ನಿರಾಸೆ ಮೂಡಿಸಿದ ಮಹೀಂದ್ರ 'ಇ2ಒ' ಬುಕ್ಕಿಂಗ್ಸ್

Written By:
ಬಿಡುಗಡೆ ವೇಳೆಯಲ್ಲಿ ಭಾರಿ ಸದ್ದು ಮಾಡಿದ್ದ ಮಹೀಂದ್ರ 'ಇ2ಒ' ವಿದ್ಯುತ್ ಚಾಲಿತ ಕಾರಿನ ಮಾರಾಟವು ನಿರೀಕ್ಷಿಸಿದಷ್ಟು ತಲುಪದಿರುವುದು ನಿರಾಸೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪವನ್ ಗೋನ್ಖಾ ಗ್ರಾಹಕರಿಂದ ದೊರಕುತ್ತಿರುವ ಪ್ರತಿಕ್ರಿಯೆ ತೀರಾ ನಿರಾಸೆ ತಂದಿದೆ ಎಂದಿದ್ದಾರೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿನ ದರ ಸ್ವಲ್ಪ ದುಬಾರಿಯಾಗಿರುವುದೇ ಮಾರಾಟ ಕುಂಠಿತಗೊಳ್ಳಲು ಕಾರಣವಾಗಿದೆ. ದೆಹಲಿ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಆನ್ ರೋಡ್ ದರ ಏಳು ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಅಂದ ಹಾಗೆ ದೆಹಲಿ ರಾಜ್ಯ ಸರಕಾರ ಸಬ್ಸಿಡಿ ಸೌಲಭ್ಯ ಒದಗಿಸುತ್ತಿದೆ.

ಪ್ರತಿ ತಿಂಗಳು 300ರಿಂದ 400ರಷ್ಟು ಯುನಿಟ್ ಮಾರಾಟವಾಗುವ ನಿರೀಕ್ಷೆಯನ್ನು ಕಂಪನಿ ಹೊಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಕುಂಠಿತವಾಗಿರುವುದು ಹಿನ್ನಡೆಗೆ ಕಾರಣವಾಗಿದೆ.

ಇನ್ನು ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಕೈಜೋಡಿಸಿಕೊಂಡಿರುವ ಮಹೀಂದ್ರ ರೇವಾ, ಮಾಸಿಕ ಕಂತು ರು. 9,257 ಪಾವತಿಸಿ (ಇಎಂಐ ಮತ್ತು ವೆಚ್ಚ ಸೇರಿ ರು. 9,857) 'ಇ2ಒ' ನಿಮ್ಮದಾಗಿಸಿಕೊಳ್ಳಲು ವಿಶೇಷ ಯೋಜನೆ ಮುಂದಿಟುತ್ತಿದೆ.

ಮಹೀಂದ್ರ ಎಲೆಕ್ಟ್ರಿಕ್ ಕಾರಿನ ಸಂಪೂರ್ಣ ವಿಮರ್ಶೆಗಾಗಿ ಇಲ್ಲಿ ಕ್ಕಿಕ್ಕಿಸಿರಿ

English summary
Dr Pawan Goneka, President (Automotive and Farm Equipment Sectors), Mahindra & Mahindra revealed that the initial response for their new electric car, e2o has been disappointing.
Story first published: Monday, April 8, 2013, 12:59 [IST]
Please Wait while comments are loading...

Latest Photos