2014 ಆಟೋ ಎಕ್ಸ್ ಪೋ; ಟಿವಿಎಸ್ ಡ್ರೇಕನ್ ಕಾನ್ಸೆಪ್ಟ್ ಅನಾವರಣ

By Nagaraja

ಸಣ್ಣ ಸಾಮರ್ಥ್ಯದ ಕ್ರೀಡಾ ಬೈಕ್‌ಗಳ ವಿಭಾಗಕ್ಕೆ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್ ಸಹ ಕಾಲಿಟ್ಟಿದೆ. ಹೌದು, 2014 ಆಟೋ ಎಕ್ಸ್ ಪೋದಲ್ಲಿ ಟಿವಿಎಸ್ ಡ್ರೇಕನ್ ಎಕ್ಸ್21 ಕಾನ್ಸೆಪ್ಟ್ ಪ್ರದರ್ಶಿಸಲಾಗಿದೆ.

ಟಿವಿಎಸ್ ಡ್ರೇಕನ್ 250 ಸಿಸಿ ಕಾನ್ಸೆಪ್ಟ್ ಬೈಕ್ ಆಗಿರಲಿದೆ. ಇದು ತೀಕ್ಷ್ಣವಾದ ವಿನ್ಯಾಸ ಪಡೆದುಕೊಂಡಿದ್ದು, 250 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ.


ತಮ್ಮ ನಿಕಟ ಪ್ರತಿಸ್ಪರ್ಧಿಗಳಾದ ಬಜಾಜ್ ಹಾಗೂ ಹೀರೊ ಅನುಕ್ರಮವಾಗಿ ಕೆಟಿಎಂ ಹಾಗೂ ಇಬಿಆರ್ ನೆರವು ಗಿಟ್ಟಿಸಿಕೊಳ್ಳುವ ಮೂಲಕ ನಿರ್ವಹಣಾ ಮೋಟಾರು ಸೈಕಲುಗಳನ್ನು ಅಭಿವೃದ್ಧಿಪಡಿಸಿತ್ತು. ಇದರಿಂದ ಹೊರತಾಗಿರುವ ಟಿವಿಎಸ್ ಸ್ವತಂತ್ರವಾಗಿ ಡ್ರೇಕನ್‌ನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ.

ಇದು 250 ಸಿಸಿ, ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಯುನಿಟ್‌ನಿಂದ ನಿಯಂತ್ರಿಸಲ್ಪಡಲಿದ್ದು, ಆರು ಸ್ಪೀಡ್ ಟ್ರಾನ್ಸ್‌ಮಿಷನ್ ಸಹ ಒಳಗೊಂಡಿರಲಿದೆ. ಹಾಗೆಯೇ ಎಲ್‌ಇಡಿ ಹೆಡ್‌ಲೈಟ್ ಜತೆ ಡೇ ಟೈಮ್ ರನ್ನಿಂಗ್ ಲ್ಯಾಂಪ್, ಎದುರುಗಡೆ ಯುಎಸ್‌ಡಿ ಟೆಲಿಸ್ಕಾಪಿಕ್ ಫೋರ್ಕ್ ಹಾಗೂ ಹಿಂದುಡೆ ಮೊನೊಶಾಕ್ ಪಡೆಯಲಿದೆ. ಇನ್ನುಳಿದಂತೆ ಮುಂದುಗಡೆ ಡಿಸ್ಕ್ ಬ್ರೇಕ್ ಮತ್ತು ಹಿಂದುಗಡೆ ಡಿಸ್ಕ್ ಜತೆಗೆ ಎಬಿಎಸ್ ಪಡೆಯಲಿದೆ.

TVS Draken
Most Read Articles

Kannada
English summary
TVS Motors, the one company that was yet to get into the small capacity sports bike segment has finally taken the plunge with the Draken X21 concept. Displayed at the Auto Expo 2014, the Draken is a 250cc concept motorcycle.
Story first published: Thursday, February 6, 2014, 17:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X