ಚಾರಣಕ್ಕೆ ಹೋಗ ಬಯಸುವವರಿಗೆ ಈ ಸೈಕಲ್ ಹೆಚ್ಚು ಸೂಕ್ತ

Written By:

ಚಾರಣಕ್ಕೆ ಹೋಗುವುದು ನಿಮಗೆ ಇಷ್ಟವೇ? ಗುಡ್ಡಗಾಡು ಪ್ರದೇಶಗಳಲ್ಲಿ ಸಾಹಸಿ ರೈಡಿಂಗನ್ನು ನೀವು ಇಷ್ಟಪಡುತ್ತೀರಾ? ಹಾಗಿದ್ದರೆ ನಾವಿಂದು ಸೈಕಲ್‌ವೊಂದನ್ನು ಪರಿಚಯಿಸಲಿದ್ದು, ನಿಮಗೆ ಹೆಚ್ಚು ಸೂಕ್ತವೆನಿಸಲಿದೆ.

ಜರ್ಮನಿಯ ಆಟೋ ದೈತ್ಯ ಮರ್ಸಿಡಿಸ್ ಬೆಂಝ್‌ನ ನಿರ್ವಹಣಾ ವಿಭಾಗ ಎಎಂಜಿ ಜತೆ ಪಾಲುದಾರಿಕೆ ಹೊಂದಿರುವ ರಾಟ್‌ವೈಲ್ಡ್ ಬೈಕ್ಸ್ (Rotwild Bikes), ನೂತನ ಸೈಕಲ್‌ವೊಂದನ್ನು ನಿರ್ಮಿಸಿದೆ.

ಜರ್ಮನ್ ಪ್ರೀಮಿಯಂ ಮೌಂಟೆನ್ ಹಾಗೂ ರೇಸಿಂಗ್ ಸೈಕಲ್ ನಿರ್ಮಿಸುವುದರಲ್ಲಿ ಹೆಸರುವಾಸಿಯಾಗಿರುವ ಪ್ರಸ್ತುತ ಕಂಪನಿಯು ನೂತ ಲಿಮಿಟೆಡ್ ಎಡಿಷನ್ ಆರ್. ಎಕ್ಸ್45 ಮೌಂಟೆನ್ ಬೈಕ್ (Rotwild R.X45 AMG) ತಯಾರಿಸಿದೆ. ಇದಕ್ಕೆ ಎಎಂಜಿ ಪ್ರೀಮಿಯಂ ವಿನ್ಯಾಸ ಕೊಡಲಾಗಿದೆ. ಎರಡು ಕಂಪನಿಗಳು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತ ನೀಡುವುದರಿಂದ ನೂತನ ಆರ್.ಎಕ್ಸ್45ನಲ್ಲೂ ಇದನ್ನು ಕಾಣಬಹುದಾಗಿದೆ.

Rotwild R.X45 AMG

ಮರ್ಸಿಡಿಸ್ ಎ 45 ಎಎಂಜಿ 'ಎಡಿಷನ್ 1' ಸ್ಪೋರ್ಟ್ಸ್ ಹ್ಯಾಚ್‌ಬ್ಯಾಕ್‌ನಿಂದ ಸ್ಪೂರ್ತಿ ಪಡೆದು ರಾಟ್‌ವಿಲ್ಡ್ ಆರ್.ಎಕ್ಸ್45 ಎಎಂಜಿ ತಯಾರಿಸಲಾಗಿದೆ.

Rotwild R.X45 AMG

ಅಂದ ಹಾಗೆ ಸೀಮಿತ ಆವೃತ್ತಿಗಳು ಮಾತ್ರ ಲಭ್ಯವಿರಲಿದ್ದು, ವಿಶ್ವದರ್ಜೆಯ ಗುಣಮಟ್ಟಕ್ಕೆ ಆದ್ಯತೆ ಕೊಡಲಾಗಿದೆ.

Rotwild R.X45 AMG

ಇತರ ರಾಟ್‌ವೈಲ್ಡ್ ಉತ್ಪನ್ನಗಳಂತೆ ಆರ್.ಎಕ್ಸ್45 ಎಎಂಜಿ ಕೂಡಾ ಸಂಪೂರ್ಣ ಮಾನವ ನಿರ್ಮಿತವಾಗಿದೆ.

Rotwild R.X45 AMG

ಇದನ್ನು ಎಲ್ಲ ತರಹದ ರೈಡಿಂಗ್ ಪರಿಸ್ಥಿತಿಗೆ ಹೊಂದಿಕೊಳ್ಳುವ ರೀತಿಯಲ್ಲಿ ತಯಾರಿಸಲಾಗಿದೆ.

Rotwild R.X45 AMG

ಹಗುರವಾದ ಪರಿಕರಗಳಿಂದ ಜೋಡಣೆ ಮಾಡಿರುವುದರಿಂದ ಸಹಜವಾಗಿಯೇ ಸೈಕಲ್ ಭಾರ ಕಡಿಮೆಯಾಗಿದೆ.

Rotwild R.X45 AMG

ಇನ್ನು ದರ ಮಾತ್ರ ಸ್ವಲ್ಪ ದುಬಾರಿಯಾಗಲಿದ್ದು, ರಾಟ್‌ವೈಲ್ಡ್ ಸೈಕಲಿಗೆ 5.4 ಲಕ್ಷ ರು. ತಗುಲಲಿದೆ.

Rotwild R.X45 AMG
Rotwild R.X45 AMG
Rotwild R.X45 AMG

English summary
Rotwild Bikes, a German premium mountain and racing bicycle manufacturer has formed a long time strategic partnership with fellow German auto giant Mercedes Benz's performance division AMG. The first product born out out the collaboration is the limited edition R.X45 AMG mountain bike, built in typical Rotwild style, with the addition of AMG design inputs.
Story first published: Wednesday, June 12, 2013, 11:35 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more