ಇಸುಝು ಎಂಯು-7, ಡಿ-ಮ್ಯಾಕ್ಸ್ ಭಾರತದಲ್ಲಿ ಲಾಂಚ್

By Nagaraja

ಜಪಾನ್‍ನ ಯುಟಿಲಿಟಿ ವಾಹನ ಸ್ಪೆಷಾಲಿಸ್ಟ್ ಆಗಿರುವ ಇಸುಝು, ಭಾರತಕ್ಕೆ ಎರಡು ಅತಿ ನೂತನ ಮಾದರಿಗಳನ್ನು ಪರಿಚಯಿಸಿಕೊಟ್ಟಿದೆ. ಹೈದರಾಬಾದ್‌ನಲ್ಲಿ ನೂತನ ಶೋ ರೂಂ ಆರಂಭಗೊಂಡ ಬೆನ್ನಲ್ಲೇ ಇಸುಝು ಕಂಪನಿಯಿಂದ ಇಂತಹದೊಂದು ಸ್ವಾಗತಾರ್ಹ ಬೆಳವಣಿಗೆ ಕಂಡುಬಂದಿದೆ.

ಭಾರತದಲ್ಲಿ ಡಿ ಮ್ಯಾಕ್ ರೆಗ್ಯೂಲರ್ ಕ್ಯಾಬ್, ಡಿ ಮ್ಯಾಕ್ಸ್ ಕ್ರ್ಯೂ ಕ್ಯಾಬ್ ಹಾಗೂ ಎಯು-7 ಪ್ರೀಮಿಯಂ ಎಸ್‌ಯುವಿ ಕಾರುಗಳನ್ನು ಇಸುಝು ಬಿಡುಗಡೆಗೊಳಿಸಿದೆ.

ಡಿ ಮ್ಯಾಕ್ಸ್ ಪಿಕಪ್ ರೆಗ್ಯೂಲರ್ ಕ್ಯಾಬ್ ವರ್ಷನ್ ದರ 6.87 ಲಕ್ಷ ರು.ಗಳಾಗಿವೆ. ಅದೇ ಹೊತ್ತಿಗೆ ಕ್ರ್ಯೂ ಕ್ಯಾಬ್ ದರ 8.09 ಲಕ್ಷ ರು.ಗಳಾಗಿವೆ. ಇನ್ನು ಎಂಯು-7 ಪ್ರೀಮಿಯಂ ಎಸ್‌ಯುವಿ ಕಾರಿನ ದರ 23.75 ಲಕ್ಷ ರು.ಗಳಾಗಿವೆ. ಇದು ಪ್ರಮುಖವಾಗಿಯೂ ಟೊಯೊಟಾ ಫೋರ್ಚುನರ್‌ಗೆ ಪೈಪೋಟಿ ನೀಡಲಿದೆ. ಹಾಗೆಯೇ ಮಹೀಂದ್ರದ ಬೊಲೆರೊ ಪಿಕಪ್, ಮಹೀಂದ್ರ ಜಿನಿಯೊ ಹಾಗೂ ಟಾಟಾ ಕ್ಸೆನಾನ್‌ಗೆ ಇಸುಝು ಡಿ ಮ್ಯಾಕ್ ಪಿಕಪ್ ಸವಾಲು ಒಡ್ಡಲಿದೆ.

ಇದೀಗ ಹೈದರಾಬಾದ್‌ನಲ್ಲಿ ನೂತನ ಶೋ ರೂಂ ಆರಂಭವಿಸಿರುವ ಇಝುಸು ಸದ್ಯದಲ್ಲೇ ಕೊಯಂಬತ್ತೂರಿನಲ್ಲೂ ಪ್ರದರ್ಶನ ಘಟಕ ತೆರೆಯಲಿದೆ. ಪ್ರಸ್ತುತ ಡಿ ಮ್ಯಾಕ್ಸ್, ಡಿಯು-7 ಹಾಗೂ ಸಿಬಿಯು ಮಾಡೆಲ್‌ಗಳನ್ನು ಥೈಲಾಂಡ್ ಘಟಕದಿಂದ ಆಮದು ಮಾಡಿದ ಬಳಿಕ ದೇಶದಲ್ಲಿ ಮಾರಾಟ ಮಾಡಲಾಗುತ್ತಿದೆ.

ಏತನ್ಮಧ್ಯೇ ದೇಶದಲ್ಲೇ ಜೋಡಣೆ ಕಾರ್ಯ ಪ್ರಾರಂಭಗೊಳಿಸುವ ಇರಾದೆಯನ್ನು ಕಂಪನಿ ಹೊಂದಿದೆ. ಈ ಮೂಲಕ ಭಾರತದಲ್ಲೇ ಪೂರ್ಣ ಪ್ರಮಾಣದ ಕಾರು ಉತ್ಪಾದಕ ತಳಹದಿಯನ್ನು ರೂಪಿಸಲಿದೆ.

Most Read Articles

Kannada
English summary
Japanese utility vehicle specialist Isuzu has launched two models in India discretely after opening its first showroom in Hyderabad, according to a Hindu Business Line report. Isuzu has launched the D-Max regular cab, D-Max Crew Cab and the MU-7 premium SUV in India.
Story first published: Wednesday, February 13, 2013, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X