ಟೊಯೊಟಾ ಇನ್ನೋವಾಗೆ ದರ ಏರಿಕೆ ಬಿಸಿ

By Nagaraja

ಟೊಯೊಟಾ ಕಿರ್ಲೊಸ್ಕರ್ ಸಂಸ್ಥೆಯು ತನ್ನ ಜನಪ್ರಿಯ ಇನ್ನೋವಾ ಸೇರಿದಂತೆ ತನ್ನೆಲ್ಲ ಆವೃತ್ತಿಗಳಿಗೆ ದರ ಏರಿಕೆಗೊಳಿಸಿದೆ. ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಟೊಯೊಟಾ, ಇನ್ನೋವಾ ಆವೃತ್ತಿಗೆ ಗರಿಷ್ಠ 24,000 ರು.ಗಳ ವರೆಗೆ ಬೆಲೆ ಏರಿಕೆ ಮಾಡಲಾಗಿದೆ ಎಂದಿದೆ.

ಸೆಪ್ಟೆಂಬರ್ 21ರಿಂದ ಪರಿಷ್ಕೃತ ದರ ಅನ್ವಯವಾಗಲಿದೆ. ಡಾಲರ್ ಎದುರಿಗೆ ರುಪಾಯಿ ಮೌಲ್ಯ ಕುಸಿತ ಕಂಡಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ರುಪಾಯಿ ಅಪಮೌಲ್ಯ ಹಾಗೂ ಹಣದುಬ್ಬರ ವ್ಯತ್ಯಯದಿಂದಾಗಿ ಕಾರಿಗೆ ಬೇಕಾಗಿರುವ ಪರಿಕರಗಳ ಬೆಲೆಗಳಲ್ಲಿ ಭಾರಿ ವರ್ಧನೆಯುಂಟಾಗಿದೆ. ಈ ನಿಟ್ಟಿನಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟಾರ್ ತಿಳಿಸಿದೆ.

ಪ್ರಸಕ್ತ ತಿಂಗಳಾರಂಭದಲ್ಲೇ ಫೋರ್ಡ್, ತನ್ನ ನೆಚ್ಚಿನ ಇಕೊಸ್ಪೋರ್ಟ್ ಆವೃತ್ತಿಗೆ ದರ ಏರಿಕೆಗೊಳಿಸಿತ್ತು. ಇದರ ಬೆನ್ನಲ್ಲೇ ಟೊಯಾಟಾ ಕೂಡಾ ದರ ಏರಿಕೆ ತಂತ್ರದೊಂದಿದೆ ಮುಂದೆ ಬಂದಿದೆ.


ಟೊಯೊಟಾ ಪರಿಷ್ಕೃತ ದರ ಮಾಹಿತಿ ಇಂತಿದೆ:

ಎಟಿಯೋಸ್ ಲಿವಾ:
ಹಿಂದಿನ ದರ: 4.46 ಲಕ್ಷ ರು.ಗಳಇಂದ 6.59 ಲಕ್ಷ ರು.ಗಳ ವರೆಗೆ
ಬೆಲೆ ಏರಿಕೆ: 4500-8600 ರು.

ಎಟಿಯೋಸ್ ಸೆಡಾನ್:
ಹಿಂದಿನ ದರ: 5.45 ಲಕ್ಷ ರು.ಗಳಿಂದ 8.15 ಲಕ್ಷ ರು.ಗಳ ವರೆಗೆ
ಬೆಲೆ ಏರಿಕೆ: 4,000-8,000 ರು.

ಟೊಯೊಟಾ ಇನ್ನೋವಾ:
ಹಿಂದಿನ ದರ: 9.77 ಲಕ್ಷ ರು.ಗಳಿಂದ 14.42 ಲಕ್ಷ ರು.ಗಳ ವೆರೆಗೆ
ಬೆಲೆ ಏರಿಕೆ: 7,000-11,000 ರು.

ಕರೊಲ್ಲಾ ಆಲ್ಟೀಸ್ ಸೆಡಾನ್:
ಹಿಂದಿನ ದರ: 11.74 ಲಕ್ಷ ರು.ಗಳಿಂದ 15.89 ಲಕ್ಷ ರು.ಗಳ ವರೆಗೆ
ಬೆಲೆ ಏರಿಕೆ: 11,000-24,000 ರು.

Most Read Articles

Kannada
English summary
Toyota Kirloskar has become the latest Indian car manufacturer to hike prices across its lineup. The automaker has announced that prices across its product lineup will be increased by a maximum amount of Rs 24,000. Changes will be applicable starting from September 21.
Story first published: Thursday, September 19, 2013, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X