ಟೊಯೊಟಾದಿಂದ ಹೊಸ ಫೋರ್ಚುನರ್ ಎಟಿ ಲಾಂಚ್

Posted By:

ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಫೋರ್ಚುನರ್ ಪ್ರೀಮಿಯಂ ಎಸ್‌ಯುವಿ ಕಾರಿನ ಫೈವ್ ಸ್ಪೀಡ್ ಆಟೋಮ್ಯಾಟಿಕ್ ವೆರಿಯಂಟ್ ಕಾರನ್ನು ಬಿಡುಗಡೆಗೊಳಿಸಿದೆ. ನೂತನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆರಾಮದಾಯಕ ಚಾಲನೆಗೆ ನೆರವಾಗಲಿದೆ.

ಸದ್ಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎಲ್ಲ ವಾಹನ ತಯಾರಕ ಕಂಪನಿಗಳ ಟ್ರೆಂಡ್ ಆಗಿ ಬಿಟ್ಟಿದೆ. ಪ್ರಮುಖವಾಗಿಯೂ ನಗರ ಪ್ರದೇಶಗಳಲ್ಲಿ ಇದು ಆರಾಮದಾಯಕ ಚಾಲನೆಗೆ ನೆರವಾಗುತ್ತಿದೆ.

ಇದೇ ಸಂದರ್ಭದಲ್ಲಿ ಸ್ಥಿರವಾದ ಬೇಡಿಕೆಯನ್ನು ಪರಿಗಣಿಸಿರುವ ಟೊಯೊಟಾ ಲಿಮಿಟೆಡ್ ಅಡಿಷನ್ ಫೋರ್ಚುನರ್ ಟಿಆರ್‌ಡಿ ಸ್ಪೋರ್ಟಿವೊ ಸ್ಟಾಂಡರ್ಡ್ ವೆರಿಯಂಟ್ ಕೂಡಾ ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button

ಭಾರತೀಯ ರುಪಾಯಿ ಪ್ರಕಾರ 30 ಲಕ್ಷ ಅಸುಪಾಸಿನಲ್ಲಿರುವ ಫೋರ್ಚುನರ್ ಪ್ರೀಮಿಯಂ ಎಸ್‌ಯುವಿ ಸೆಗ್ಮೆಂಟ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದು ಷೆವರ್ಲೆ ಕಾಪ್ಟಿವಾ ಹಾಗೂ ಹೊಂಡಾ ಸಿಆರ್‌ವಿಗಳಂತಹ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿವೆ. ಫೋರ್ಚುನರ್ ಲಾಂಚ್ ಆದ ಬಳಿಕ ಈ ವರೆಗೆ 41,000 ಯುನಿಟ್ ಮಾರಾಟವಾಗಿದೆ ಎಂದು ಟೊಯೊಟಾ ಪ್ರಕಟಿಸಿದೆ.

ಉತ್ತಮ ನಿರ್ವಹಣೆಯಿಂದಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಫೋರ್ಚುನರ್ ಯಶಸ್ವಿಯಾಗಿದೆ. ಎಸ್‌ಯುವಿ ಉತ್ಸಾಹಿಗಳನ್ನು ಖುಷಿಪಡಿಸುವುದಕ್ಕಾಗಿ ಫೋರ್ಚುನರ್ ಟಿಆರ್‌ಡಿ ಸ್ಪೋರ್ಟಿವೊ ತಯಾರಿಸಲಾಗಿದೆ. ಹೆಚ್ಚು ಏರೋಡೈನಾಮಿಕ್ ಡಿಸೈನ್ ಹೊಂದಿರುವ ಈ ಕಾರು ಮೂರು ಡ್ಯುಯಲ್ ಟೋನ್ ಎಕ್ಸ್‌ಟೀರಿಯರ್ ಕಲರ್ ವೆರಿಯಂಟ್‌ಗಳಲ್ಲಿ ಲಭಿಸಲಿದೆ.

ಇದರ ಏರೋ ಡೈನಾಮಿಕ್ ಫ್ರಂಟ್ ಬಂಪರ್, ರಿಯರ್ ರೂಫ್ ಸ್ಪಾಯ್ಲರ್, ರಿಯರ್ ಬಂಪರ್ ಸ್ಪಾಯ್ಲರ್ ಮತ್ತು ಟಿಆರ್‌ಡಿ ಸ್ಪೋರ್ಟಿವಾ ಬಾಡ್ಜ್ ವಿಶೇಷವಾಗಿಸಿದೆ. ಸೂಪರ್ ವೈಟ್ ಪ್ಲಸ್ ಗ್ರೇ, ಸಿಲ್ವರ್ ಪ್ಲಸ್ ಗ್ರೇ ಮತ್ತು ವೈಟ್ ಪೀಯರ್ಲ್ ಮೈಕಾ ಪ್ಲಸ್ ಗ್ರೇ ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

English summary
Toyota Kirloskar Motor (TKM) has launched a five speed automatic variant of the Fortuner premium SUV. The new gearbox is said to provide enhanced drive feel along with comfort. Toyota has also made the limited edition Fortuner TRD Sportivo as a standard variant following consistent demand.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark