ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

By Nagaraja

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಮತ್ತೊಂದು ಕೋಡು ಬಂದಿದ್ದು, 50 ನೂತನ ಬಸ್‌ಗಳ ಸೇರ್ಪಡೆಯಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಒಟ್ಟು 1,528 ಬಸ್ಸುಗಳು ಸೇರ್ಪಡೆಯಾಗಲಿದ್ದು, ಇದರ ಭಾಗವಾಗಿ ಇದೀಗ 50 ಹೊಚ್ಚ ಹೊಸ ಬಸ್ಸುಗಳ ಆಗಮನವಾಗಿದೆ. ಇದು ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಕೆಎಸ್‌ಆರ್‌ಟಿಸಿಯನ್ನು ಮತ್ತಷ್ಟು ಬಲಪಡಿಸಲಿದೆ. ಖಾಸಗಿ ಬಸ್‌ಗಳ ಅನಧಿಕೃತ ಪಯಣಕ್ಕೆ ಕಡಿವಾಣ ಹಾಕುವುದು, ಹಳೆ ಬಸ್ಸುಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಯಾತ್ರಿಕರಿಗೆ ಸುಗುಮ ಸಂಚಾರ ಒದಗಿಸುವುದು ಕೆಎಸ್‌ಆರ್‌ಟಿಸಿ ಗುರಿಯಾಗಿದೆ.

ಪೀಣ್ಯದಲ್ಲಿ 32 ಕೋಟಿ ರು. ವೆಚ್ಚದಲ್ಲಿ ತಲೆದೋರಿರುವ ನೂತನ ಸ್ಯಾಟ್‌ಲೈಟ್ ಬಸ್ ನಿಲ್ಧಾಣ ಶೀಘ್ರದಲ್ಲೇ ಲೋಕರ್ಪಣೆಯಾಗಲಿದೆ. ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಂಪರ್ಕ ಕಲ್ಪಿಸುವ ಫ್ಲೈ ಬಸ್ ಸೇವೆಯನ್ನು 2 ತಿಂಗಳಿನಲ್ಲಿ ಆರಂಭಿಸಲಾಗುವುದು. ಇದಕ್ಕಾಗಿ ಐರಾವತ ಕ್ಲಬ್ ಕ್ಲಾಸ್ ಬಸ್ಸನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಪ್ರವಾದ್ ಪ್ರಕಾರ, ನೂತನ 50 ಬಸ್ಸುಗಳಲ್ಲಿ ನಾಲ್ಕು ವೋಲ್ವೋ ಮಲ್ಟಿ ಎಕ್ಸೆಲ್, ಆರು ರಾಜಹಂಸ ಹಾಗೂ 40 ಸಾಮಾನ್ಯ ಬಸ್ಸುಗಳು ಸೇರಿರಲಿದೆ. ಈ ಎಲ್ಲ ಬಸ್ಸುಗಳು ಹೊಸ ರೂಟ್‌ನಲ್ಲಿ ಸಂಚಾರ ಆರಂಭಿಸಲಿದೆ.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ಪ್ರಸಕ್ತ ಸಾಲಿನಲ್ಲಿ ಒಟ್ಟು 1528 ಬಸ್ಸುಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಇದರಲ್ಲಿ 236 ಗ್ರಾಮಾಂತರ, 1,079 ಕರ್ನಾಟಕ ಸಾರಿಗೆ, 87 ನಗರ ಸಾರಿಗೆ, 6 ಕರ್ನಾಟಕ ವೈಭವ, 58 ರಾಜಹಂಸ ಹಾಗೂ 62 ವೋಲ್ವೋ ಮಲ್ಟಿ ಎಕ್ಸೆಲ್ ಬಸ್ಸುಗಳು ಇರಲಿದೆ.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ಪ್ರಯಾಣಿಕರ ಸುರಕ್ಷಿತ ಪಯಣಕ್ಕೂ ಪಯಣಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಈ ನಿಟ್ಟಿನಲ್ಲಿ 500 ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಪ್ರಾಯೋಗಿಕವಾಗಿ ಸಿಸಿಟಿವಿ ಆಳವಡಿಸಲಾಗುತ್ತಿದೆ. ರಾತ್ರಿ ವೇಳೆ ಸಂಚರಿಸುವ ಬಸ್‌ಗಳಿಗೆ ಈ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆಯಿದೆ.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ಬೆಂಗಳೂರು ಕೇಂದ್ರ ವಿಭಾಗದಿಂದ 4 ವೋಲ್ವೋ ಮಲ್ಟಿ ಎಕ್ಸೆಲ್‌ ಬಸ್‌ಗಳು ಹಾಗೂ 6 ರಾಜಹಂಸ ಬಸ್‌ಗಳು ಬೆಂಗಳೂರಿನಿಂದ ರಾಯಚೂರು, ಮಂತ್ರಾಲಯ, ಹೈದರಾಬಾದ್‌, ಊಟಿ, ತಿರುಚಿ ಮಾರ್ಗಗಳಲ್ಲಿ ಹಾಗೂ ರಾಮನಗರ ವಿಭಾಗದಿಂದ 3 ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರು-ಕುಕ್ಕೆ ಸುಬ್ರಹ್ಮಣ್ಯ-ಕನಕಪುರ, ಕೊಳ್ಳೆಗಾಲ ಮಾರ್ಗದಲ್ಲಿ ಸಂಚರಿಸಲಿವೆ.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ತುಮಕೂರು ವಿಭಾಗದಿಂದ 11 ಬಸ್‌ಗಳು ತುಮಕೂರು-ಬೆಂಗಳೂರು-ಬಳ್ಳಾರಿ, ಶಿರಾ-ಬೆಂಗಳೂರು-ಹುಬ್ಬಳ್ಳಿ, ದಾವಣಗೆರೆ-ಬೆಂಗಳೂರು-ಹುಬ್ಬಳ್ಳಿ, ದಾವಣಗೆರೆ-ಬೆಂಗಳೂರು-ಶಿವಮೊಗ್ಗ-ಅರಸಿಕೆರೆ ಮಾರ್ಗಗಳಲ್ಲಿ ಹಾಗೂ ಕೋಲಾರ ವಿಭಾಗದಿಂದ 4 ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರು-ಹುಬ್ಬಳ್ಳಿ-ದಾವಣಗೆರೆ, ಮಾಲೂರು-ಬೆಂಗಳೂರು-ಹುಬ್ಬಳ್ಳಿ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಚಿಕ್ಕಬಳ್ಳಾಪುರ ವಿಭಾಗದಿಂದ 4 ಗ್ರಾಮೀಣ ಸಾರಿಗೆ ಬಸ್‌ಗಳು ದೊಡ್ಡಬಳ್ಳಾಪುರ-ಕಾವೇರಿಭವನ-ಯಲಹಂಕ ಮಾರ್ಗಗಳಲ್ಲಿ ಸಂಚರಿಸಲಿವೆ.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ಮಂಡ್ಯ ವಿಭಾಗದಿಂದ ಕರ್ನಾಟಕ ಸಾರಿಗೆಯ 8 ಬಸ್‌ಗಳು ಕೆಆರ್‌ ಪೇಟೆ-ಬೆಂಗಳೂರು-ನಾಗಮಂಗಲ, ಪಾಂಡವಪುರ-ಧರ್ಮಸ್ಥಳ-ಮೈಸೂರು-ಹಾಸನ, ಶಿವಮೊಗ್ಗ-ಕೊಪ್ಪಳ-ತಿಪಟೂರು-ಅರಸಿಕೆರೆ, ಮಳವಳ್ಳಿ-ಮೈಸೂರು-ಶಿವಮೊಗ್ಗ-ಅರಸೀಕೆರೆ ಮಾರ್ಗಗಳಲ್ಲಿ, ಚಾಮರಾಜನಗರ ವಿಭಾಗದಿಂದ ಕರ್ನಾಟಕ ಸಾರಿಗೆಯ 8 ಬಸ್‌ಗಳು ಚಾಮರಾಜನಗರ-ಸೋಮವಾರಪೇಟೆ-ಮೈಸೂರು, ಬೆಂಗಳೂರು-ಕೊಳ್ಳೆಗಾಲ-ಚಾಮರಾಜನಗರ, ಕೊಳ್ಳೆಗಾಲ-ಬೆಂಗಳೂರು-ನಂಜನಗೂಡು, ಮಂಗಳೂರು-ಮೈಸೂರು-ಮಡಿಕೇರಿ, ಮಲೈಮಹದೇಶ್ವರ ಬೆಟ್ಟ-ದಾಬಸ್‌ಪೇಟೆ-ಕೊರಟಗೆರೆ ಮಾರ್ಗಗಳಲ್ಲಿ ಸೇವೆ ಒದಗಿಸಲಿವೆ.

ಕೆಎಸ್‌ಆರ್‌ಟಿಸಿಗೆ 50 ನೂತನ ಬಸ್; ಸಂಚಾರ ಎಲ್ಲಿಂದ ಎಲ್ಲಿಗೆ?

ಹಾಗೆಯೇ ಚಿಕ್ಕಮಗಳೂರು ವಿಭಾಗದಿಂದ ಕೆಎಸ್‌ಆರ್‌ಟಿಸಿ ಎರಡು ಬಸ್‌ಗಳು ಚಿಕ್ಕಮಗಳೂರು-ಬೆಂಗಳೂರು-ಹಾಸನ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

Most Read Articles

Kannada
English summary
KSRTC managing director Manjunatha Prasad said: “The corporation is adding 50 new buses which includes four Volvo multi-axle, six Rajahamsa, 40 inter-city regular buses, all of which will ply on new routes. This is the first set of 1,528 buses the corporation plans to add to its fleet by the end of this year.
Story first published: Monday, June 3, 2013, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X