ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಸುಜುಕಿ ಎಸ್‌ಯುವಿ ಅನಾವರಣ

Written By:

ಮುಂದಿನ ತಿಂಗಳು ನಡೆಯಲಿರುವ 65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ, ಸುಜುಕಿಯ ಬಹುನಿರೀಕ್ಷಿತ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) iV-4 ಅನಾವರಣಗೊಳ್ಳಲಿದೆ. ಈ ಸಂಬಂಧ ಮಾರುತಿ ಮಾತೃಸಂಸ್ಥೆಯಾದ ಸುಜುಕಿ ಈಗಾಗಲೇ ಟೀಸರ್ ಇಮೇಜ್ ಬಿಡುಗಡೆಗೊಳಿಸಿದೆ.

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಪ್ರತಿಸ್ಪರ್ಧಿಯಾಗಿ ಸುಜುಕಿ ಎಸ್‌ಯುವಿ ಕಾಣಿಸಿಕೊಳ್ಳಲಿದೆ. ಇದು ಸದ್ಯದಲ್ಲೇ ಉತ್ಪಾದಕ ವರ್ಷನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

'ಗ್ರಾಬ್ ಯುವರ್ ಫೀಲ್ಡ್' ಥೀಮ್‌ನಲ್ಲಿ ಸುಜುಕಿ ಐವಿ-4 ಕಾನ್ಸೆಪ್ಟನ್ನು ಅಭಿವೃದ್ಧಿಪಡಿಸಲಾಗಿದೆ. ಸಾಂಪ್ರದಾಯಿಕವಾಗಿ ಸುಜುಕಿ ಎಸ್‌ಯುವಿಗಳಲ್ಲಿ ಆಳವಡಿಸಲಾಗುತ್ತಿರುವ ವೈಶಿಷ್ಟ್ಯಗಳನ್ನು ಇದರಲ್ಲೂ ಆಳವಡಿಸಲಾಗಿದೆ.

ಈ ಬಗ್ಗೆ ಸೆಪ್ಟೆಂಬರ್ 10ರಂದು ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ವಿವರ ನೀಡಲಿದೆ. ಸಜುಕಿಯ ಇತರ ಮಾಡೆಲ್‌ಗಳಾದ, ಆಲ್ಟೊ (ಭಾರತದಲ್ಲಿ ಎ-ಸ್ಟಾರ್), ಸ್ವಿಫ್ಟ್, ಸ್ವಿಫ್ಟ್ ಸ್ಪೋರ್ಟ್, ಎಸ್‌ಎಕ್ಸ್4, ಎಸ್‌ಎಕ್ಸ್4 ಎಸ್-ಕ್ರಾಸ್, ಜಿಮ್ನಿ, ಗ್ರಾಂಡ್ ವಿಟರಾ ಮತ್ತು ಕಿಜಾಶಿ ಆವೃತ್ತಿಗಳು ಸಹ ಪ್ರದರ್ಶನ ಕಾಣುವ ಸಾಧ್ಯತೆಯಿದೆ.

2013 ಸೆಪ್ಟೆಂಬರ್ 10ರಂದು ಆರಂಭವಾಗಲಿರುವ ಫ್ರಾಕ್ ಫರ್ಟ್ ಮೋಟಾರ್ ಶೋ ಸೆಪ್ಟೆಂಬರ್ 22ರ ವರೆಗೆ ಸಾಗಲಿದೆ. ಈ ವಿಶ್ವ ವಿಖ್ಯಾತ ಮೋಟಾರ್ ಶೋದಲ್ಲಿ ಫೆರಾರಿ 458 ಸ್ಪೆಷಲ್, 2014 ಷೆವರ್ಲೆ ಕ್ಯಾಮರೊ ಕನ್ವಿರ್ಟಿಬಲ್, ಬಿಎಂಡಬ್ಲ್ಯು ಕಾನ್ಸೆಪ್ಟ್ ಎಕ್ಸ್5 ಇ ಡ್ರೈವ್ ಹೈಬ್ರಿಡ್ ಹಾಗೂ 2015 ಮರ್ಸಿಡಿಸ್ ಬೆಂಝ್ ಜಿಎಲ್‌ಎ ಕ್ಲಾಸ್ ಸೇರಿದಂತೆ ಹಲವು ನೂತನ ಕಾನ್ಸೆಪ್ಟ್ ಕಾರುಗಳು ಪ್ರದರ್ಶನ ಕಾಣಲಿದೆ.

English summary
Suzuki has announced iv-4 compact SUV. Suzuki iv-4 compact SUV will be unveiled at Frankfurt Auto Show. Suzuki iv-4 compact SUV will rival Duster and EcoSport.
Story first published: Tuesday, August 27, 2013, 10:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark