ಬೆಂಗಳೂರಿನಲ್ಲಿ ಮಹೀಂದ್ರ ಇ2ಒ ಲಾಂಚ್- ದರ ಎಷ್ಟು?

By Nagaraja

ಬಹುನಿರೀಕ್ಷಿತ ಮಹೀಂದ್ರ ರೇವಾ 'ಇ2ಒ' ವಿದ್ಯುತ್ ಚಾಲಿತ ಪ್ರಯಾಣಿಕ ಕಾರು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಲಾಂಚ್ ಆಗಿದೆ. ಮಹೀಂದ್ರ ಇ2ಒ ಮಹೀಂದ್ರ ಸಮೂಹದ ಫ್ಯೂಚರ್ ಆಫ್ ಮೊಬಿಲಿಟಿ ಧ್ಯೇಯದ ಭಾಗವಾಗಿದ್ದು, 'ಐದು ಸಿ' ಗಳ ಸಿದ್ಧಾಂತವನ್ನು (ಕ್ಲೀನ್, ಕನ್‌ವಿನಿಯಂಟ್, ಕೆನೆಕ್ಟಡ್, ಕ್ಲೆವರ್ ಮತ್ತು ಕಾಸ್ಟ್ ಎಫೆಕ್ಟಿವ್) ಆಧರಿಸಿದೆ.

ಭವಿಷ್ಯದ ಸಂಚಾರ ವ್ಯವಸ್ಥೆಗೆ ಮಹೀಂದ್ರ ಇ2ಒ ಉತ್ತಮ ಉದಾಹರಣೆಯಾಗಿದ್ದು, ಪೂರ್ಣ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಈ ಎಲೆಕ್ಟ್ರಿಕ್ ಕಾರು 100 ಕೀ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲಕರವಾಗಲಿದೆ.

ಬೆಂಗಳೂರಿನಲ್ಲಿ ಮಹೀಂದರ್ ಇ2ಒ ಬಿಡುಗಡೆ ವೇಳೆ ಮಾತನಾಡಿದ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ (ಕಾರ್ಯತಂತ್ರ ಮತ್ತು ಟೆಕ್ನಾಲಜಿ) ಚೇತನ್ ಮೈನಿ, ಮಹೀಂದ್ರ ಇ2ಒ ವಾಹನವು ಆಟೋಮೊಟಿವ್ ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನದ ಪ್ರಗತಿಯ ಸಮ್ಮಿಲನವಾಗಿದೆ. ಮಹೀಂದ್ರ ಇ2ಒ ವಾಹನವು ವಿದ್ಯುತ್ ಆಧಾರಿತ ಸಂಚಾರ ವ್ಯವಸ್ಥೆಯಾಗಿದ್ದು, ಸುಸ್ಥಿರ ಭವಿಷ್ಯದ ದೃಷ್ಟಿಕೋನ ಹೊಂದಿದೆ. ಹೊಸ ತಂತ್ರಜ್ಞಾನ ಆಧಾರಿತ ಮಹೀಂದ್ರ ಇ2ಒ ವಾಹನವು ಗ್ರಾಹಕರು ಅನುಕೂಲಕರ, ಸಮಾಧಾನಕರ, ಕಡಿಮೆ ವೆಚ್ಚದಲ್ಲಿ ಸಂಪರ್ಕವನ್ನು ಹೊಂದಲು ಪೂರಕವಾಗಿದೆ ಎಂದರು.

ಮಹೀಂದ್ರ ಇ2ಒ ದರ: 6.49 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)


ಮಹೀಂದ್ರ ಇ2ಒ ವಾಹನವು ಜನರ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಒಂದು ಸಕಾರಾತ್ಮಕ ಬದಲಾವಣೆ ಆಗಿದೆ. ಮಹೀಂದ್ರ ಇ2ಒ ಸಮಗ್ರ ಪರಿಸರ ಸ್ನೇಹಿ ವ್ಯವಸ್ಥೆಯನ್ನು ರೂಪಿಸುವುದು ಮಾತ್ರವಲ್ಲ ಗ್ರಾಹಕರ ಆಯ್ಕೆಯಾಗುವಂತೆಯೂ ರೂಪಿಸಲಾಗಿದೆ. ಆಸಕ್ತ ಗ್ರಾಹಕರು ಈಗ ಮಾಸಿಕ ರೂ. 9,857 ಸುಲಭ ಕಂತಿನಲ್ಲಿ (ಇಎಂಐ ಮತ್ತು ವಿದ್ಯುತ್ ವೆಚ್ಚ ಅಂದಾಜು ರೂ. 600 ಸೇರಿ) ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥರಾದ (ಆಪರೇಷನ್ಸ್) ಆರ್. ಚಂದ್ರಮೌಳಿ ತಿಳಿಸಿದ್ದಾರೆ.

ಮಹೀಂದ್ರ ಇ2ಒ ಮುಖ್ಯಾಂಶಗಳು:

  • ಮಹೀಂದ್ರದಿಂದ ಭವಿಷ್ಯದ, ನವಪೀಳಿಗೆಯ ಪೂರ್ಣ ವಿದ್ಯುನ್ಮಾನ ವ್ಯವಸ್ಥೆಯ, ಶೂನ್ಯ ಹೊಗೆ ಹೊರಸೂಸುವಿಕೆಯ ಮಹೀಂದ್ರ ಇ2ಒ (ರೇವಾ ಉತ್ಪಾದನೆ) ಬೆಂಗಳೂರಿನಲ್ಲಿ ಬಿಡುಗಡೆ.
  • ಮಹೀಂದ್ರ ಇ2ಒ ಈಗ ಸುಲಭ ಕಂತುಗಳಲ್ಲಿ ಮಾಸಿಕ ರೂ. 9,257 ರೂಪಾಯಿ (ಇಎಂಐ ಮತ್ತು ವೆಚ್ಚ ಸೇರಿ ಮಾಸಿಕ ರೂ. 9,857)ಗಳಲ್ಲಿ ಲಭ್ಯ.
  • ಮಹೀಂದ್ರ ಇ2ಒ ವಾಹನವು ಮಹೀಂದ್ರದ ಮುಂದಿನ ಪೀಳಿಗೆಯ ಸಂಚಾರ ವ್ಯವಸ್ಥೆಯ ಧ್ಯೇಯದ ಭಾಗ. ಐದು 'ಸಿ'- ಕ್ಲೀನ್, ಕನ್ವಿನಿಯೆಂಟ್, ಕನೆಕ್ಟಡ್, ಕ್ಲೆವರ್ ಮತ್ತು ಕಾಸ್ಟ್ ಎಫೆಕ್ಟಿವ್ ಆಧಾರದಲ್ಲಿ ನಿರ್ಮಾಣ.
  • ಪೂರ್ಣ ಸ್ವಯಂಚಾಲಿತ ವ್ಯವಸ್ಥೆ, 100 ಕೀ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲ.
  • ಎಲ್ಲ ಮನೆಗಳಲ್ಲಿ ಲಭ್ಯವಿರುವ 15ಎ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು.
  • ವಿಶೇಷವಾದ ಕಾರು ತಂತ್ರಜ್ಞಾನವು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕವು (ಎಸಿ ಚಾಲನೆ, ಲಾಕ್ ಮಾಡುವುದು, ಅನ್‌ಲಾಕ್ ಮಾಡುವುದು ಇತ್ಯಾದಿ) ನಿರ್ವಹಣೆ ಮಾಡಬಹುದು.
  • ರೇವಾ REVive ಪ್ರಥಮ ದೂರ ನಿಯಂತ್ರಿತ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಅನ್ನು ಹೊಂದಿದೆ.
Most Read Articles

Kannada
English summary
Mahindra Reva, a part of the Mahindra Group, today launched its new generation electric vehicle, e2o at Bangalore. The ex showroom price of the electric car is 6.49 lakhs.
Story first published: Wednesday, April 3, 2013, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X