ಗರ್ಲ್‌‍ಫ್ರೆಂಡ್‌ಗಿಂತ ಕಾರು ನಿರ್ವಹಣೆ ಹೆಚ್ಚು ಸುಲಭವಂತೆ!

ನೀವು ಪ್ರೇಯಸಿ ಜತೆ ಬೆಡ್‌ರೂಮ್‌ಗಿಂತಲೂ ಹೆಚ್ಚಾಗಿ ಗ್ಯಾರೇಜ್‌ನಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೀರಾ? ಇಲ್ಲೊಂದು ಕುತೂಹಲಕಾರಿ ಸಮೀಕ್ಷಾ ವರದಿ ಓದಿ ನೋಡಿರಿ.

ಕಾರು ಜತೆ ಗರ್ಲ್‌ಫ್ರೆಂಡ್ ಯಾಕೆ ಹೋಲಿಕೆ ಮಾಡಲಾಗುತ್ತಿದೆ ಎಂಬ ವಿಚಾರ ನಿಮ್ಮಲ್ಲಿ ಅಚ್ಚರಿಗೆ ಕಾರಣವಾಗಬಹುದು. ವಿಷಯ ಏನೆಂದರೆ ಬಾಂಧವ್ಯ ಗಟ್ಟಿ ಮಾಡುವುದರಲ್ಲಿ ಪ್ರೇಯಸಿಯ ಸಾನಿಧ್ಯ ಮಹತ್ವಪೂರ್ಣವೆನಿಸುತ್ತದೆ. ಆದರೆ ಅದೇ ಸಂಬಂಧ ನಕರಾತ್ಮಕವಾಗಿ ಪರಿಣಮಿಸಿದರೆ ಏನಾಗಬಹುದು?

ಈ ವರದಿಯನ್ನು ಓದಿದ ಮೇಲಂತೂ ನಿಮ್ಮ ಮನದಲ್ಲೂ ಈ ಬಗ್ಗೆ ಸಂದೇಹವುಂಟಾಗಬಹಬುದು. ಬ್ರಿಟನ್‌ನಲ್ಲಿ ಪ್ಯೂಜೊ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಈ ಆಘಾತಕಾರಿ ವರದಿ ಹೊರಬಂದಿದೆ.


2000 ಮಂದಿಯಲ್ಲಿ ಅಧ್ಯಯನ ನಡೆಸಿದ ಬಳಿಕ ಈ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ವರದಿ ಪ್ರಕಾರ ಪ್ರೇಯಸಿ ಜತೆ ಸಂಬಂಧ ನಿರ್ವಹಿಸುವುದು ತುಂಬಾನೇ ಕಷ್ಟವಾಗಿದ್ದು, ಇದಕ್ಕಿಂತಲೂ ಕಾರು ಉತ್ತಮ ಎಂದು ಪುರುಷರು ಅಭಿಪ್ರಾಯಪಡುತ್ತಾರೆ.

ವರದಿ ಪ್ರಕಾರ 45-54ರ ಪ್ರಾಯ ಪರಿಧಿಯ ಶೇಕಡಾ 20ರಷ್ಟು ಜನರು ತಮ್ಮ ಗರ್ಲ್‌ಫ್ರೆಂಡ್‌ಗಿಂತಲೂ ಮಿಗಿಲಾಗಿ ಕಾರುಗಳ ಜತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಅದೇ ಹೊತ್ತಿಗೆ 35ರಿಂದ 44 ಪ್ರಾಯ ಪರಿಧಿಯ ಶೇಕಡಾ 11ರಷ್ಟು ಜನರು ತಮ್ಮ ಕಾರನ್ನು ಇಷ್ಟಪಡುತ್ತಾರೆ.

ಇನ್ನು 18ರಿಂದ 24 ವರ್ಷದ ಶೇಕಡಾ 25ರಷ್ಟು ಯುವಕರು ಕೂಡಾ ಗರ್ಲ್ ಫ್ರೆಂಡ್‌ಗಿಂತ ಕಾರನ್ನು ನಿರ್ವಹಿಸುವುದು ಹೆಚ್ಚು ಸುಲಭ ಅಂತಿದ್ದಾರೆ.

ಹೌದು, ಕಾರು ಯಾವತ್ತೂ ನಿಮ್ಮ ಜತೆ ವಾದ ಮಾಡಲಾರದು. ನೀವು ಹೇಗೆ ಇಟ್ಟಕೊಳ್ಳಲು ಬಯಸುವಿರೋ ಅದೇ ರೀತಿ ಇರಿಸಬಹುದು. ಮತ್ತೊಂದೆಡೆ ಗರ್ಲ್ ಫ್ರೆಂಡ್ ಜತೆ ಇದನ್ನೇ ಅನುಸರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Most Read Articles

Kannada
Read more on ಕಾರು car
English summary
A new study in Britain from Peugeot has revealed that Men have an easy time maintaining their cars, but maintaining a relationship with their girlfriend, well that is really difficult!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X