ಭಾರತಕ್ಕೆ ಬರುತ್ತಂತೆ 2014 ಮಿನಿ ಕೂಪರ್

Written By:

ಕೊನೆಗೂ ಕಾರು ಪ್ರಿಯರಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಇದುವರೆಗೆ ಟೀಸರ್ ಇಮೇಜ್ ತೋರಿಸುವ ಮೂಲಕ ಕಾರು ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಮಿನಿ, ನೂತನ ತಲೆಮಾರಿನ ಕಾರನ್ನು ಅನಾವರಣಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ರಿಟನ್‌ನ ಓಕ್ಸ್‌ಫರ್ಡ್ ಘಟಕದಲ್ಲಿ ಮೂರನೇ ತಲೆಮಾರಿನ ಮಿನಿ ಕಾರನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ವಿಶೇಷವೆಂದರೆ ಬಿಎಂಡಬ್ಲ್ಯು ಮಾಲಿಕತ್ವದ 2014 ಮಿನಿ ವಿಭಿನ್ನ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಅವುಗಳಲ್ಲಿ ಕನ್ವರ್ಟಿಬಲ್, ಕ್ಲಬ್ ಮ್ಯಾನ್, ಕಂಟ್ರಿ ಮ್ಯಾನ್, ಫೇಸ್‌ಮ್ಯಾನ್, ಕೂಪೆ ಮತ್ತು ರೊಡ್‌ಸ್ಟರ್ ಪ್ರಮುಖವಾಗಿದೆ.

2014 ಮಿನಿ ಕೂಪರ್

ಈ ಹಿಂದಿನ ಆವೃತ್ತಿಗಿಂತಲೂ 2014 ಮಿನಿ ಕೂಪರ್ ಗಾತ್ರದಲ್ಲಿ ಸ್ವಲ್ಪ ದೊಡ್ಡದಿರಲಿದೆ. ನೂತನ ಮಿನಿ 98 ಎಂಎಂ ಉದ್ದ, 28 ಎಂಎಂ ವೀಲ್ ಬೇಸ್, 44 ಎಂಎಂ ಅಗಲ ಮತ್ತು 7ಎಂಎಂ ಎತ್ತರ ಹೊಂದಿರಲಿದೆ. ಹಾಗೆಯೇ 211 ಲೀಟರ್ ಬೂಟ್ ಸ್ಪೇಸ್ ಹೊಂದರಲಿದೆ.

2014 ಮಿನಿ ಕೂಪರ್

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಆಧುನಿಕತೆಯ ಭಾಗವಾಗಿ ಕೆಲವೊಂದು ಮಾರ್ಪಾಡುಗಳನ್ನು ತರಲಾಗಿದೆ. ಹಾಗಿದ್ದರೂ ಸಾಂಪ್ರಾದಾಯಕ ಮಿನಿ ವಿನ್ಯಾಸಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡಿಲ್ಲ.

2014 ಮಿನಿ ಕೂಪರ್

ಪರಿಷ್ಕೃತ ಗ್ರಿಲ್, ಹೆಡ್‌ಲೈಟ್, ಎಲ್‌ಇಡಿ ಡೇ ಟೈಮ್ ಲೈಟ್‌ಗಳು ಕ್ಲಾಸಿಕ್ ಮಿನಿ ವಿನ್ಯಾಸದ ಅಂದತೆಗೆ ಕಾರಣವಾಗಿದೆ.

2014 ಮಿನಿ ಕೂಪರ್

ಇನ್ನು ಕಾರಿನ ಆಂತರಿಕ ಭಾಗಗಳಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದೆ. ಉದಾಹರಣೆ ಪವರ್ ವಿಂಡೋ ನಿಯಂತ್ರಣವನ್ನು ಕಾರಿನ ಕೇಂದ್ರ ಭಾಗದಿಂದ ಡೋರ್ ಪ್ಯಾನೆಲ್‌ಗೆ ವರ್ಗಾಯಿಸಲಾಗಿದೆ.

ಇದು ಮಿಡ್, ಸ್ಪೋರ್ಟ್ ಮತ್ತು ಗ್ರೀನ್ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರಲಿದೆ.

2014 ಮಿನಿ ಕೂಪರ್

ಬಿಎಂಡಬ್ಲ್ಯು ಹೊಸತಾದ ಫ್ರಂಟ್ ಮತ್ತು ಆಲ್ ವೀಲ್ ಡ್ರೈವ್ ಫ್ಯಾಟ್‌ಫಾರ್ಮ್‌ನಲ್ಲಿ 2014 ಮಿನಿ ಮಾದರಿಗಳು ತಯಾರಾಗಲಿದೆ.

2014 ಮಿನಿ ಕೂಪರ್

ಇದು ಒಟ್ಟಾರೆ ಮೂರು ಎಂಜಿನ್ ಆಯ್ಕೆಗಳಲ್ಲಿ ಆಗಮನವಾಗಲಿದೆ. 1.5 ಲೀಟರ್ 3 ಸಿಲಿಂಡರ್ ಪೆಟ್ರೋಲ್, 1.5 ಲೀಟರ್ 3 ಸಿಲಿಂಡರ್ ಡೀಸೆಲ್ ಮತ್ತು 2.0 ಲೀಟರ್ 4 ಸಿಲಿಂಡರ್ ಪೆಟ್ರೋಲ್‌ನಲ್ಲಿ ಆಗಮನವಾಗಲಿದೆ.

2014 ಮಿನಿ ಕೂಪರ್

ಮೇಲೆ ಸೂಚಿಸಲಾದ ಎಲ್ಲ ಎಂಜಿನ್‌ಗಳುಮಿನಿಯ ಟ್ವಿನ್ ಪವರ್ ಟರ್ಬೊ ಟೆಕ್ನಾಲಜಿ ಮತ್ತು ಡೈರಕ್ಟ್ ಇಂಜೆಕ್ಷನ್ ತಂತ್ರಗಾರಿಕೆ ಪಡೆದಿರಲಿದೆ.

2014 ಮಿನಿ ಕೂಪರ್

ನೂತನ ಮಿನಿ ಕೂಪರ್ 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 134 ಅಶ್ವಶಕ್ತಿ (219 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

2014 ಮಿನಿ ಕೂಪರ್

ಇದು ಕೇವಲ 7.9 ಸೆಕೆಂಡುಗಳಲ್ಲಿ ತಾಸಿಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

2014 ಮಿನಿ ಕೂಪರ್

ಮಿನಿ ಕೂಪರ್ ಡಿ

ಎಂಜಿನ್: 1.5 ಲೀಟರ್ ಡೀಸೆಲ್

ವೇಗವರ್ಧನೆ: 9.2 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ.

2014 ಮಿನಿ ಕೂಪರ್

ಮಿನಿ ಕೂಪರ್ ಎಸ್

ಎಂಜಿನ್: 2.0 ಲೀಟರ್ ಪೆಟ್ರೋಲ್

ವೇಗವರ್ಧನೆ: 6.8 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ.

2014 ಮಿನಿ ಕೂಪರ್

ಇನ್ನು ಮಿನಿ ನೂತನ ಕಾರು ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

English summary
After being revealed through leaked images dozens of times the all new, third generation Mini Cooper has been officially unveiled. The unveiling took place at Mini's Cowley manufacturing plant in Oxford, UK.
Story first published: Tuesday, November 19, 2013, 15:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark