ವೋಡಾಫೋನ್ ನಿಯಂತ್ರಣದಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಕಾರು

Written By:
ಈ ಸುದ್ದಿ ಕೇಳಿ ಗಾಬರಿಯಾಗಬೇಡಿರಿ! ವಿಷಯ ಇಷ್ಟೇ. ವೋಡಾಫೋನ್ ಜತೆ ಕೈಜೋಡಿಸಿಕೊಂಡಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್, ಸ್ಮಾರ್ಟ್‌ಫೋನ್ ಮುಖಾಂತರ 'ಇ2ಒ' ವಿದ್ಯುತ್ ಚಾಲಿತ ಕಾರನ್ನು ನಿಯಂತ್ರಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಪಡಿಸಿದೆ.

ಕಳೆದ ತಿಂಗಳಷ್ಟೇ ಮಹೀಂದ್ರ ನೂತನ ಎಲೆಕ್ಟ್ರಿಕ್ ಕಾರು ಲಾಂಚ್ ಆಗಿತ್ತು. ಇದೀಗ ವೋಡಾಫೋನ್‌ನ 'ಮೆಷಿನ್ ಟು ಮೆಷಿನ್' ಸಂವಹನ ಸೇವೆ ಮುಖಾಂತರ ಮಹೀಂದ್ರ ಇ2ಒ ನಿಯಂತ್ರಣ ಮಾಡಬಹುದಾಗಿದೆ.

ಇದರ ಮೂಲಕ ರಿಯಲ್ ಚಾರ್ಜ್ ಟೈಮ್, ಬ್ಯಾಟರಿ ಹಾಗೂ ಎಷ್ಟು ದೂರ ಸಾಗಲಿದೆ ಎಂಬುದನ್ನು ಸ್ಮಾರ್ಟ್ ಫೋನ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಕಾರಿನ ಒಳಗಿನ ತಾಪಮಾನ ನಿಯಂತ್ರಣ ಮಾಡಲು ಹಾಗೆಯೇ ರಿಮೋಟ್ ಲಾಕ್ ಹಾಗೂ ಅನ್‌ಲಾಕ್ ಸೌಲಭ್ಯ ಲಭ್ಯವಿದೆ. ಅಂತೆಯೇ ನಿಮ್ಮ ಹತ್ತಿರ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕಂಡುಹುಡುಕಬಹುದು.

ಈ ನೂತನ ತಂತ್ರಜ್ಞಾನವು ನೀವು ಕಾರಿನ ಡೋರನ್ನು ಲಾಕ್ ಮಾಡದೇ ತೆರಳಿದ್ದಲ್ಲಿ ಅಥವಾ ಪಾರ್ಕಿಂಗ್ ಬ್ರೇಕ್ ಆಳವಡಿಸುವುದನ್ನು ಮರೆತು ಹೋಗಿದ್ದಲ್ಲಿ ಎಚ್ಚರಿಕೆಯನ್ನು ರವಾನಿಸಲಿದೆ. ಈ ವ್ಯವಸ್ಥೆ ಮೂಲಕ ಕಾರಿನ ಸ್ಥಿತಿಗತಿ ಬಗ್ಗೆಯೂ ಗ್ರಾಹಕರಿಗೆ ಮಹೀಂದ್ರ ತಾಂತ್ರಿಕ ಸಹಾಯ ತಂಡವು ನೆರವು ಮಾಡಲಿದೆ.

ಪ್ರಸ್ತುತ ಮಹೀಂದ್ರ ವಿದ್ಯುತ್ ಚಾಲಿತ ಕಾರಿನಲ್ಲಿ ಫೋಡಾಫೋನ್ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸೌಲಭ್ಯವನ್ನು ಬಳಕೆ ಮಾಡಬಹುದಾಗಿದೆ.

English summary
Mahindra has partnered with Vodafone, where the latter will provide machine to machine (m2m) communication services for the e2o electric car. Through Vodafone m2m services e2o owners will be able to perform various functions remotely using a smartphone or any device connected to the internet. A list of all the features that can be controlled can be found in the detailed press release below.
Story first published: Friday, April 12, 2013, 12:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark