ಡಸ್ಟರ್ ಬಳಿಕ ಎಂಟ್ರಿ ಲೆವೆಲ್ ಕಾರಿನತ್ತ ರೆನೊ ದೃಷ್ಟಿ
ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಯಶಸ್ಸಲು ನಾವಿದನ್ನು ನೋಡಿರುತ್ತೇವೆ.
ಡಸ್ಟರ್ ಕ್ರೀಡಾ ಬಳಕೆಯ ವಾಹನದಲ್ಲಿ ಭಾರಿ ಮಾರಾಟ ಸಾಧಿಸಿದ್ದ ರೆನೊ, ಮುಂದಿನ ಐದು ವರ್ಷಗಳಲ್ಲಿ 7ರಿಂದ 8 ಕಾರುಗಳನ್ನು ಪರಿಚಯಿಸುವ ಇರಾದೆ ಹೊಂದಿದೆ. ಭಾರತದಲ್ಲಿ ಲಾಭದ ಸಿಹಿ ಸವಿದಿರುವ ಕಂಪನಿಯೀಗ ಎಂಟ್ರಿ ಲೆವೆಲ್ ಕಾರುಗಳತ್ತ ವಾಲುತ್ತಿದೆ.
ಏತನ್ಮಧ್ಯೆ ರೆನೊ ಎಂಟ್ರಿ ಲೆವೆಲ್ ಕಾರು 'ಎ ಎಂಟ್ರಿ' ಎಂಬ ಕೋಡ್ ಪಡೆದುಕೊಂಡಿದ್ದು, 2015ರ ವೇಳೆಗೆ ಮಾರುಕಟ್ಟೆಗೆ ಪರಿಚಯವಾಗಲಿದೆ. ಈ ಸಂಬಂಧ ಎಂಜಿನಿಯರ್‌ಗಳು ಕಠಿಣ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದು 800ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಕಾರು ಇತರ ಎಂಟ್ರಿ ಲೆವೆಲ್ ಕಾರುಗಳಿಗಿಂತ ಭಿನ್ನವಾಗಿರಲಿದೆ.
ಇನ್ನು ಮಲ್ಟಿ ಪರ್ಪಸ್ ವೆಹಿಕಲ್‌ನತ್ತವೂ ಕಂಪನಿ ದೃಷ್ಟಿ ಹಾಯಿಸಿದ್ದು, ಜೆ92 ಕೋಡ್ ನೇಮ್ ಪಡೆದುಕೊಂಡಿರುವ ಕಾರಿನ ಅಭಿವೃದ್ಧಿಯಲ್ಲಿ ತೊಡಗಿದೆ.


Click it and Unblock the Notifications









