ಮಹೀಂದ್ರ ವೆರಿಟೊ ಸಣ್ಣ ಕಾರು ಸದ್ಯದಲ್ಲೇ ಬಿಡುಗಡೆ

Posted By:
To Follow DriveSpark On Facebook, Click The Like Button
ದೇಶದ ಅತಿ ಜನಪ್ರಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರ ಸಂಸ್ಥೆಯ ವೆರಿಟೊ ಸಣ್ಣ ಆವೃತ್ತಿ ಸದ್ಯದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ. ಪ್ರಸ್ತುತ ಬಂದಿರುವ ಮಾಹಿತಿ ಪ್ರಕಾರ 2013ನೇ ಅವಧಿಯ ಮೊದಲಾರ್ಧದಲ್ಲಿ ಮಹೀಂದ್ರ ವೆರಿಟೊ ಪರಿಷ್ಕೃತ ಕಾಂಪಾಕ್ಟ್ ಸೆಡಾನ್ ವರ್ಷನ್ ಮಾರುಕಟ್ಟೆಗೆ ಪರಿಚಯವಾಗಲಿದೆ.

ಈ ಹಿಂದೆಯೇ ದೇಶದಲ್ಲಿ ಕಾಂಪಾಕ್ಟ್ ಸೆಡಾನ್ ಬಿಡುಗಡೆ ಮಾಡುವ ಬಗ್ಗೆ ಮಹೀಂದ್ರ ಪ್ರಕಟಿಸಿತ್ತು. ಆದರೆ ಲಾಂಚ್ ಬಗ್ಗೆ ಯಾವುದೇ ನಿರ್ದಿಷ್ಟ ದಿನ ಘೋಷಿಸಿರಲಿಲ್ಲ. ಆದರೆ ಇದೀಗ 2013 ಮಾರ್ಚ್ ವೇಳೆಯಲ್ಲಿ ವೆರಿಟೊ ಕಾಂಪಾಕ್ಟ್ ಸೆಡಾನ್ ಬಿಡುಗಡೆಗೊಳಿಸುವುದಾಗಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನಿರ್ದೇಶಕ ಹಾಗೂ ಸಿಇಒ ಡಾ. ಪವನ್ ಗೋನ್ಖಾ ತಿಳಿಸಿದ್ದಾರೆ.

ಸ್ವಿಫ್ಟ್ ಡಿಜೈರ್ ಬಳಿಕ ಕಾಂಪಾಕ್ಟ್ ಸೆಡಾನ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಯಶ ಸಾಧಿಸಿದ್ದವು. ಇದರಂತೆ ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಮಾದರಿಗಳು ಆಗಮಿಸುವ ನಿರೀಕ್ಷೆಯಿದೆ.

ಇನ್ನು ದರದ ಬಗ್ಗೆ ಲೆಕ್ಕ ಹಾಕಿದರೆ ಸಣ್ಣ ವೆರಿಟೊ ಈ ಹಿಂದಿನ ಆವೃತ್ತಿಗಿಂತಲೂ ಸ್ವಲ್ಪ ಅಗ್ಗವಾಗಲಿದೆ. ನಾಲ್ಕು ಮೀಟರ್ ಉದ್ದದೊಳಗೆ ನಿರ್ಮಾಣವಾಗಲಿರುವುದರಿಂದ ತೆರಿಗೆ ವಿನಾಯಿತಿ ಕೂಡಾ ಪಡೆಯಲಿದೆ. ಯಾವುದೇ ಹೆಚ್ಚಿನ ಬದಲಾವಣೆ ಇಲ್ಲದಿರುವುದರಿಂದ ಕನಿಷ್ಠ 50 ಸಾವಿರ ರು. ಕಡಿಮೆಯಾಗುವ ಸಾಧ್ಯತೆಯಿದೆ.

ಕ್ವಾಂಟೊ ಬಳಿಕ ಮಹೀಂದ್ರದಿಂದ ಆಗಮನವಾಗುತ್ತಿರುವ ಎರಡನೇ ಕಾಂಪಾಕ್ಟ್ ಕಾರು ವೆರಿಟೊ ಆಗಿದೆ. ಹಾಗೆಯೇ ಮಾರುತಿಯಿಂದ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ವಿಫ್ಟ್ ಡಿಜೈರ್ ಹಾಗೂ ಟಾಟಾ ಇಂಡಿಕೊ ಕಾಂಪಾಕ್ಟ್ ಸೆಡಾನ್ ಆವೃತ್ತಿಗಳಿಗೆ ಕಠಿಣ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಮುಂಬರುವ ಹೊಂಡಾ ಬ್ರಿಯೊ ಸೆಡಾನ್ ಕೂಡಾ ಇದೇ ಸಾಲಿನಲ್ಲಿ ಸ್ಪರ್ಧೆ ಒಡ್ಡಲಿದೆ.

ಇನ್ನು ತಾಂತ್ರಿಕತೆ ಬಗ್ಗೆ ಚರ್ಚಿಸಿದರೆ ರೆನೊದಿಂದ ಈಗಾಗಲೇ ಪರಿಚಿತವಾಗಿರುವ ಕೆ9ಕೆ ಡೀಸೆಲ್ ಎಂಜಿನ್ ಮಹೀಂದ್ರ ವೆರಿಟೊ ಕಾಂಪಾಕ್ಟ್ ಸೆಡಾನ್‌ನಲ್ಲೂ ಬಳಕೆಯಾಗಲಿದೆ. ಖಂಡಿತವಾಗಿಯೂ ಕಾಂಪಾಕ್ಟ್ ಸೆಡಾನ್ ಸೆಗ್ಮೆಂಟ್‌ನಲ್ಲಿ ಮಹೀಂದ್ರ ವೆರಿಟೊ ಮಾರುಕಟ್ಟೆಯಲ್ಲಿ ದೊಡ್ಡ ಸದ್ದು ಮಾಡಲಿದೆ. 

English summary
The Mahindra Verito's shortened CS version is set to be launched in the first quarter of 2013. Mahindra had previously revealed plans to launch the Verito compact sedan in India. However it had not specified any time line for its launch
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark