ಡಸ್ಟರ್ ಬಲ; ರೆನೊ ಸೇಲ್ಸ್ 8 ಪಟ್ಟು ವರ್ಧನೆ

By Nagaraja

ಇದೇ ಮೊದಲ ಬಾರಿಗೆ ತಿಂಗಳವೊಂದರಲ್ಲಿ ಅತಿ ಹೆಚ್ಚು ಮಾರಾಟ ದಾಖಲಿಸಿಕೊಂಡಿರುವ ರೆನೊ ಡಸ್ಟರ್, 2013 ಮಾರ್ಚ್ ಮಾರಾಟದಲ್ಲಿ ಎಂಟು ಪಟ್ಟು ವರ್ಧನೆ ದಾಖಲಿಸಿಕೊಂಡಿದೆ.

ಮಾರ್ಚ್ ತಿಂಗಳಲ್ಲಿ ರೆನೊ ಇಂಡಿಯಾ (Renault India) ದೇಶದಲ್ಲಿ ಒಟ್ಟು 8,232 ಕಾರುಗಳನ್ನು ಮಾರಾಟ ಮಾಡಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ (2011ರಲ್ಲಿ 1,005) ಎಂಟು ಪಟ್ಟು ಯುನಿಟ್‌ಗಳ ವರ್ಧನೆ ಕಂಡುಬಂದಿದೆ.


ಒಟ್ಟಿನಲ್ಲಿ ಕುಸಿದಿರುವ ಮಾರುಕಟ್ಟೆ ನಡುವೆಯೂ ಮಾರ್ಚ್ ತಿಂಗಳು ರೆನೊ ಪಾಲಿಗೆ ಅತೀವ ಸವಾಲಿನಿಂದ ಕೂಡಿತ್ತು. ಇವೆಲ್ಲವನ್ನು ಮೆಟ್ಟಿ ನಿಂತಿರುವ ರೆನೊ ಇಂಡಿಯಾ ಪ್ರಗತಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ರೆನೊ ಡಸ್ಟರ್ ಎಸ್‌ಯುವಿ ಭರ್ಜರಿ ಸೇಲ್ಸ್ ದಾಖಲಿಸಿರುವುದೇ ರೆನೊ ಇಂಡಿಯಾದ ದಾಖಲೆ ಸೇಲ್ಸ್‌ಗೆ ಕಾರಣವಾಗಿದೆ. ಕೆಳಗಡೆಯ ಪಟ್ಟಿಯಲ್ಲಿ ರೆನೊ ಇಂಡಿಯಾದ ಮಾರ್ಚ್ ಸೇಲ್ಸ್ ವರದಿಯನ್ನು ಕೊಡಲಾಗಿದೆ.

- ರೆನೊ ಡಸ್ಟರ್- 6,313
- ರೆನೊ ಸ್ಕಾಲಾ- 1,026
- ರೆನೊ ಪಲ್ಸ್- 541
- ರೆನೊ ಫ್ಲೂಯೆನ್ಸ್- 337
- ರೆನೊ ಕೊಲಿಯೊಸ್ (Koleos)- 15

ಒಟ್ಟು ರೆನೊ ಮಾರಾಟ- 8,232

ಈ ಮೂಲಕ ಒಟ್ಟಾರೆಯಾಗಿ ದೇಶದಲ್ಲಿ 30,000 ಡಸ್ಟರ್ ಎಸ್‌ಯುವಿ ಯುನಿಟ್‌ಗಳನ್ನು ಮಾರಾಟ ಮಾಡಲು ರೆನೊ ಇಂಡಿಯಾ ಯಶಸ್ವಿಯಾಗಿದೆ. ರೆನೊ ಡಸ್ಟರ್ ಮೊದಲ ಬಾರಿಗೆ 2012 ಜುಲೈ 4ರಂದು ಪರಿಚಯಿಸಿತ್ತು. ಹಾಗೆಯೇ ರೆನೊ ಇಂಡಿಯಾದ ಒಟ್ಟು ಮಾರಾಟದ ಶೇಕಡಾ 75ರಷ್ಟು ಭಾಗವನ್ನು ಡಸ್ಟರ್ ವಶಪಡಿಸಿಕೊಂಡಿದೆ.

Most Read Articles

Kannada
English summary
Renault India sold 8,232 vehicles in March, an eight-fold rise from 1,005 units the auto manufacturer sold during the same month of last year. The car maker managed to sell 6,313 units of Duster.
Story first published: Monday, April 1, 2013, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X