ಎರ್ಟಿಗಾ, ಸ್ವಿಫ್ಟ್ ಕಮಾಲ್; ಮಾರುತಿ ಸೇಲ್ಸ್ ಅಪ್

Posted By:

ಮಿಡ್ ರೇಂಜ್ ಕಾರುಗಳ ಬೇಡಿಕೆ ಗಣನೀಯವಾಗಿ ವರ್ಧಿಸಿರುವುದರ ಬೆನ್ನಲ್ಲೇ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ 2012 ಡಿಸೆಂಬರ್ ಮಾರಾಟದಲ್ಲಿ ಶೇಕಡಾ 3ರಷ್ಟು ಹೆಚ್ಚಳ ದಾಖಲಿಸಿದೆ.

ದೇಶದ ಮಾರುಕಟ್ಟೆಯಲ್ಲಿ ಅನೇಕ ವಾಹನ ತಯಾರಕರು ಈ ಅವಧಿಯಲ್ಲಿ ಮಿಶ್ರಫಲವನ್ನು ಕಂಡಿದ್ದರೆ ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ಎರ್ಟಿಗಾ ಹಾಗೂ ರಿಟ್ಸ್ ಆವೃತ್ತಿ ಮೂಲಕ ಪ್ರಗತಿ ಸಾಧಿಸುವಲ್ಲಿ ಮಾರುತಿ ಯಶಸ್ವಿಯಾಗಿದೆ.

ಪ್ರಸಕ್ತ ಸಾಲಿನಲ್ಲಿ ಮಾರುತಿಯು ಒಟ್ಟು 82,073 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಇದು ಕಳೆದ ಡಿಸೆಂಬರ್ ಸಾಲಿನಲ್ಲಿ 77,475 ಆಗಿತ್ತು. ಹಾಗಿದ್ದರೂ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕುಸಿದಿದ್ದರಿಂದ ಎಂಟ್ರಿ ಲೆವೆಲ್ ಕಾರುಗಳು ಹಿನ್ನಡೆ ಅನುಭವಿಸಿವೆ.

ಈ ನಡುವೆ ಎಂ800, ಎ ಸ್ಟಾರ್, ಆಲ್ಟೊ ಹಾಗೂ ವಾಗನ್ ಆರ್ ಸೇರಿದಂತೆ ಮಿನಿ ಸೆಗ್ಮೆಂಟ್ ಕಾರು ಮಾರಾಟವು ಶೇಕಡಾ 15.02ರಷ್ಟು ಕುಸಿತ ಕಂಡಿವೆ. ಕಳೆದ ಸಾಲಿನಲ್ಲಿ 38,593 ಕಾರುಗಳು ಮಾರಾಟವಾಗಿದ್ದರೆ ಈ ಬಾರಿಯದು 32,797 ಕಾರುಗಳಿಗೆ ಮಾತ್ರ ಸೀಮಿತಗೊಂಡಿವೆ.

ಹಾಗಿದ್ದರೂ ಕಾಂಪಾಕ್ಟ್ ಸೆಗ್ಮೆಂಟ್ ವೆಹಿಕಲ್‌ನಲ್ಲಿ ಸ್ವಿಫ್ಟ್, ರಿಟ್ಸ್ ಹಾಗೂ ಎಸ್ಟಿಲೊ ನೆರವಿನಿಂದ ಮಾರುತಿ ಶೇ. 8.9ರಷ್ಟು ದಾಖಲಿಸಿದ್ದು, 22,482 ಯುನಿಟ್ ಮಾರಾಟ ದಾಖಲಿಸಿದೆ. ಅದೇ ರೀತಿ ಡೀಸೆಲ್ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿರುವ ಸ್ವಿಫ್ಟ್ ಡಿಜೈರ್ ಸೆಡಾನ್ ಶೇ. 42.3ರಷ್ಟು ಹೆಚ್ಚಳ ದಾಖಲಿಸಿಕೊಂಡಿದ್ದು 13,076 ಯುನಿಟ್ ಮಾರಾಟವಾಗಿದೆ. ಇದು ಕಳೆದ ವರ್ಷದಲ್ಲಿ 9,189 ಆಗಿತ್ತು.

ಯುಟಿಲಿಟಿ ವಿಭಾಗದಲ್ಲಿ ಎಪ್ರಿಲ್ ತಿಂಗಳಿನಲ್ಲಷ್ಟೇ ಪರಿಚಯವಾಗಿದ್ದ ಎರ್ಟಿಗಾ ನೆರವಿನಿಂದ ಮಾರುತಿ ಕಳೆದ ಬಾರಿಯ 238 ಯುನಿಟ್‌ಗಳಿಂದ 5447 ಯುನಿಟ್‌ಗಳಿಗೆ ಗಣನೀಯ ವರ್ಧನೆ ದಾಖಲಿಸಿದೆ. ಆದರೆ ಮಿಡ್ ಸೈಜ್ ಸೆಡಾನ್ ಆದ ಎಸ್‌ಎಕ್ಸ್4 ಶೇ. 60.97 ಹಾಗೂ ಲಗ್ಷುರಿ ಕಿಜಾಶಿ ಶೇಕಡಾ 11.76ರಷ್ಟು ಕುಸಿತ ದಾಖಲಿಸಿದೆ.

ಅದೇ ರೀತಿ ಓಮ್ನಿ ಹಾಗೂ ಇಕೊ ಮಾರಾಟದಲ್ಲೂ ಕುಸಿತವುಂಟಾಗಿದೆ. ಇದು ಕಳೆದ ವರ್ಷ ಡಿಸೆಂಬರ್‌ನ 7,908 ಯುನಿಟ್‌ಗಳಿಂದ 7,897 ಯುನಿಟ್‌ಗೆ ಇಳಿಕೆ ಕಂಡಿದೆ. ಅಂತೆಯೇ ಮಾರುತಿ ರಫ್ತಿನಲ್ಲೂ ಶೇ. 10.99ರಷ್ಟು ಇಳಿಕೆ ಕಂಡಿದೆ.

ಒಟ್ಟಾರೆಯಾಗಿ ದೇಶಿಯ ಮಾರಾಟ ಹಾಗೂ ರಫ್ತು ಸೇರಿದಂತೆ ಡಿಸೆಂಬರ್ ತಿಂಗಳಲ್ಲಿ 95,145 ಕಾರುಗಳ ಮಾರಾಟಗೊಂಡಿದ್ದು 3.24ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದು 92,161 ಯುನಿಟ್‌ಗಳಾಗಿದ್ದವು. ಈ ಪೈಕಿ ದೇಶಿಯ ಮಾರಾಟವು ಶೇ. 5.93ರಷ್ಟು ಏರಿಕೆ ಕಂಡಿದೆ. ಕಳೆದ ಬಾರಿ 77,475 ಯುನಿಟ್‌ಗಳಿಗೆ ಹೋಲಿಸಿದರೆ ಈ ಬಾರಿ 82,073 ಯುನಿಟ್ ಸೇಲಾಗಿದ್ದವು.

To Follow DriveSpark On Facebook, Click The Like Button
ಸ್ವಿಫ್ಟ್ ಡಿಜೈರ್

ಸ್ವಿಫ್ಟ್ ಡಿಜೈರ್

ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಸ್ವಿಫ್ಟ್ ಡಿಜೈರ್ ಶೇ. 42.3ರಷ್ಟು ಗಣನೀಯ ಹೆಚ್ಚಳ ಸಾಧಿಸಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 9,189 ಯುನಿಟ್ ಮಾರಾಟವಾಗಿದ್ದರೆ ಈ ಬಾರಿಯದು 13,076 ಕಾರುಗಳು ಸೇಲ್ ಆಗಿದ್ದವು.

ಎರ್ಟಿಗಾ

ಎರ್ಟಿಗಾ

ಯುಟಿಲಿಟಿ ವಿಭಾಗದಲ್ಲಿ ಕಳೆದ ಎಪ್ರಿಲ್ ತಿಂಗಳಿನಲ್ಲಷ್ಟೇ ಪರಿಚಯವಾಗಿದ್ದ ಎರ್ಟಿಗಾ 5,447 ಯುನಿಟ್ ಮಾರಾಟವಾಗುವ ಮೂಲಕ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಮಾರುತಿ ಡಿಸೆಂಬರ್ ಮಾರಾಟ ಹೆಚ್ಚಳ

ಕಾಂಪಾಕ್ಟ್ ಸೆಗ್ಮೆಂಟ್ ವೆಹಿಕಲ್‌ನಲ್ಲಿ ಸ್ವಿಫ್ಟ್, ರಿಟ್ಸ್ ಹಾಗೂ ಎಸ್ಟಿಲೊ ನೆರವಿನಿಂದ ಮಾರುತಿ ಶೇ. 8.9ರಷ್ಟು ದಾಖಲಿಸಿದ್ದು, 22,482 ಯುನಿಟ್ ಮಾರಾಟ ದಾಖಲಿಸಿದೆ

ಮಾರುತಿ ಡಿಸೆಂಬರ್ ಮಾರಾಟ ಹೆಚ್ಚಳ

ಪ್ರಸಕ್ತ ಸಾಲಿನಲ್ಲಿ ಮಾರುತಿಯು ಒಟ್ಟು 82,073 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಇದು ಕಳೆದ ಡಿಸೆಂಬರ್ ಸಾಲಿನಲ್ಲಿ 77,475 ಆಗಿತ್ತು.

ಓಮ್ನಿ

ಓಮ್ನಿ

ಆದರೆ ಮಾರುತಿ ಓಮ್ನಿ ಹಾಗೂ ಇಕೊ ಮಾರಾಟದಲ್ಲೂ ಕುಸಿತವುಂಟಾಗಿದೆ. ಇದು ಕಳೆದ ವರ್ಷ ಡಿಸೆಂಬರ್‌ನ 7,908 ಯುನಿಟ್‌ಗಳಿಂದ 7,897 ಯುನಿಟ್‌ಗೆ ಇಳಿಕೆ ಕಂಡಿದೆ.

English summary
Maruti Suzuki, the leading Indian carmaker has reported a 3% increase in December 2012 sales despite sales of its small cars dipping and a 12% decline in exports.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark