ನಿರೀಕ್ಷಿಸಿ ಫೋಕ್ಸ್‌ವ್ಯಾಗನ್‌ ಬಜೆಟ್ ಕಾರು ಬ್ರಾಂಡ್

Written By:

ವಾಹನ ಪ್ರೇಮಿಗಳಿಗೆ ಮತ್ತೊಂದು ಖುಷಿ ಸುದ್ದಿ ಬಂದಿದ್ದು, ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್ ಹೊಚ್ಚ ಹೊಸತನದಿಂದ ಕೂಡಿರುವ ಬಜೆಟ್ ಕಾರು ಬ್ರಾಂಡ್ ಆರಂಭಿಸಲು ಯೋಜನೆ ಇರಿಸಿಕೊಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಆಟೋ ವಲಯದ ವರದಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ನೂತನ ಬಜೆಟ್ ಕಾರು ಬ್ರಾಂಡ್ ಇನ್ನೊಂದು ವರ್ಷದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ಮೂಲಕ ಗುಣಮಟ್ಟದ ಕಾರುಗಳನ್ನು ಗ್ರಾಹಕರ ಕೈಗೆಟುವ ದರಗಳಲ್ಲಿ ತಲುಪಿಸುವ ಬೃಹತ್ ಯೋಜನೆಯನ್ನು ಫೋಕ್ಸ್‌ವ್ಯಾಗನ್ ಹೊಂದಿದೆ.

VW to Indroduce new budget brand

ಪ್ರಸ್ತುತ ಯೋಜನೆಯು ಸದ್ಯ ಪ್ರಾಥಮಿಕ ಹಂತದಲ್ಲಿದ್ದು, ಈ ಬಗೆಗಿನ ಸಾಧಕ ಭಾದಕಗಳ ಕುರಿತಾಗಿನ ಸಂಶೋಧನೆ ಪ್ರಗತಿಯಲ್ಲಿದೆ ಎಂದು ಫೋಕ್ಸ್‌ವ್ಯಾಗನ್ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಹೆನ್ಜ್ ಜಾಕಬ್ ನೆಸ್ಸರ್ ವಿವರಿಸಿದ್ದಾರೆ.

ಈ ಬಗ್ಗೆ ಟೊಕಿಯೊ ಮೋಟಾರ್ ಶೋದಲ್ಲಿ ಪ್ರತಿಕ್ರಿಸಿರುವ ಜಾಕಬ್, ಬಜೆಟ್ ಕಾರು ಬ್ರಾಂಡ್ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ನಮ್ಮ ಮಾನ್ಯತೆಗೆ ತಕ್ಕ ಸುರಕ್ಷತೆ, ಹ್ಯಾಂಡ್ಲಿಂಗ್ ಹಾಗೂ ಆರಾಮದಾಯಕತೆ ಆಳವಡಿಸಲು ಸಾಧ್ಯವಾದ್ಧಲ್ಲಿ ಮಾತ್ರ ಇದನ್ನು ಹೊರತರಲಿದ್ದೇವೆ ಎಂದಿದ್ದಾರೆ.

English summary
The Volkswagen Group’s budget car plans are likely to be revealed within the next 12 months.
Story first published: Friday, November 22, 2013, 15:12 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark