ಮುಂಬೈನಲ್ಲಿ ದೇಶದ ಪ್ರಥಮ ಮೊನೊರೈಲು ಓಡಾಟ

Written By:

ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರಯಾಣಿಕರನ್ನು ಹೊತ್ತುಕೊಂಡ ದೇಶದ ಪ್ರಪ್ರಥಮ ಮೊನೊರೈಲು, ತನ್ನ ಮೊದಲ ಅಧಿಕೃತ ಓಡಾಟವನ್ನು ಪೂರ್ಣಗೊಳಿಸಿದೆ. ಪ್ರಥಮ ಹಂತದ ಮಾರ್ಗವು ವಡಲ ಮತ್ತು ಚೆಂಬೂರ್ ನಡುವಿನ ಸರಿಸುಮಾರು 8.8 ಕಿ.ಮೀ.ಮಾರ್ಗವನ್ನು ಒಳಗೊಂಡಿತ್ತು.

ವಡಲ ಸ್ಟೇಷನ್‌ನಿಂದ ಅಪರಾಹ್ನ 1.31ಕ್ಕೆ ಹೊರಟ ಮೊನೊರೈಲು 1.47ರ ವೇಳೆಗೆ ಚೆಂಬೂರ್ ತಲುಪಿತ್ತು. ಹಾಗೆಯೇ ಮರಳಿ ಪಯಣವು 1.57ರಿಂದ 2.16ಕ್ಕೆ ಪೂರ್ಣಗೊಂಡಿತ್ತು. ಹಾಗಿದ್ದರೂ ಮುಂಬೈ ಮೊನೊರೈಲು ಇನ್ನೂ ಟೆಸ್ಟಿಂಗ್ ಹಂತದಲ್ಲಿದ್ದು, ಎಂಜನಿಯರುಗಳಿಂದ ಸುರಕ್ಷತಾ ಸರ್ಟಿಫಿಕೇಟ್ ಲಭಿಸಿದ ಬಳಿಕವಷ್ಟೇ ಸಂಪೂರ್ಣವಾಗಿ ತೆರೆದು ಕಾರ್ಯಾಚರಿಸಲಿದೆ.

To Follow DriveSpark On Facebook, Click The Like Button

ಬಲ್ಲ ಮೂಲಗಳ ಪ್ರಕಾರ ಆಗಸ್ಟ್ ವೇಳೆಗೆ ಸಂಪೂರ್ಣವಾಗಿ ತೆರೆದು ಕಾರ್ಯಾಚರಿಸಲಿದೆ. ಅತ್ಯಂತ ಆಧುನಿಕ ಸಾರಿಗೆ ವ್ಯವಸ್ಥೆ ಎನಿಸಿರುವ ಮೊನೊರೈಲು ಯೋಜನೆ 2009ರಲ್ಲಿ ಆರಂಭವಾಗಿದ್ದು, 2031ರ ವೇಳೆಗೆ ಕೊನೆಗೊಳ್ಳಲಿದೆ. ಅಂದರೆ ಇದು ಒಟ್ಟು 135 ಕೀ.ಮೀ.ಗಳನ್ನು ಕ್ರಮಿಸಲಿದೆ.

ಮುಂಬೈಮೆಟ್ರೊಪಾಲಿಟನ್ ರೀಜನಲ್ ಡೆವೆಲಪ್‌ಮೆಂಟ್ ಅಥಾರಿಟಿ (ಎಂಎಂಆರ್‌ಡಿಎ) ಹಾಗೂ ಲಾರ್ಸೆನ್ ಆಂಡ್ ಟರ್ಬೊ ಮತ್ತು ಸ್ಕೋಮಿ ಗ್ರೂಪ್ ಯೋಜನೆಯನ್ನು ಕೈಗೆತ್ತಿಗೊಂಡಿದೆ. ಅಂತರಾಷ್ಟ್ರೀಯ ಗುಣಮಟ್ಟದ ಮೊನೊ ರೈಲು ಪ್ರತಿ ಗಂಟೆಗೆ 80 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಈ ಯೋಜನೆ ಒಟ್ಟು 2,460 ಕೋಟಿ ರೂಪಾಯಿಗಳದ್ದಾಗಿದೆ.

English summary
India's first monorail, the Mumbai Monorail, made its first official run with passengers on saturday. The monorail ran between stations of Chembur and Wadala, covering a Distance of 8.8 kilometers.
Story first published: Tuesday, July 23, 2013, 12:14 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark