ಬೆಂಝ್‌ನಿಂದ ಮಗದೊಂದು ಶಕ್ತಿಶಾಲಿ ಕಾರು ಲಾಂಚ್

Posted By:

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಬೆಂಝ್, ಮಗದೊಂದು ಶಕ್ತಿಶಾಲಿ ಕಾರನ್ನು ಭಾರತಕ್ಕೆ ಪರಿಚಯಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಹೌದು, ಬೆಂಝ್ ಪವರ್‌ಫುಲ್ ಎಎಂಜಿ ಎಸ್‌ಎಲ್‌ಕೆ 55 ವರ್ಷನ್ ದೇಶಕ್ಕೆ ಎಂಟ್ರಿ ಕೊಟ್ಟಿದೆ. ಇದು ಸಾಮಾನ್ಯ ಎಸ್‌ಎಲ್‌ಕೆ ರೊಡ್‌ಸ್ಟರ್‌ನ ಕ್ರೀಡಾ ಆವೃತ್ತಿಯಾಗಿರಲಿದೆ.

ದರ ಮಾಹಿತಿ: 1,25,90,000 ರು. (ದೆಹಲಿ ಎಕ್ಸ್ ಶೋ ರೂಂ)

ಮರ್ಸಿಡಿಸ್ ಬೆಂಝ್ ನೂತನ ಎಸ್‌ಎಲ್‌ಕೆ 55 ಎಎಂಜಿ ವೆರಿಯಂಟ್, 5.5 ಲೀಟರ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 421 ಅಶ್ವಶಕ್ತಿ (540 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಇದರ ಎಂಜಿನ್ ಎಎಂಜಿ ಸ್ಪೀಡ್ ಶಿಫ್ಟ್ 7ಜಿ-ಟ್ರಾನಿಕ್ ಜತೆಗೆ ಸೆವೆನ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ರಿಯರ್ ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿರುವ ಪ್ರಸ್ತುತ ಕಾರು ಕೇವಲ 4.6 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆಯಲ್ಲಿ ಚಲಿಸಲಿದೆ. ಒಟ್ಟು ಮೂರು ಡ್ರೈವಿಂಗ್ ವಿಧಗಳಲ್ಲಿ ಎಸ್‌ಎಲ್‌ಕೆ 55 ಎಎಂಜಿ ಆಘಮನವಾಗಿದೆ. ಇದು ಶಕ್ತಿಶಾಲಿ ಕಾರು ಪದಕ್ಕೆ ತೂಕ ನೀಡಲಿದೆ. ಅವುಗಳೆಂದರೆ

  • ದಕ್ಷತೆ (Efficiency) - (C),
  • ಸ್ಪೋರ್ಟ್ (sport) - (S),
  • ಮ್ಯಾನುವಲ್ (Manual) - (M),

ನಿಮ್ಮ ಮಾಹಿತಿಗಾಗಿ, ನೂತನ ಬೆಂಝ್ ವರ್ಷನ್, ತನ್ನ ಹಿಂದಿನ ಆವೃತ್ತಿಗಿಂತಲೂ ಶೇಕಡಾ 30ರಷ್ಟು ಇಂಧನ ಕ್ಷಮತೆಯನ್ನು ನೀಡಲಿದೆ. ಇದು ಇಸಿಒ ಸ್ಟಾರ್ಟ್/ಸ್ಟಾಪ್ ಸಿಸ್ಟಂ ಜತೆ ಎಎಂಜಿ ಸಿಲಿಂಡರ್ ನಿರ್ವಹಣಾ ವ್ಯವಸ್ಥೆಗಳಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಪ್ರಸ್ತುತ ಎಸ್‌ಎಲ್‌ಕೆ ಎಎಂಜಿ, ಸಿ 63, ಇ 63, ಎಸ್‌ಎಲ್‌ಎಸ್, ಕ್ಯಾಬ್ರಿಯೊಲೆಟ್ ಮತ್ತು ಜಿ 63 ಎಸ್‌ಯುವಿ ನಿರ್ವಹಣಾ ಕಾರುಗಳ ಸಾಲಿಗೆ ಸೇರಿದೆ.

Mercedes SLK 55 AMG
English summary
Mercedes-Benz has launched yet another AMG variant of its model in India. This time its the SLK 55 AMG, the sportier version of the regular SLK roadster. Mercedes has priced the AMG convertible at INR 1,25,90,000, ex-showroom, Delhi.
Story first published: Monday, December 2, 2013, 14:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark