಕಿ ಅಧೀನತೆಯಲ್ಲಿದೆ. ನಂತರದ ಸ್ಥಾನದಲ್ಲಿರುವ ಹ್ಯುಂಡೈ ಶೇಕಡಾ 22ರಷ್ಟು ಶೇರನ್ನು ಮಾತ್ರ ಆಕ್ರಮಿಸಿಕೊಂಡಿದೆ.

ಮುಂಬರುವ ವರ್ಷಗಳಲ್ಲಿ ಒಂದೆರಡು ನೂತನ ಮಾಡೆಲ್ ಲಾಂಚ್ ಮಾಡುವುದು ಕಂಪನಿ ಗುರಿಯಾಗಿದೆ. ಈ ಮೂಲಕ ಬಜೆಟ್ ಕಾರು ಸೆಗ್ಮೆಂಟ್‌ನಲ್ಲಿ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವ ಗುರಿ ಹೊಂದಿದೆ.

Most Read Articles

Kannada
English summary
Hyundai has for long been the second largest carmaker in India, trailing behind Maruti Suzuki, which is the market leader by a huge margin. Hyundai Motor India has now been asked by the top management in South Korea to move on to the top, according to ET, which cites a Hyundai executive
Story first published: Thursday, August 8, 2013, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X