ದೆಹಲಿಯಲ್ಲಿ ರೆನೊ ವಿನೂತನ ಕಾನ್ಸೆಪ್ಟ್ ಕಾರು ಅನಾವರಣ

Written By:

ರಾಷ್ಟ್ರ ರಾಜಧಾನಿ ನವದೆಹಲಿ ಮಗದೊಂದು ಅತ್ಯಾಕರ್ಷಕ ಕಾರು ಅನಾವರಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಗ್ರೇಟರ್ ನೋಯ್ಡಾದಲ್ಲಿ ಸಾಗುತ್ತಿರುವ 12ನೇ ಇಂಡಿಯಾ ಆಟೋ ಎಕ್ಸ್ ಪೋ 2014ರಲ್ಲಿ ರೆನೊ ಸಂಸ್ಥೆಯು ನೂತನ ಕ್ವಿಡ್ (KWID) ಕಾನ್ಸೆಪ್ಟ್ ಕಾರನ್ನು ಆನಾವರಣಗೊಳಿಸಿದೆ.

2014 ಆಟೋ ಎಕ್ಸ್ ಪೋ ಲೈವ್

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ರೆನೊ ಸಂಸ್ಥೆಯು, ನೂತನ ಕ್ವಿಡ್ ಕಾನ್ಸೆಪ್ಟ್ ಕಾರು ಸಂಸ್ಥೆಯ ಭಾರತದಲ್ಲಿನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂದಿದೆ. ಪ್ರಮುಖವಾಗಿಯೂ ಭಾರತದಂತಹ ಯುವ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ವಿಡ್ ಕಾನ್ಸೆಪ್ಟ್ ಕಾರನ್ನು ರಚಿಸಲಾಗಿದೆ. ಇದರ ವಿನ್ಯಾಸ ಮೋಜಿಗೆ ಕಾರಣವಾದರೂ ಗರಿಷ್ಠ ತಂತ್ರಗಾರಿಕೆಗಳನ್ನು ಬಳಸಲಾಗಿದೆ.

To Follow DriveSpark On Facebook, Click The Like Button
ದೆಹಲಿಯಲ್ಲಿ ರೆನೊ ವಿನೂತನ ಕಾನ್ಸೆಪ್ಟ್ ಕಾರು ಅನಾವರಣ

ರೆನೊದ ಲೈಫ್ ಸೈಕಲ್ ತಲಹದಿಯ ಡಿಸೈನ್ ಭಾಗವಾಗಿ ವಿನ್ಯಾಸ ರಚಿಸಲಾಗಿದೆ. ಇದರ ಇಂಟಿರಿಯರ್ ಸಹ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದು, ಹಕ್ಕಿ ಗೂಡಿನಂತಹ ರಚನೆ ಒಳಗೊಂಡಿದೆ.

ದೆಹಲಿಯಲ್ಲಿ ರೆನೊ ವಿನೂತನ ಕಾನ್ಸೆಪ್ಟ್ ಕಾರು ಅನಾವರಣ

ರೆನೊ ಸಂಸ್ಥೆಯ ಜಾಗತಿಕ ಯೋಜನೆಯ ಅಂಗವಾಗಿ ನೂತನ ಕ್ವಿಡ್ ಅನಾವರಣಗೊಂಡಿದೆ. ಈ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಪ್ರಗತಿ ಸಾಧಿಸುವ ಯೋಜನೆ ಹೊಂದಿದೆ.

ದೆಹಲಿಯಲ್ಲಿ ರೆನೊ ವಿನೂತನ ಕಾನ್ಸೆಪ್ಟ್ ಕಾರು ಅನಾವರಣ

ಒಟ್ಟು ಐದು ಮಂದಿಗೆ (3+2) ಕುಳಿತುಕೊಳ್ಳಬಹುದಾದ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ರೆನೊ ಕ್ವಿಡ್‌ನಲ್ಲಿ ಚಾಲಕನಿಗೆ ನಡುಭಾಗದಲ್ಲಿ ಸಿಟ್ಟಿಂಗ್ ವ್ಯವಸ್ಥೆಯಿರುವುದು ವಿಶೇಷವಾಗಿದೆ.

ದೆಹಲಿಯಲ್ಲಿ ರೆನೊ ವಿನೂತನ ಕಾನ್ಸೆಪ್ಟ್ ಕಾರು ಅನಾವರಣ

ಅಂದ ಹಾಗೆ ಇದರಲ್ಲಿ 1.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗಿದ್ದರೂ ಸದ್ಯದಲ್ಲಿ ನಿರ್ಮಾಣ ವರ್ಷನ್ ಪಡೆದುಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.

English summary
Renault has on display a really interesting and fun looking concept car at the Auto Expo called the KWID.
Story first published: Wednesday, February 5, 2014, 18:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark