ಮಾರುತಿ ಓಮ್ನಿ ಲಿಮೆಟೆಡ್ ಅಡಿಷನ್ ಲಾಂಚ್

By Nagaraja

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಮಿನಿ ವ್ಯಾನ್ 'ಓಮ್ನಿ' 1985ರ ಕಾಲಘಟ್ಟದಿಂದಲೇ ದೇಶದ ರಸ್ತೆಯಲ್ಲಿ ಸದ್ದು ಮಾಡುತ್ತಿದೆ. ಈಗಲೂ ಉತ್ತಮ ಮಾರಾಟವನ್ನು ಕಾಯ್ದುಕೊಂಡಿರುವ ಓಮ್ನಿ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರಸ್ತುತ ಮಾರುತಿ ಓಮ್ನಿ ವಿವಿಧ ವಿಭಾಗಗಳಲ್ಲಿ ಲಭ್ಯವಿದ್ದು, ಕಾರ್ಗೊ ವ್ಯಾನ್, ಅಂಬುಲೆನ್ಸ್ ವ್ಯಾನ್, ಫ್ಯಾಮಿಲಿ ಮಿನಿ ವ್ಯಾನ್ ಪ್ರಮುಖವಾಗಿದೆ. ಈ ನಡುವೆ ಗ್ರಾಹಕರನ್ನು ಇನ್ನಷ್ಟು ಉತ್ತೇಜಿಸಲು ಮಾರುತಿ ಸುಜುಕಿ ಲಿಮಿಟೆಡ್ ಅಡಿಷನ್‌ಗಳನ್ನು ಲಾಂಚ್ ಮಾಡಿದೆ.


ಅಂದ ಹಾಗೆ ಹೊಸ ಲಿಮಿಟೆಡ್ ಅಡಿಷನ್ ಮಾರುತಿ ಓಮ್ನಿಯಲ್ಲಿ ಏನೆಲ್ಲ ವಿಶೇಷ ಸೌಲಭ್ಯವಿದೆ? ಈ ಬಗ್ಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಮಾಹಿತಿ ನೀಡಲಿದೆ. ಈ ಮೂಲಕ ಓಮ್ನಿ ಯಶಸ್ಸನ್ನು ಮಾರುತಿಯು ಇನ್ನಷ್ಟು ಮಧುರವಾಗಿಸಿದೆ.

ಓಮ್ನಿಯಲ್ಲಿ ಹೊಸತೇನಿದೆ?

  • ಆಕ್ಸಿಲರಿ ಪೋರ್ಟ್ ಜತೆ ಸಿಡಿ ಪ್ಲೇಯರ್
  • 4 ಸ್ಪೀಕರ್ಸ್
  • ಫ್ಲೋರ್ ಮಾಟ್ಸ್
  • ಎಲ್‌ಎಚ್‌ ಸೈಡ್ ರಿಯರ್ ವ್ಯೂ ಮಿರರ್
  • ನ್ಯೂ ಸೀಟ್ ಕವರ್

ದೇಶದ ಮಧ್ಯಮ ವರ್ಗದ ಕುಟುಂಬಗಳಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರ ಮಾಡುವ ಜನರು ಈಗಲೂ ಮಾರುತಿ ಓಮ್ನಿಯನ್ನು ಆಶ್ರಯಿಸುತ್ತಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

Most Read Articles

Kannada
English summary
The Limited Edition Omni will now be offered with a CD player with an auxiliary port, 4-speakers, floor mats, LHS rear view and new seat covers. Nothing spectacular for sure, however these subtle changes surely gives the Omni the added oomph factor.
Story first published: Thursday, January 24, 2013, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X