ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

Written By:

ಪ್ರಸಕ್ತ ಸಾಗುತ್ತಿರುವ ಫ್ರಾಂಕ್ ಫರ್ಟ್ ಮೋಟಾರ್ ಶೋದಲ್ಲಿ ಸೆಲೆಸ್ಟಿಯಲ್ ಫಾಟಂ (celestial phantom) ಅನಾವರಣಗೊಂಡಿರುವ ಬೆನ್ನಲ್ಲೇ ರೋಲ್ಸ್ ರಾಯ್ಸ್‌ನಿಂದ ಇನ್ನೊಂದು ಕಾರು ಪ್ರದರ್ಶನ ಕಂಡಿದೆ.

ರೋಲ್ಸ್ ರಾಯ್ಸ್ ಈ ಹಿಂದೆಯೇ ಖಾತ್ರಿಪಡಿಸಿರುವುಂತೆಯೇ ಗ್ರಾಹಕರ ಅಗತ್ಯಕ್ಕಾನುಸಾರವಾಗಿ ಕಸ್ಟಮೈಸ್ಡ್ ಮಾದರಿಗಳನ್ನು ತಯಾರಿಸಲಾಗುತ್ತಿದೆ.

ಇಂಗ್ಲೆಂಡ್ ಮೂಲದ ಕಾರು ತಯಾರಕ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್ ಇದೀಗ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಕಾರಿನ ಅಧಿಕೃತ ಹೆಸರು ಘೋಸ್ಟ್ ಚೆಂಗ್ಡು ಗೋಲ್ಡನ್ ಸನ್‌ಬರ್ಡ್ (Rolls Royce Ghost Chengdu Golden Sunbird Edition) ಎಂದಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಚೀನಾದ ಪ್ರಾಚೀನ ಕಾಲ್ಪನಿಕ ಕಥೆಯಲ್ಲಿರುವ ಗೋಲ್ಡನ್ ಸನ್‌ಬರ್ಡ್ ಕಲಾಕೃತಿಯನ್ನು ಆಧಾರಿಸಿ ಪ್ರಸ್ತುತ ಕಾರನ್ನು ತಯಾರಿಸಲಾಗಿದೆ. 2001ರಲ್ಲಿ ಚೆಂಗ್ಡು ನಗರದಲ್ಲಿ ಇದನ್ನು ಪತ್ತೆಹಚ್ಚಲಾಗಿತ್ತು.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಪ್ರಸ್ತುತ ಕಲಾಕೃತ್ತಿ ನೈಜ ಚಿನ್ನದಿಂದ ತಯಾರಿಸಿದ್ದಾಗಿದೆ. ಇದನ್ನು ಅಪ್ರದಕ್ಷಿಣವಾಗಿ ಚಲಿಸುವ ಸನ್‌ಬರ್ಡ್‌ಗಳು ಪ್ರತಿನಿಧಿಸುತ್ತವೆ.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಚೀನಾದಲ್ಲಿ ಖನನ ವೇಳೆ ಪತ್ತೆಹಚ್ಚಲಾಗಿರುವ ಈ ಪ್ರಾಚೀನ ಕಲಾಕೃತ್ತಿಯನ್ನು ಆಧರಿಸಿ ತಯಾರಿಸಲಾಗಿರುವ ರೋಲ್ಸ್ ರೋಯ್ಸ್ ನೂತನ ಕಾರು ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಂಡಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಇದರಂತೆ ಮುಂಭಾಗದಿಂದ ಆರಂಭಿಸಿ ಹಿಂಭಾಗದ ವರೆಗೆ ಕಾರಿನ ಮಧ್ಯಭಾಗದಲ್ಲಿ ಚಿನ್ನದ ಬಣ್ಣ ಬಳಿಯಲಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಹಾಗೆಯೇ ಅಲಾಯ್ ವೀಲ್‌ನಲ್ಲೂ ಚಿನ್ನದ ಬಣ್ಣ ಲಗತ್ತಿಸಲಾಗಿದೆ.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಇದು ಸಂಪೂರ್ಣವಾಗಿ ಚಿನ್ನದ ಲೇಪನ ಮಾಡಲಾಗಿದೆಯೇ ಅಥವಾ ಗೋಲ್ಡನ್ ಬಣ್ಣ ಬಳಿಯಲಾಗಿದೆಯೇ ಎಂಬುದಕ್ಕೆ ನಿಖರ ಮಾಹಿತಿ ಲಭಿಸಿಲ್ಲ.

ರೋಲ್ಸ್ ರಾಯ್ಸ್ ಘೋಸ್ಟ್ ಗೋಲ್ಡನ್ ಸನ್‌ಬರ್ಡ್ ಎಡಿಷನ್

ಇನ್ನು ಕಾರಿನ ಒಳಮೈಯು ಸಹ ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ.

English summary
Following the announcement of the one-off Celestial Phantom at the Frankfurt Auto Show Rolls Royce has previewed yet another one-off, model. This is based on the less expensive Phantom. As Rolls Royce has itself stated, almost every car it builds is bespoke, customized according to a customer's tastes.
Story first published: Monday, September 16, 2013, 15:04 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more